25.7 C
Bangalore
Monday, December 16, 2019

ಮನೆ ಕೀಳಿಸಿ ಅನುದಾನ ಕೊಡಲು ಮೀನಮೇಷ

Latest News

ಜಾಮಿಯಾ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ಇಂಡಿಯಾ ಗೇಟ್​ನಲ್ಲಿ ಪ್ರಿಯಾಂಕಾ ಗಾಂಧಿ ಸಾಂಕೇತಿಕ ಪ್ರತಿಭಟನೆ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರ ಲಾಠಿ ಚಾರ್ಜ್​ ವಿರೋಧಿಸಿ ಕಾಂಗ್ರೆಸ್ ಪಕ್ಷದ ಜನರಲ್ ಸೆಕ್ರಟರಿ...

ಸರ್ಕಾರದ ಸಾಧನೆಗಳ ಅನಾವರಣ

ವಿಜಯಪುರ: ನೆರೆ ಹಾವಳಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹಮ್ಮಿಕೊಂಡ ಛಾಯಾಚಿತ್ರ ಪ್ರದರ್ಶನಕ್ಕೆ...

ಅವಶ್ಯಕ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ

ವಿಜಯಪುರ: ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯ ಭೂ ಒಡೆತನ ಯೋಜನೆಯಡಿ ಅವಶ್ಯಕವಿರುವ ಅನುದಾನ-ಜಮೀನು ಕುರಿತು ವಾರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲು ಕ್ರಮ...

ಕ್ರೀಡೆ, ಯೋಗಕ್ಕೆ ಆದ್ಯತೆ ನೀಡಿ

ಹುನಗುಂದ: ಮಾನಸಿಕ ನೆಮ್ಮದಿಯೊಂದಿಗೆ ದೇಹಕ್ಕೆ ಹೊಸ ಉಲ್ಲಾಸ ನೀಡುವ ಕ್ರೀಡೆ ಹಾಗೂ ಯೋಗ ಮಾಡಲು ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ವಿಜಯ ಮಹಾಂತೇಶ...

ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ತಮ್ಮ ಪ್ರಜೆಗಳನ್ನು ವಾಪಸ್​ ಕರೆಯಿಸಿಕೊಳ್ಳಲು ಸಿದ್ಧ ಎಂದ ಬಾಂಗ್ಲಾದೇಶ

ಢಾಕಾ: ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರನ್ನು ವಾಪಸ್ ಪಡೆಯಲು ಸಿದ್ದವಿರುವುದಾಗಿ ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೆಮೊನ್ ಹೇಳಿದ್ದಾರೆ. ಪೌರತ್ವ ಕಾಯ್ದೆ...
* ಡೇರಾ ಹಾಕಿಕೊಂಡು ದಿನ ದೂಡುತ್ತಿರುವ ಕುಟುಂಬ * ಸಾಮೂಹಿಕ ಆತ್ಮಹತ್ಯೆಯ ಯೋಚನೆ

ಮಾದರಹಳ್ಳಿ ರಾಜು ಮಂಡ್ಯ: ಸರ್ಕಾರ ಹಲವು ವಸತಿ ಯೋಜನೆಗಳನ್ನು ಜಾರಿಗೆ ತಂದು ಸರ್ವರಿಗೂ ಸೂರು ಕಲ್ಪಿಸಿಕೊಡಲು ಶ್ರಮಿಸುತ್ತಿದೆ. ಆದರೆ, ಪಾಂಡವಪುರ ತಾಲೂಕಿನ ಬೇಬಿ ಗ್ರಾಮದ ಮಾಲಯ್ಯ ಅವರ ಕುಟುಂಬದ ಪರಿಸ್ಥಿತಿ ಸರ್ಕಾರದ ಆಶಯಕ್ಕೆ ಅಪವಾದ ಎಂಬಂತಿದೆ.

