ಕಂಪ್ಲಿ: ಪಟ್ಟಣದ ಕೋಟೆ ಪಂಪಾಪತಿ ಹಾಗೂ ನಂ.10ಮುದ್ದಾಪುರ ಗ್ರಾಮದ ಮಾರೆಮ್ಮ ದೇವಸ್ಥಾನ ಬಳಿ ಬುಧವಾರ ಛತ್ರಪತಿ ಶಿವಾಜಿ ಜಯಂತ್ಯುತ್ಸವ ಸಂಭ್ರಮದಿಂದ ಆಚರಿಸಲಾಯಿತು.
ಕರ್ನಾಟಕ ಮರಾಠ ಕ್ಷತ್ರಿಯ ಸಮಾಜದ ತಾಲೂಕು ಅಧ್ಯಕ್ಷ ಆರೇರು ಗಣೇಶ ಮೌರ್ಯ ಮಾತನಾಡಿ, ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ವೃತ್ತ ನಿರ್ಮಿಸಬೇಕು. ಮರಾಠ ಕ್ಷತ್ರಿಯ ಸಮುದಾಯ ಭವನ ನಿರ್ಮಿಸಲು ನಿವೇಶನಕ್ಕಾಗಿ ಹಲವು ವರ್ಷಗಳಿಂದ ಒತ್ತಾಯಿಸಿದ್ದರೂ ಈಡೇರಿಲ್ಲ. ರಾಜ್ಯದ ಮರಾಠ ಕ್ಷತ್ರಿಯರು ಹಿಂದುಳಿದಿದ್ದು ಪ್ರವರ್ಗ ಮೂರರ ಬದಲಿಗೆ 2ಎ ಮೀಸಲಾತಿ ನೀಡಬೇಕು. ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಕೋಟೆಯ ಮರಾಠಿ ವೆಂಕೋಬಣ್ಣ, ಡಾ.ರಮೇಶ ಶಿಂಧೆ, ಸುಭಾಸ್, ವೀರೇಶ್, ಬಸವರಾಜ, ಶ್ರೀನಿವಾಸ್ ನಂ.10 ಮುದ್ದಾಪುರದ ಜಡೇಶ್, ಚಿಕ್ಕಬಸವ ಇತರರಿದ್ದರು.