ಮನೆಬಾಗಿಲಿಗೆ ಗುಣಮಟ್ಟದ ಆರೋಗ್ಯ ಸೇವೆ

| ವರುಣ ಹೆಗಡೆ

ಬೆಂಗಳೂರು: ನಗರದ ಹೊರವಲಯದಲ್ಲಿ ನೆಲೆಸಿರುವ ನಿವಾಸಿಗಳು ಅನಾರೋಗ್ಯ ಸಮಸ್ಯೆಗೆ ತುತ್ತಾದರೆ ತುರ್ತು ಚಿಕಿತ್ಸೆ ಪಡೆಯಲು ಪರದಾಡಬೇಕಾದ ಸನ್ನಿವೇಶವಿದೆ. ಇದೀಗ ಈ ಸಮಸ್ಯೆಗೆ ಪರಿಹಾರ ಸಿಗುವ ಸೂಚನೆ ದೊರೆತಿದ್ದು, ಶೀಘ್ರದಲ್ಲಿಯೇ ವಿದೇಶಿ ಮಾದರಿಯಲ್ಲಿ ಮನೆಯ ಸಮೀಪವೇ ಆರೋಗ್ಯ ಕೇಂದ್ರಗಳು ತಲೆಯೆತ್ತಲಿವೆ.

ಅಮೆರಿಕಾ ಸೇರಿದಂತೆ ಮುಂದುವರಿದ ದೇಶಗಳಲ್ಲಿ ಈಗಾಗಲೇ ಆರೋಗ್ಯದ ಮಹತ್ವ ಅರಿತು ಮನೆಯ ಸಮೀಪವೇ ಆರೋಗ್ಯ ಕೇಂದ್ರಗಳನ್ನು ನಿರ್ವಿುಸಲಾಗಿದೆ. ಇದರಿಂದ ನಿವಾಸಿಗಳು ಆರೋಗ್ಯವಂತರಾಗಿ ಜೀವಿಸುವಂತಾಗಿದೆ. ಆದರೆ, ನಗರದಲ್ಲಿ ಇದಕ್ಕೆ ವಿರುದ್ಧವಾದ ವಾತಾವರಣವಿದೆ. ಬಿಲ್ಡರ್​ಗಳು ರಸ್ತೆ, ನೀರು, ಸಾರಿಗೆ ಸೇರಿದಂತೆ ವಿವಿಧ ಮೂಲಸೌಕರ್ಯಕ್ಕೆ ನೀಡಿದ ಮಹತ್ವವನ್ನು ಆರೋಗ್ಯ ಕೇಂದ್ರಗಳಿಗೆ ನೀಡಿಲ್ಲ. ಪರಿಣಾಮ ಸಣ್ಣ ಪುಟ್ಟ ಜ್ವರಕ್ಕೂ ದೂರದ ಸ್ಥಳದಲ್ಲಿರುವ ಆರೋಗ್ಯ ಕೇಂದ್ರಕ್ಕೆ ತೆರಳಬೇಕಾಗಿದೆ. ಈ ಸಮಸ್ಯೆಯನ್ನು ಬಿಲ್ಡರ್​ಗಳು ಹಾಗೂ ಆಸ್ಪತ್ರೆಗಳು ಇದೀಗ ಗಂಭೀರವಾಗಿ ತೆಗೆದುಕೊಂಡಿದ್ದು, ಅಪಾರ್ಟ್​ವೆುಂಟ್ ಪಕ್ಕದಲ್ಲಿಯೇ ಬಹು ವೈದ್ಯಕೀಯ ಸೇವೆ ನೀಡುವ ಕೇಂದ್ರ ನಿರ್ವಿುಸಲು ನಿರ್ಧರಿಸಿದ್ದಾರೆ. ‘ಈಗಾಗಲೇ ನಗರದ ಪ್ರಮುಖ ಬಿಲ್ಡರ್​ಗಳು ಈ ವಿಚಾರವಾಗಿ ವಿವಿಧ ಆಸ್ಪತ್ರೆಗಳ ಜತೆಗೆ ಒಪ್ಪಂದಕ್ಕೆ ಮುಂದಾಗಿದ್ದು, ಅಪಾರ್ಟ್​ವೆುಂಟ್ ಮಾಲೀಕರ ಸಂಘದ ಜತೆಗೆ ಚರ್ಚೆ ಕೂಡ ಆರಂಭವಾಗಿದೆ. ಮುಂದಿನ ಎರಡು ತಿಂಗಳೊಳಗೆ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ತಲೆಯೆತ್ತುವ ಸಾಧ್ಯತೆಯಿದ್ದು, ನಿತ್ಯದ ಆರೋಗ್ಯ ಸಮಸ್ಯೆಗಳಿಗೆ ಸಹ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಮೂಲಕ ಒಂದೇ ಸೂರಿನಲ್ಲಿ ವಿವಿಧ ಸೌಲಭ್ಯ ಒದಗಿಸಿಕೊಡುವ ಮೂಲಕ ಗ್ರಾಹಕರನ್ನು ಆಕರ್ಷಿಸುವುದು ಬಿಲ್ಡರ್​ಗಳ ಲೆಕ್ಕಾಚಾರವಾಗಿದೆ. ಹೀಗಾಗಿ ಪ್ರಾಯೋಗಿಕವಾಗಿ ಕೆಲವು ಅಪಾರ್ಟ್​ವೆುಂಟ್​ಗಳಿಗೆ ಈ ಸೌಲಭ್ಯ ನೀಡಿ, ಭವಿಷ್ಯದಲ್ಲಿ ನಗರವ್ಯಾಪಿ ಯೋಜನೆಯನ್ನು ವಿಸ್ತರಿಸಲು ಬಿಲ್ಡರ್​ಗಳು ಚಿಂತನೆ ನಡೆಸಿದ್ದಾರೆ.

