21 C
Bengaluru
Wednesday, January 22, 2020

ಮನೆ ಮನೆಯಿಂದ ಕಸ ಸಂಗ್ರಹ ವಿಫಲ

Latest News

ಅರಸೀಕೆರೆ ತಾಲೂಕಿನ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅವ್ಯವಹಾರ ಆರೋಪ ತನಿಖೆ ನಡೆಸಿ ವಾರದೊಳಗೆ ವರದಿ‌ ಸಲ್ಲಿಸಿ ಎಂದು ಸೂಚಿಸಿದ ಸಚಿವ ಕೆ.ಎಸ್.ಈಶ್ವರಪ್ಪ

ಹಾಸನ: ಅರಸೀಕೆರೆ ತಾಲೂಕಿನ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅವ್ಯವಹಾರ ನಡೆದ ಆರೋಪವಿದ್ದು ತನಿಖೆ ನಡೆಸಿ ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ಸಚಿವ...

ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಹೊತ್ತು 6 ಕಿ.ಮೀ ಸಾಗಿ ಆಸ್ಪತ್ರೆಗೆ ದಾಖಲಿಸಿದ ಯೋಧರ ತಂಡ

ಬಿಜಾಪುರ್​: ಸಿಆರ್​ಪಿಎಫ್​ ಯೋಧರ ತಂಡವೊಂದು ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಮಂಚದ ಮೇಲೆ ಹಾಕಿಕೊಂಡು ಸುಮಾರು 6 ಕಿ.ಮೀ ದೂರದ ಆಸ್ಪ್ರತೆಗೆ ನೆಡದುಕೊಂಡೇ...

ನೇಪಾಳ ದುರಂತ| ಮೂವರು ಮಕ್ಕಳ ಹುಟ್ಟುಹಬ್ಬಕ್ಕೆ ತೆರಳಿದ್ದ ಕೇರಳ ಕುಟುಂಬ ಮರಳಿದ್ದು ಶವವಾಗಿ

ಕೊಚ್ಚಿ: ನೇಪಾಳ ಪ್ರವಾಸಕ್ಕೆಂದು ತೆರಳಿ ಹೋಟೆಲ್​ವೊಂದರಲ್ಲಿ ದುರಂತ ಸಾವಿಗೀಡಾದ ಕೇರಳ ಮೂಲ ಕುಟುಂಬದ ಕರುಣಾಜನಕ ಕತೆಯಿದು. ಮೃತ ತಿರುವನಂತಪುರ ನಿವಾಸಿ ಪ್ರವೀಣ್​ ಮತ್ತು ಸರಣ್ಯ...

ಸರ್ಕಾರಿ ಆಸ್ಪತ್ರೆಗಳಲ್ಲಿರುವ ಉಪಕರಣಗಳಿಗೆ ಉಸಿರು ತುಂಬಿ!

ದಾವಣಗೆರೆ: ರಾಜ್ಯದಲ್ಲಿ ಸರಿಸುಮಾರು 3 ಸಾವಿರ ಸರ್ಕಾರಿ ಆಸ್ಪತ್ರೆಗಳಿದ್ದು, ನಿರ್ವಹಣೆ ಕೊರತೆ ಕಾರಣ ಬಹುತೇಕ ಆಸ್ಪತ್ರೆಗಳಲ್ಲಿನ ಉಪಕರಣಗಳು ಜೀವ ಕಳೆದುಕೊಂಡಿವೆ. ಹೀಗಾಗಿ ಸಾವಿರಾರು ರೋಗಿಗಳು...

ಕುಮಾರಸ್ವಾಮಿ ದುಷ್ಕರ್ಮಿಗಳಿಗೆ ಬೆಂಬಲ ಕೊಡುತ್ತಿದ್ದಾರೆ ಎನ್ನುವ ಭಾವನೆ ಮೂಡುತ್ತಿದೆ: ಸಚಿವ ಕೆ.ಎಸ್. ಈಶ್ವರಪ್ಪ ಕಿಡಿ

ಹಾಸನ: ಮಂಗಳೂರು ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸಿರುವ ಅನುಮಾನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಮೀಣಾಭಿವೃದ್ಧಿ ಸಚಿವ...

ಹುಬ್ಬಳ್ಳಿ: ಅವಳಿ ನಗರದ ಮನೆ ಮನೆಯಿಂದ ಕಸ ಸಂಗ್ರಹಿಸುವ 64 ಕೋಟಿ ರೂ. ವೆಚ್ಚದ ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಯೋಜನೆ ವಿಫಲವಾಗಿರುವುದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪಾಲಿಕೆ ಸದಸ್ಯರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗುರುವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು. ಮನೆ ಮನೆಯಿಂದ ಕಸ ಸಂಗ್ರಹ ಪರಿಣಾಮಕಾರಿಯಾಗಿಲ್ಲ. ಮಧ್ಯಾಹ್ನ 11 ಗಂಟೆಯಾದರೂ ಮನೆ ಮನೆಗೆ ಆಟೋ ಟಿಪ್ಪರ್ ಬರುವುದಿಲ್ಲ. ಜನರು ಖಾಲಿ ಜಾಗದಲ್ಲಿ ಕಸ ಎಸೆಯುವಂತೆ ಆಗಿದೆ. ಇದರಿಂದ ಬೀದಿ ನಾಯಿ, ಹಂದಿಗಳ ಕಾಟ ಹೆಚ್ಚಾಗಿದೆ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸುತ್ತಿರುವ ಆನಿಮಲ್ ರೈಟ್ಸ್ ಫಂಡ್ (ಎಆರ್​ಎಫ್)ನ ಕಾರ್ಯವೈಖರಿ ಬಗ್ಗೆಯೂ ಸಂದೇಹ ವ್ಯಕ್ತಪಡಿಸಿದರು.

ಪ್ರಾರಂಭದಲ್ಲಿ ಗಮನ ಸೆಳೆಯುವ ಸೂಚನೆ ಮೂಲಕ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಗಣೇಶ ಟಗರಗುಂಟಿ, ಅವಳಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅಧಿಕಾರಿಗಳು ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು.

ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಲು ಟೆಂಡರ್ ಪಡೆದಿರುವ ಆನಿಮಲ್ ರೈಟ್ಸ್ ಫಂಡ್ (ಎಆರ್​ಎಫ್)ಗೆ 8 ಲಕ್ಷ ರೂ. ಪಾವತಿಸುವುದು ಬಾಕಿ ಇದೆ. ಅದಕ್ಕೆ ಅವರು ಕೆಲಸ ಮಾಡಲು ಹಿಂದೆ-ಮುಂದೆ ನೋಡುತ್ತಿದ್ದಾರೆ ಎಂದು ಮುಖ್ಯ ಆರೋಗ್ಯ ಅಧಿಕಾರಿ ಡಾ. ಪಿ.ಎನ್. ಬಿರಾದಾರ ಮಾಹಿತಿ ನೀಡಿದರು.

ಈ ಕಾರ್ಯಕ್ರಮ ಬೋಗಸ್ ಆಗಿದೆ. ನಾವು-ನೀವು ಈಗಲೇ ಹೋಗಿ ನೋಡಿಕೊಂಡು ಬರೋಣ. ಇಟಿಗಟ್ಟಿಯಲ್ಲಿ ಶಸ್ತ್ರಚಿಕಿತ್ಸೆಗೆ ಬೇಕಾದ ಯಾವುದೇ ಶೆಡ್ ಇಲ್ಲ ಎಂದು ಬಿಜೆಪಿ ಸದಸ್ಯ ರಾಮಣ್ಣ ಬಡಿಗೇರ ಆಕ್ಷೇಪಿಸಿದರು. ಪ್ರತಿಯೊಂದು ಶಸ್ತ್ರಚಿಕಿತ್ಸೆ ಆನ್​ಲೈನ್​ನಲ್ಲಿ ದಾಖಲಾಗುತ್ತವೆ ಎಂದು ಡಾ. ಬಿರಾದಾರ ಉತ್ತರಿಸಿದರು.

ಡಾ. ಪಾಂಡುರಂಗ ಪಾಟೀಲ ಮಾತನಾಡಿ, ಬೀದಿ ನಾಯಿಗಳು ಏನು ತಿಂದು ಬದುಕುತ್ತಿವೆ? ಅವುಗಳಿಗೆ ಬೀದಿಯಲ್ಲಿ ಆಹಾರ ಸಿಗುತ್ತಿವೆ ಎಂದಾದರೆ ಮನೆ ಮನೆಯಿಂದ ಕಸ ಸಂಗ್ರಹಿಸುವ ಕೆಲಸ ವಿಫಲವಾಗಿದೆ ಎಂದರ್ಥವಲ್ಲವೇ? ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ವಿಭಾಗ ವಿಫಲವಾಗಿದೆ ಎಂದು ದೂರಿದರು.

ನನ್ನ ವಾರ್ಡ್​ನಲ್ಲಿ ಕೆಲ ವ್ಯಕ್ತಿಗಳು ನಾಲಾ ಜಾಗ ಅತಿಕ್ರಮಿಸಿ ಲೇಔಟ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಬಡವರು ಖರೀದಿಸುತ್ತಿದ್ದಾರೆ. ಈ ಬಗ್ಗೆ ನಾಳೆ ಸರ್ವೆ ನಂಬರ್ ನೀಡುತ್ತೇನೆ. ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಅಲ್ತಾಫ್ ಕಿತ್ತೂರ ಆಗ್ರಹಿಸಿದರು.

