ಕೊಳ್ಳೇಗಾಲ: ಪಟ್ಟಣದ ಶ್ರೀ ಶಿವಕುಮಾರಸ್ವಾಮಿ ಬಡಾವಣೆಯಲ್ಲಿ ಬುಧವಾರ ಹಾಡಹಗಲೇ 125 ಗ್ರಾಂ ಚಿನ್ನಾಭರಣ ಹಾಗೂ 7.5 ಲಕ್ಷ ನಗದನ್ನು ದುರ್ಷ್ಕಮಿಗಳು ಕಳ್ಳತನ ಮಾಡಿದ್ದಾರೆ.
ಬಡಾವಣೆಯ ನಿವಾಸಿ ಯುಪಿಎಸ್ ಅಂಗಡಿ ಮಾಲೀಕ ಮಹದೇವಸ್ವಾಮಿ ಎಂಬುವರು ಕುಟುಂಬ ಸಮೇತ ತನ್ನ ಸ್ನೇಹಿತನ ಮಗಳ ಮದುವೆಗೆ ಹೋಗಿ ಬರುವಷ್ಟರಲ್ಲಿ ಈ ಕೃತ್ಯ ನಡೆದಿದೆ. ಬುಧವಾರ ಬೆಳಗ್ಗೆ 9 ಗಂಟೆಯಲ್ಲಿ ಮಹದೇವಸ್ವಾಮಿ ಹಾಗೂ ಅವರ ಪತ್ನಿ, ಪುತ್ರಿ ಮೂವರು ಮದುವೆ ಸಮಾರಂಭಕ್ಕೆ ಹೋಗಿದ್ದರು. ಮಧ್ಯಾಹ್ನ 1 ಗಂಟೆ ಬಳಿಕ ಹಿಂದಿರುಗಿ ಬಂದು ನೋಡುವಷ್ಟರಲ್ಲಿ ಮನೆಯ ಬಾಗಿಲು ಒಡೆದು ಒಳನುಗ್ಗಿ ಕೊಠಡಿಯ ಬೀರುವಿನಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿರುವುದು ತಿಳಿದುಬಂದಿದೆ.
ವಿಚಾರ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಉದ್ದೇಶ್, ಡಿವೈಎಸ್ಪಿ ಸೋಮೇಗೌಡ, ಸಿಪಿಐ ಕೃಷ್ಣಪ್ಪ , ಪಿಎಸ್‌ಐ ಮಹೇಶ್‌ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಮನೆ ಮಾಲೀಕರಿಂದ ವಿಚಾರಣೆ ನಡೆಸಿ ಮಾಹಿತಿ ಪಡೆದರು. ಈ ವೇಳೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು.