ಕಲಬುರಗಿ: ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ ೫೦ ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನ.೧ರಂದು ಕನ್ನಡ ರಾಜ್ಯೋತ್ಸವ ವಿಶೇಷ ರೀತಿಯಲ್ಲಿ ಆಚರಿಸುವ ನಿಟ್ಟಿನಲ್ಲಿ ಜಿ¯್ಲೆಯ ಪ್ರತಿ ಮನೆ ಮುಂದೆ ರಂಗೋಲಿ ಹಾಕಿ, ಹಣತೆಯ ದೀಪ ಹಚ್ಚುವ ಮೂಲಕ ಕನ್ನಡ ಪ್ರೇಮ ಮೆರೆಯಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಬೆಳಗ್ಗೆ ಮನೆಯ ಮುಂದೆ ಕೆಂಪು-ಹಳದಿ ಬಣ್ಣದ ರಂಗೋಲಿಯಲ್ಲಿ ಹೆಸರಾಯಿತು ಕರ್ನಾಟಕ- ಉಸಿರಾಗಲಿ ಕನ್ನಡ ಎಂದು ವಾಕ್ಯ ಬಿಡಿಸಬೇಕು. ಸಂಜೆ ೭ಕ್ಕೆ ಮನೆ, ಕಚೇರಿ, ಅಂಗಡಿಗಳ ಮುಂದೆ ಹಣತೆ ದೀಪ ಹಚ್ಚಿ ಕನ್ನಡದ ಜ್ಯೋತಿ ಬೆಳಗಿಸಬೇಕು. ರಾಜ್ಯೋತ್ಸವ ದಿನ ಸಂಜೆ ೫ಕ್ಕೆ ಜಿಲ್ಲೆಯ ನಗರ, ಪಟ್ಟಣ ಹಾಗೂ ಗ್ರಾಮಗಳ ಮೈದಾನಗಳಲ್ಲಿ ಕೆಂಪು-ಹಳದಿ ಬಣ್ಣದ ಗಾಳಿಪಟಗಳನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಸುವರ್ಣ ಸಂಭ್ರಮ ಗಾಳಿಪಟ ಉತ್ಸವ ಆಚರಿಸಬೇಕು ಎಂದು ಕೋರಿದ್ದಾರೆ.
ಕರ್ನಾಟಕ ನಾಮಕರಣದ ಸುವರ್ಣ ಸಂದರ್ಭ ಇದಾಗಿರುವುದರಿಂದ ರಾಜ್ಯೋತ್ಸವ ಅರ್ಥಪೂರ್ಣವಾಗಿ ಅಚರಿಸುವುದು ಪ್ರತಿ ಕನ್ನಡಿಗರ ಕರ್ತವ್ಯ. ಜಿಲ್ಲೆಯ ಎಲ್ಲ ಕನ್ನಡಪರ ಸಂಘಟನೆಗಳು, ಸಂಘ-ಸAಸ್ಥೆಗಳು ರಾಜ್ಯೋತ್ಸವ ಸಂಭ್ರಮದಿAದ ಯಶಸ್ವಿಯಾಗಿ ಜರುಗಲು ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.