Wednesday, 12th December 2018  

Vijayavani

ಅಂತೂ ಹೊರಬಿತ್ತು ಮಧ್ಯಪ್ರದೇಶದ ಫಲಿತಾಂಶ: ಅತಂತ್ರ ರಾಜ್ಯದಲ್ಲಿ ಯಾರಿಗೆ ಅಧಿಕಾರ?        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಮಾಡಲು ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದಲೂ ಹಕ್ಕು ಮಂಡನೆ        ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತೆಯ ಕುರಿತು ಚರ್ಚಿಸಲು ರಾಜ್ಯಸಭೆಯಲ್ಲಿ ಸಮಯ ಕೋರಿದ ಟಿಎಂಸಿ        ರಾಹುಲ್​ ಗಾಂಧಿಯನ್ನು ದೇಶ ಒಪ್ಪಿಕೊಳ್ಳುತ್ತಿದೆ ಎಂದ ಎಂಎನ್​ಎಸ್​ ವರಿಷ್ಠ ರಾಜ್​ ಠಾಕ್ರೆ        ತೆಲಂಗಾಣದ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಕೆ. ಚಂದ್ರಶೇಖರ್​ ರಾವ್​       
Breaking News

ಠಾಣೆಯಲ್ಲಿ ಮರಳು ಸಾಗಾಟ ಆರೋಪಿ ಮೃತ, ಆಕ್ರೋಷಿತ ಸ್ಥಳೀಯರಿಂದ ಮುತ್ತಿಗೆ

Sunday, 05.02.2017, 12:24 PM       No Comments

ಗದಗ: ಅಮಾಯಕನನ್ನು ಪೊಲೀಸರು ಹೊಡೆದು ಸಾಯಿಸಿದ್ದಾರೆ. ತಕ್ಷಣ ಪಿಎಸ್​ಐ ಸ್ಥಳಕ್ಕೆ ಆಗಮಿಸಬೇಕು. ಅಶೋಕ ಗೋಣಿಗೆ ಸಾಯುವ ಹಾಗೆ ಹೊಡೆದ ಪೊಲೀಸ್ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಬೇಕು ಎಂದು ಪಟ್ಟು ಹಿಡಿದಿರುವ ಸ್ಥಳೀಯರು ಲಕ್ಷೆ್ಮೕಶ್ವರ ಠಾಣೆಗೆ ಮುತ್ತಿಗೆ ಹಾಕಿದ್ದು, ಪೀಠೋಪಕರಣಗಳಿಗೆ ಹಾನಿ ಮಾಡಿ ಬೆಂಕಿ ಹಚ್ಚಿದ್ದಾರೆ. ಪೊಲೀಸ್ ಜೀಪು ಸೇರಿದಂತೆ ಠಾಣೆ ಸಂಪೂರ್ಣವಾಗಿ ಸುಟ್ಟು ಹೋಗಿದೆ.

ಶಿರಹಟ್ಟಿ ತಾಲೂಕಿನ ಲಕ್ಷೆ್ಮೕಶ್ವರದಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿ ಬಂಧಿತ ಚಾಲಕ ಅಶೋಕ ಗೋಣಿ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ. ಅಶೋಕ ಅವರನ್ನು ಪೊಲೀಸರು ಹೊಡೆದು ಸಾಯಿಸಿದ್ದಾರೆ ಎಂಬ ಕಾರಣಕ್ಕೆ ಕುಪಿತಗೊಂಡ ಸ್ಥಳೀಯರು ಲಕ್ಷೇ್ಮೕಶ್ವರ ಠಾಣೆ ಮುತ್ತಿಗೆ ಹಾಕಿದ್ದಾರೆ. ಪೊಲೀಸರನ್ನು ಅಟ್ಟಾಡಿಸಿದ ಆಕ್ರೋಶಿತ ಜನ ಜೀಪಿಗೆ ಬೆಂಕಿ ಹಚ್ಚಿದ್ದಾರೆ. ಸ್ಥಳೀಯರಿಂದ ತಪ್ಪಿಸಿಕೊಂಡ ಪೊಲೀಸರು ಅಲ್ಲಿಂದ ಪರಾರಿಯಾಗಿದ್ದಾರೆ. ಅಗ್ನಿ ನಂದಿಸಲು ಆಗಮಿಸಿದ ಅಗ್ನಿಶಾಮಕ ದಳದವರನ್ನು ಠಾಣೆ ಆವರಣ ಪ್ರವೇಶಿಸದಂತೆ ತಡೆದಿದ್ದಾರೆ. ಬಾದಾಮಿಯಲ್ಲು ಪ್ರತಿಭಟನೆ ಉದ್ಭವಿಸಿದೆ.

ಅಕ್ರಮ ಮರಳು ಸಾಗಟದಲ್ಲಿ ಭಾಗಿಯಾಗಿದ್ದಾನೆ ಎಂಬ ಕಾರಣಕ್ಕೆ ಶನಿವಾರ ಅಶೋಕ ಗೋಣಿಯವರನ್ನು ಬಂಧಿಸಲಾಗಿತ್ತು. ಪೊಲೀಸರು ಥಳಿಸದ ಪರಿಣಾಮ ಶನಿವಾರ ರಾತ್ರಿ ಠಾಣೆಯಲ್ಲೇ ಮೃತಪಟ್ಟಿದ್ದಾನೆ. ರಾತ್ರೋ ರಾತ್ರಿ ಶವವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಆರೋಪಿಸಿದ ಅಶೋಕ ಗೋಣಿ ಸಂಬಂಧಿಕರು ಶವವನ್ನು ಪೊಲೀಸ್ ಠಾಣೆ ಎದುರು ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭ ಪೊಲೀಸ್ ಜೀಪ್​ನ ಗ್ಲಾಸ್ ಒಡೆಯಲಾಗಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ.

-ಏಜೆನ್ಸೀಸ್

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿ)

 

<

Leave a Reply

Your email address will not be published. Required fields are marked *

Back To Top