ಕಾಂಗ್ರೆಸ್ಸಿನಲ್ಲಿಯೇ ಭಿನ್ನರಾಗ: ಸ್ವಚ್ಛತಾ ಅಭಿಯಾನಕ್ಕೆ ನಗರಕ್ಕೆ ಆಗಮಿಸಿದ್ದ ಚಿತ್ರ ನಟಿ ರಾಗಿಣಿ ಅವರ ಕಾರ್ಯಕ್ರಮದ ವೆಚ್ಚ 1.80 ಲಕ್ಷ ರೂ. ನೀಡುವ ವಿಷಯದಲ್ಲಿ ಮತ್ತೊಮ್ಮೆ ಚರ್ಚೆ ನಡೆಯಿತು. ಆದರೆ, ಚರ್ಚೆಯ ವೇಳೆ ಕಾಂಗ್ರೆಸ್ ಪಾಳೆಯದಿಂದ ಭಿನ್ನರಾಗ ಕೇಳಿಸಿತು. ಕಾಂಗ್ರೆಸ್ಸಿನ ಸುಧಾ ಮಣಿಕುಂಟ್ಲ, ದೀಪಾ ಗೌರಿ ಹಣ ಕೊಡಲು ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ, ವಿರೋಧ ಪಕ್ಷ (ಕಾಂಗ್ರೆಸ್)ದ ನಾಯಕ ಗಣೇಶ ಟಗರಗುಂಟಿ, ಪ್ರಕಾಶ ಕ್ಯಾರಕಟ್ಟಿ ಅವರಿಂದ ಸೂಕ್ತ ಬೆಂಬಲ ವ್ಯಕ್ತವಾಗಲಿಲ್ಲ.

ಹಿಂದಿನ ಸಭೆಯಲ್ಲಿ ಪಾಲಿಕೆ ಆಯುಕ್ತರು ಹಣ ಕೊಡಲು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿರುವಾಗ ಈ ವಿಷಯವನ್ನು ಸಭೆಗೆ ಯಾಕೆ ತಂದಿದ್ದೀರಿ? ನಾವು ಹಾಲಿವುಡ್, ಟಾಲಿವುಡ್ ನಟರನ್ನು ಕರೆಸುತ್ತೇವೆ. ಹಣ ಕೊಡುತ್ತೀರಾ? ಯಾವುದೇ ಕಾರಣಕ್ಕೆ ಹಣ ಕೊಡಬಾರದು ಎಂದು ಹೇಳುತ್ತ ಸುಧಾ ಮಣಿಕುಂಟ್ಲ ಮೇಯರ್ ಪೀಠದ ಎದುರು ತೆರಳಿ ಪಟ್ಟು ಹಿಡಿದರು.

ನಾಯಿ ಕಚ್ಚಿದ್ದಕ್ಕೆ ಬಡವರಿಗೆ 50 ಸಾವಿರ ರೂ. ಕೊಡಲು ಆಗಲಿಲ್ಲ. ರಾಗಿಣಿ ಕಾರ್ಯಕ್ರಮಕ್ಕೆ 1.80 ಲಕ್ಷ ರೂ. ಕೊಡಬೇಕೆ ಎಂದು ದೀಪಾ ಗೌರಿ ಪ್ರಶ್ನಿಸಿದರು.

ಸ್ವಪಕ್ಷೀಯರ ಸದಸ್ಯೆಯರ ಬೆಂಬಲಕ್ಕೆ ನಿಲ್ಲಬೇಕಿದ್ದ ಗಣೇಶ ಟಗರಗುಂಟಿ, ಚರ್ಚೆ ನಡೆಸೋಣ… ಎಂದು ಸಮಾಧಾನ ಪಡಿಸಲು ಯತ್ನಿಸಿದರು. ಮೇಲಾಗಿ ಅವರು, ಸಭೆಯಲ್ಲಿ ರಾಗಿಣಿ ಅವರಿಗೆ ಅಸಹ್ಯ ಮಾಡುವುದು ಬೇಡ. ವಿಷಯವನ್ನು ಸಭೆಯಿಂದ ಹೊರಗೆ ಮೇಯರ್ ಅವರೇ ನಿರ್ಧರಿಸಬೇಕಿತ್ತು ಎಂದರು. ಪ್ರಕಾಶ ಕ್ಯಾರಕಟ್ಟಿ ಸಹ ಹಾಗೇ ಹೇಳಿದರು.

