ಚಿತ್ರದುರ್ಗ: ಜಿಲ್ಲೆಯ ಹಿರೇಎಮ್ಮಿಗನೂರು ಗ್ರಾಮದ ಕಲ್ಲೇಶ್ವರ ಸ್ವಾಮಿ ದೇಗುಲಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಭಾನುವಾರ ಭೇಟಿ ನೀಡಿದರು.
ತಮ್ಮ ಮನೆದೇವರೂ ಆದ ಸ್ವಾಮಿಗೆ ಮೊದಲು ಪೂಜೆ ಸಲ್ಲಿಸುವ ಮೂಲಕ ಸನ್ನಿಧಿಯಲ್ಲಿ 95ನೇ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡರು.
ಇದೇ ವೇಳೆ ಕಲ್ಲೇಶ್ವರ ಸ್ವಾಮಿ ಸೇವಾ ಟ್ರಸ್ಟ್‌ನಿಂದ ಶಿವಶಂಕರಪ್ಪ ಅವರಿಗೆ ಸನ್ಮಾನಿಸಲಾಯಿತು. ಸಿಎ ವೀರಣ್ಣ, ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯ ದಿನೇಶ್ ಶೆಟ್ಟಿ, ಸೇವಾ ಸಮಿತಿಯ ಉಪಾಧ್ಯಕ್ಷ ಎಸ್.ಬಸವರಾಜಪ್ಪ, ಕಾರ್ಯದರ್ಶಿ ಎ.ಎಂ.ಜಯದೇವಪ್ಪ, ಸಹ ಕಾರ್ಯದರ್ಶಿ ಕೆ.ಆರ್.ಶಿವಯೋಗಿ, ಸದಸ್ಯರಾದ ವಿ.ಈಶ್ವರಪ್ಪ, ಡಿ.ಈ.ಕಲ್ಲಪ್ಪ, ಮಾಳಿಗೆ ನಾಗರಾಜ್, ಮಾಳಿಗೆ ಪ್ರಕಾಶ್ ಗ್ರಾಮದ ಮುಖಂಡರು ಇದ್ದರು.