ಹಿರಿಯ ನಾಗರಿಕರಿಗೆ ಅನುಕೂಲ

ಅಪಾರ್ಟ್​ವೆುಂಟ್ ಪಕ್ಕದಲ್ಲಿಯೇ ಆರೋಗ್ಯ ಕೇಂದ್ರ ನಿರ್ವಣದಿಂದ ಸುಲಭವಾಗಿ ಅಂಗವಿಕಲರು, ಹಿರಿಯನಾಗರಿಕರು ಹಾಗೂ ಮಹಿಳೆಯರು ಆರೋಗ್ಯ ಸೇವೆ ಪಡೆಯಬಹುದಾಗಿದೆ. ಇಳಿ ವಯಸ್ಸಿನಲ್ಲಿ ಹೆಚ್ಚಾಗಿ ಅನಾರೋಗ್ಯ ಸಮಸ್ಯೆ ಕಾಡುವುದರಿಂದ ಕಾಲ ಕಾಲಕ್ಕೆ ವೈದ್ಯಕೀಯ ಪರೀಕ್ಷೆ ಅತ್ಯಗತ್ಯ. ಹೀಗಾಗಿ ಈ ಯೋಜನೆ ಆರೋಗ್ಯಯುತ ಜೀವನಕ್ಕೆ ಸಹಕಾರಿಯಾಗಿದೆ. ಇನ್ನು ತುರ್ತು ಚಿಕಿತ್ಸೆ ಕೂಡ ಶೀಘ್ರ ದೊರೆಯಲಿದೆ.

ಒಂದೇ ಸೂರಿನಡಿ ಹಲವು ಚಿಕಿತ್ಸೆ

ಅಪಾರ್ಟ್​ವೆುಂಟ್ ಸಮೀಪ ನಿರ್ವಣವಾಗುವ ಆರೋಗ್ಯ ಕೇಂದ್ರದಲ್ಲಿ ಪರಿಣತ ವೈದ್ಯರ ಜತೆಗೆ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಡಯಾಗ್ನೋಸ್ಟಿಕ್, ನರ್ಸಿಂಗ್ ಸ್ಟೇಷನ್, ಚಿಕಿತ್ಸಾ ಕೊಠಡಿ, ಆರೋಗ್ಯ ತಪಾಸಣೆ ಎಲ್ಲವೂ ಒಂದೇ ಛಾವಣಿಯಡಿ ದೊರೆಯಲಿದೆ. ವಾರಕ್ಕೊಮ್ಮೆ ಸೂಪರ್ ಸ್ಪೆಷಾಲಿಟಿ ವೈದ್ಯರು ಕೂಡ ಆಗಮಿಸಲಿದ್ದು, ಗಂಭೀರ ಕಾಯಿಲೆಗೂ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಪ್ರತಿಯೊಬ್ಬರಿಗೂ ಗುಣಮಟ್ಟದ ಆರೋಗ್ಯ ಸೇವೆ ಸುಲಭವಾಗಿ ದೊರೆಯಬೇಕು. ಈ ನಿಟ್ಟಿನಲ್ಲಿ ಅಪಾರ್ಟ್ ಮೆಂಟ್ ಸಮೀಪವೇ ಆರೋಗ್ಯ ಕೇಂದ್ರ ನಿರ್ಮಾಣ ವಿಚಾರವಾಗಿ ವಿವಿಧ ಸಂಸ್ಥೆಗಳ ಜತೆಗೆ ಮಾತುಕತೆ ನಡೆಸಲಾಗುತ್ತಿದೆ. ಅಪಾರ್ಟ್​ವೆುಂಟ್ ಮಾಲೀಕರ ಸಂಘದ ಜತೆ ಸಹ ರ್ಚಚಿಸಲಾಗಿದೆ.

| ಎಂ.ಮುರುಳಿ ಶ್ರೀರಾಂ ಪ್ರಾಪರ್ಟೀಸ್ ವ್ಯವಸ್ಥಾಪಕ ನಿರ್ದೇಶಕ

 

ಗುಣಮಟ್ಟದ ಆರೋಗ್ಯ ಸೇವೆಯನ್ನು ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಬಿಲ್ಡರ್​ಗಳ ಜತೆಗೆ ಮಾತುಕತೆ ನಡೆದಿದೆ. ಅಪಾರ್ಟ್​ವೆುಂಟ್ ಸಮೀಪ ಕ್ಲಿನಿಕ್​ಗಳನ್ನು ಸ್ಥಾಪಿಸುವ ಜತೆಗೆ ವಿವಿಧ ವೈದ್ಯಕೀಯ ಸೌಲಭ್ಯವನ್ನು ಒಂದೇ ಸೂರಿನಡಿ ನೀಡಲಾಗುತ್ತದೆ.

| ಆನಂದ್ ವಾಸ್ಕರ್, ಅಪೊಲೊ ಹೆಲ್ತ್ ಮತ್ತು ಲೈಫ್​ಸ್ಟೈಲ್ ಲಿಮಿಟೆಡ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.

Leave a Reply

Your email address will not be published. Required fields are marked *