ಈ ವಿಷಯದಲ್ಲಿ ಆಯುಕ್ತರನ್ನು ಕೇಳಿ ನಿರ್ಣಯ ಕೈಗೊಳ್ಳುವುದು ಎಂದು ಮೇಯರ್ ರೂಲಿಂಗ್ ನೀಡಿದರು. ಹಿಂದಿನ ಸಭೆಯಲ್ಲಿ ಹಣ ಕೊಡಲು ಸಾಧ್ಯವಿಲ್ಲವೆಂದು ಪಾಲಿಕೆ ಆಯುಕ್ತರು ಹೇಳಿದ ಮೇಲೂ ಇಂಥದೊಂದು ನಿರ್ಣಯ ಕೈಗೊಳ್ಳಲಾಗಿದೆ.

ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಚಿತ್ರನಟಿ ರಾಗಿಣಿ ಅವರನ್ನು ಕರೆಯಿಸಿ ನಡೆಸಲಾದ ಕಾರ್ಯಕ್ರಮಕ್ಕೆ 1.80 ಲಕ್ಷ ರೂ. ವೆಚ್ಚವಾಗಿದ್ದು, ಪಾವತಿಸುವಂತೆ ಪಾಲಿಕೆಯ ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಿವಾನಂದ ಮುತ್ತಣ್ಣವರ ಆಯುಕ್ತರಿಗೆ ಪತ್ರ ಬರೆದು ಕೋರಿದ್ದಾರೆ.

ವಿದ್ಯುತ್ ಕಣ್ಣಮುಚ್ಚಾಲೆ: ಕೋರಂ ಅಭಾವದಿಂದ ತಡವಾಗಿ ಆರಂಭಗೊಂಡ ಹು-ಧಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯನ್ನು ವಿದ್ಯುತ್ ಕಣ್ಣಮುಚ್ಚಾಲೆಯಿಂದ ಅರ್ಧ ತಾಸು ಮುಂದೂಡಿದ ಪ್ರಸಂಗ ನಡೆಯಿತು.

ಈ ನಡುವೆ ಕಾಂಗ್ರೆಸ್ ಸದಸ್ಯರು ಮೊಬೈಲ್ ಟಾರ್ಚ್ ಲೈಟ್ ಬೆಳಗಿಸಿ, ಪ್ರಧಾನಿ ಮೋದಿ ಸಾರ್ವಜನಿಕ ಸಭೆಯಲ್ಲಿ ಜನರು ಮೊಬೈಲ್ ಟಾರ್ಚ್ ಆನ್ ಮಾಡಿ ಅಭಿಮಾನ ಪ್ರಕಟಿಸುವ ಪರಿಯನ್ನು ಅಣಕಿಸಿದರು. ವಿದ್ಯುತ್ ಸಮಸ್ಯೆಗೆ ರಾಜ್ಯ ಸರ್ಕಾರ ಕಾರಣ. ಮೋದಿಯವರ ಹೆಸರನ್ನು ಯಾಕೆ ತರುತ್ತೀರಿ ಎಂದು ಬಿಜೆಪಿ ಸದಸ್ಯರು ಆಕ್ಷೇಪಿಸಿದರು.

ಕೊನೆಗೂ ಬರಲಿಲ್ಲ ಹೆಚ್ಚುವರಿ ಆಯುಕ್ತರು: ಪಾಲಿಕೆ ಆಯುಕ್ತರು ಕರ್ತವ್ಯದ ಮೇಲೆ ಬೆಂಗಳೂರಿಗೆ ತೆರಳಿದ್ದರು. ಹೆಚ್ಚುವರಿ ಆಯುಕ್ತರು ಚುನಾವಣೆ ಕೆಲಸದ ಮೇಲಿದ್ದರು. ಅವರನ್ನು ಸಭೆಗೆ ಕರೆಯಿಸಿ ಎಂದು ಸದಸ್ಯರು ಪಟ್ಟು ಹಿಡಿದಿದ್ದರು. ಆದರೆ, ಸಭೆ ಮುಗಿದರೂ ಅವರು ಬರಲಿಲ್ಲ.

ಆಯುಕ್ತರು ಹಾಗೂ ಹೆಚ್ಚುವರಿ ಆಯುಕ್ತರ ಗೈರಿನಲ್ಲಿ ಸಭೆಯಲ್ಲಿ ಪ್ರಭಾರಿಯಾಗಿದ್ದ ಅಧೀಕ್ಷಕ ಇಂಜಿನಿಯರ್ ಮಹೇಶ ಹೆಚ್ಚಿನ ಸಮಯವನ್ನು ಮೊಬೈಲ್ ಬಳಕೆಯಲ್ಲೇ ಕಳೆದಿದ್ದು ಕಂಡುಬಂತು.

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...