ವರ್ಷದ ಹಿಂದೆ ಮಾಲಯ್ಯ ಅವರ ಮನೆ ಕುಸಿಯುವ ಹಂತದಲ್ಲಿತ್ತು. ಕಾರ್ಯನಿಮಿತ್ತ ಗ್ರಾಮಕ್ಕೆ ಭೇಟಿ ನೀಡಿದ್ದ ಅಂದಿನ ಜಿ.ಪಂ. ಸಿಇಒ ಬಿ.ಶರತ್, ಈ ಕುಟುಂಬದ ಪರಿಸ್ಥಿತಿಯನ್ನು ನೋಡಿ ಹೊಸಮನೆ ನಿರ್ವಣಕ್ಕೆ ಅನುದಾನ ನೀಡುವುದಾಗಿ ಹೇಳಿದ್ದರು. ಅಲ್ಲದೆ, ಗ್ರಾಮ ಪಂಚಾಯಿತಿಯಿಂದ 10 ಸಾವಿರ ರೂ. ಅನುದಾನ ನೀಡಿ ಹಳೆಯ ಮನೆಯನ್ನು ಕೆಡವಿಸಿದ್ದರು. ಬಳಿಕ ಅದೇ ಜಾಗದಲ್ಲಿ ಮನೆ ನಿರ್ವಿುಸಿಕೊಳ್ಳಲು ಮಾಲಯ್ಯ ಅವರ ಪತ್ನಿ ಬೆಟ್ಟಮ್ಮ ಅವರನ್ನು ಫಲಾನುಭವಿಯನ್ನಾಗಿ ಆಯ್ಕೆ ಮಾಡಿಕೊಂಡು, ಅನುದಾನ ಬಿಡುಗಡೆ ಮಾಡುವುದಾಗಿ ಹೊನಗಾನಹಳ್ಳಿ ಗ್ರಾ.ಪಂ. ಭರವಸೆ ನೀಡಿತ್ತು.

ಪಂಚಾಯಿತಿಯವರ ಮಾತು ಕೇಳಿ ಈ ಕುಟುಂಬ 30-35 ಸಾವಿರ ರೂ. ಖರ್ಚು ಮಾಡಿ ಅಡಿಪಾಯ ಹಾಕಿಸಿತು. ದುರದೃಷ್ಟವಶಾತ್, ತಾಂತ್ರಿಕ ಕಾರಣಗಳಿಂದ ಫಲಾನುಭವಿಗಳ ಪಟ್ಟಿಯಲ್ಲಿ ಬೆಟ್ಟಮ್ಮ ಅವರ ಹೆಸರು ಬ್ಲಾಕ್ ಆಗಿಹೋಯಿತು. ಆದರೆ ಅದನ್ನು ಸರಿಪಡಿಸುವ ಪ್ರಯತ್ನ ಈತನಕ ಆಗಿಲ್ಲ. ಪರಿಣಾಮ, ಅಡಿಪಾಯದ ಕಂಬ ನೆಟ್ಟು, ಛಾವಣಿಯಾಗಿ ಟಾರ್ಪಲ್ ಕಟ್ಟಿಕೊಂಡು, ಸುತ್ತಲು ಕಂಬಳಿ, ರಗ್ಗು, ತೆಂಗಿನ ಗರಿ ಕಟ್ಟಿಕೊಂಡು ದಿನ ದೂಡುತ್ತಿದ್ದಾರೆ.

ದುಡಿಯುವವರಿಲ್ಲದ ಕುಟುಂಬ: ಕುಟುಂಬದ ಮುಖ್ಯಸ್ಥ ಮಾಲಯ್ಯ(80) ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದರೆ, ಬೆಟ್ಟಮ್ಮ(70) ಅವರಿಗೆ ವಯೋ ಸಹಜ ಕಾರಣದಿಂದ ಕೆಲಸ ಮಾಡುವ ಶಕ್ತಿಯಿಲ್ಲ. ಪುತ್ರ ಸ್ವಾಮಿ(45) ಕಾಂಕ್ರಿಟ್ ಮಿಕ್ಸರ್ ವಾಹನದಲ್ಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಆದರೆ, ಕೆಲ ವರ್ಷಗಳ ಹಿಂದೆ ಈತನ ಕಾಲುಗಳಿಗೆ ತೊಂದರೆಯಾಗಿ, ದುಡಿಯಲಾಗದ ಸ್ಥಿತಿಗೆ ಬಂದಿದ್ದಾರೆ.

