ಮದ್ದೂರು: ಮನ್‌ಮುಲ್‌ಗೆ ಫೆ. 2 ರಂದು ಚುನಾವಣೆ ಘೋಷಣೆಯಾಗಿದೆ. ಇಂದಿನಿಂದಲೇ ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಯಾವುದೇ ಪಕ್ಷದ ಚಿಹ್ನೆ ಇರುವುದಿಲ್ಲ, ಪಕ್ಷದ ಪರವಾಗಿ ಬೆಂಬಲಿತ ವ್ಯಕ್ತಿಗಳು ಸ್ಪರ್ಧಿಸಲಿದ್ದಾರೆ. ಈಗಾಗಲೇ 6 ಜನ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಕಾರ್ಯಕರ್ತರು ಶ್ರಮವಹಿಸಿ ಸಂಘಟನೆ ಮಾಡಬೇಕು ಎಂದರು.
ಮದ್ದೂರು ತಾಲೂಕಿನಿಂದ ಕದಲೂರು ರಾಮಕೃಷ್ಣ, ಮಾರಸಿಂಗನಹಳ್ಳಿ ಹರೀಶ್, ಮಳವಳ್ಳಿಯಿಂದ ಕೃಷ್ಣ್ಣೇಗೌಡ, ನಾಗಮಂಗಲದಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಅಪ್ಪಾಜಿಗೌಡ, ಲಕ್ಷೀನಾರಾಯಣ, ಶ್ರೀರಂಗಪಟ್ಟಣದಿಂದ ಬೋರೇಗೌಡ ಸ್ಪರ್ಧೆ ಮಾಡಲಿದ್ದಾರೆ, ಮಂಡ್ಯ, ಪಾಂಡವಪುರ ಹಾಗೂ ಕೆ ಆರ್ ಪೇಟೆ ತಾಲೂಕಿನ ಅಭ್ಯರ್ಥಿಗಳನ್ನು ಮುಂಬರುವ 5 ದಿನದೊಳಗೆ ಘೋಷಣೆ ಮಾಡಲಾಗುವುದು ಎಂದು ಸಚಿವ ಎನ್.ಚಲುವರಾಯಸ್ವಾಮಿ ವಿವರಿಸಿದರು.
TAGGED:maddur minister chaluva