ಸ್ವಾಮಿಗೆ ಪತ್ನಿ ರೇಣುಕಾ, ಪುತ್ರ ದರ್ಶನ್, ಪುತ್ರಿ ದೇವರಾಜಿ ಇದ್ದು, ಈ ಎಲ್ಲರ ಜವಾಬ್ದಾರಿ ಈಗ ರೇಣುಕಾ ಅವರ ಮೇಲೆ ಬಿದ್ದಿದೆ. ರೇಣುಕಾ ಮೈಸೂರಿನ ಗಾರ್ವೆಂಟ್ಸ್​ನಲ್ಲಿ ಕೆಲಸ ಮಾಡಿಕೊಂಡು ಅತ್ತೆ, ಮಾವ, ಪತಿ, ಮಕ್ಕಳ ಜತೆಗೆ ನಾದಿನಿಯ ಬಾಣಂತನ ಮಾಡುವ ಹೊರೆಯನ್ನೂ ಹೊತ್ತಿದ್ದಾರೆ. ತಮಗೆ ಬರುವ ಅಲ್ಪ ಸಂಬಳದಲ್ಲೇ ಇಡೀ ಕುಟುಂಬ ನಿರ್ವಹಣೆ ಮಾಡಬೇಕಿದೆ.

ಮತ್ತೊಂದೆಡೆ, ಮಾಲಯ್ಯ ಹಾಗೂ ಬೆಟ್ಟಮ್ಮ ಅವರಿಗೆ ಮೂರು ತಿಂಗಳಿನಿಂದ ಮಾಸಾಶನವೂ ಬಂದಿಲ್ಲ. ಹಾಗಾಗಿ ಕುಟುಂಬದ ಪರಿಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ.

ಪಾಳು ಬಿದ್ದಿರುವ ಜಮೀನು: ಮಾಲಯ್ಯ ಅವರಿಗೆ ಎರಡೂವರೆ ಎಕರೆ ಜಮೀನಿದೆ. ಆದರೆ, ಅಲ್ಲಿಗೆ ಹೋಗಿ ವ್ಯವಸಾಯ ಮಾಡುವ ಶಕ್ತಿ ಕುಟುಂಬ ಸದಸ್ಯರಿಗಿಲ್ಲ. ಜತೆಗೆ, ನೀರಿನ ಸೌಲಭ್ಯವಿಲ್ಲದೆ ಪಾಳು ಬಿದ್ದಿದೆ.

ಅನುದಾನಕ್ಕಾಗಿ ಕಚೇರಿಗಳಿಗೆ ಅಲೆದು ಅಲೆದು ಸುಸ್ತಾಗಿದೆ. ಆದರೆ, ಏನೂ ಪ್ರಯೋಜನವಾಗಿಲ್ಲ. ಹೇಗೋ ಮುರುಕು

 ಮನೆಯಲ್ಲಿ ಜೀವನ ನಡೆಯುತ್ತಿತ್ತು. ಈಗ ಮಳೆ ಬೇರೆ ಆಗುತ್ತಿದ್ದು, ನಮ್ಮ ಪಾಡು ಕೇಳುವವರಿಲ್ಲ. ಸರ್ಕಾರ ತಕ್ಷಣ ಅನುದಾನ ನೀಡದಿದ್ದರೆ ಸಾಮೂಹಿಕ ಆತ್ಮಹತ್ಯೆಯೊಂದೇ ದಾರಿ.

| ಮಾಲಯ್ಯ ನೊಂದ ವ್ಯಕ್ತಿ

ಸಮಸ್ಯೆ ಏನೆಂಬುದನ್ನು ಕೂಡಲೇ ಪರಿಶೀಲಿಸಿ, ಜಿ.ಪಂ. ಉಪ ಕಾರ್ಯದರ್ಶಿ ಜತೆ ರ್ಚಚಿಸಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಆ ಕುಟುಂಬ ಆತಂಕಪಡುವ ಅಗತ್ಯವಿಲ್ಲ.

| ಯಾಲಕ್ಕಿಗೌಡ ಜಿ.ಪಂ. ಸಿಇಒ

- Advertisement -

Stay connected

278,757FansLike
589FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...