23.2 C
Bangalore
Saturday, December 14, 2019

ಮನೆಗೆ ಕಿಟಕಿ-ಬಾಗಿಲು ಹಚ್ಚಲು ತಕರಾರು

Latest News

ಆರ್‌ಎಫ್‌ಐಡಿ ಸ್ಟಿಕರ್​ಗಳ ಕೊರತೆ: ಫಾಸ್ಟ್ಯಾಗ್​ ಅಳವಡಿಕೆ ಗಡುವನ್ನು ಮತ್ತೊಮ್ಮೆ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ರಾಷ್ಟ್ರಿಯ ಹೆದ್ದಾರಿಯಲ್ಲಿನ ಟೋಲ್​ಪ್ಲಾಜಾಗಳಲ್ಲಿ ಫಾಸ್ಟ್ಯಾಗ್​ ಮೂಲಕ ಟೋಲ್​ ಶುಲ್ಕ ವಸೂಲಿ ಪ್ರಕ್ರಿಯೆ ಡಿ.1 ರಿಂದ ಪ್ರಾರಂಭವಾಗಬೇಕಿತ್ತು. ಆದರೆ ಆದರೆ, ಎಲ್ಲ ವಾಹನ ಮಾಲೀಕರೂ ಫಾಸ್ಟ್ಯಾಗ್​...

ದಾವಣಗೆರೆ ಲೋಕ ಅದಾಲತ್‌ನಲ್ಲಿ 21 ನ್ಯಾಯಾಧೀಶರು ಭಾಗಿ, 678 ಕೇಸ್ ವಿಲೆ, 7.34 ಕೋಟಿ ಪರಿಹಾರ ಇತ್ಯರ್ಥ

ದಾವಣಗೆರೆ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆಯಂತೆ ಜಿಲ್ಲಾದ್ಯಂತ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ಜಿಲ್ಲೆಯ...

ಫೆಬ್ರವರಿ 1 ರಂದು ಕೇಂದ್ರ ಬಜೆಟ್​, ಜನವರಿ 31 ರಂದು ಆರ್ಥಿಕ ಸಮೀಕ್ಷೆ ಮಂಡನೆ ಸಾಧ್ಯತೆ

ನವದೆಹಲಿ: ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ 2020-21 ಸಾಲಿನ ಕೇಂದ್ರ ಮುಂಗಡ ಪತ್ರ ಫೆಬ್ರವರಿ 1 ರಂದು ಮಂಡನೆಯಾಗುವ ಸಾಧ್ಯತೆಯಿದೆ. ಅಂತೆಯೇ ಆರ್ಥಿಕ...

ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ

ಯಾದಗಿರಿ: ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು ಹಾಗೂ ಲಸಿಕೆಯನ್ನು ಕೊಡಿಸುವುದು ಪೋಷಕರ ಕರ್ತವ್ಯ ಕೂಡ ಆಗಿದೆ ಎಂದು ಕಿರಿಯ...

ಹಿರಿಯ ವಕೀಲರನ್ನು ಗೌರವದಿಂದ ಕಾಣಿ

ಯಾದಗಿರಿ : ಕಿರಿಯ ವಕೀಲರು ಹಿರಿಯ ವಕೀಲರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ನೂತನ ಆಡಳಿತಾತ್ಮಕ ನ್ಯಾಯಮೂರ್ತಿ ಅಶೋಕ...

ರಾಣೆಬೆನ್ನೂರ: ಅವರದೊಂದು ಪುಟ್ಟ ಕುಟುಂಬ. ಇಷ್ಟು ದಿನ ಗುಡಿಸಲಿನಲ್ಲಿ ಜೀವನ ಕಳೆದು, ಇದೀಗ ಆಶ್ರಯ ಯೋಜನೆಯಡಿ ಮನೆ ನಿರ್ವಿುಸಿಕೊಂಡಿದ್ದಾರೆ.

ಆದರೆ, ನೂತನ ಮನೆಯಲ್ಲಿ ಇರಬೇಕು ಎಂಬ ಕನಸು ಕಾಣುತ್ತಿರುವ ಕುಟುಂಬಕ್ಕೀಗ ಸಂಕಷ್ಟ ಎದುರಾಗಿದೆ. ಅವರ ಏಳಿಗೆ ಸಹಿಸದ ಕೆಲವರು ನೂತನ ಮನೆಗೆ ಬಾಗಿಲು, ಕಿಟಕಿ ಹಚ್ಚಿಕೊಳ್ಳಲು ವಿರೋಧ ಮಾಡುತ್ತಿದ್ದಾರೆ. ಹೀಗಾಗಿ, ಅಸಹಾಯಕ ಬಡ ಕುಟುಂಬ ತಿಂಗಳಿಂದ ಕಣ್ಣೀರಿಡುತ್ತ ಕುಳಿತಿದೆ.

ತಾಲೂಕಿನ ಉಕ್ಕುಂದ ಗ್ರಾಮದ ವಾಲ್ಮೀಕಿ ನಗರದ ಲೋಕೇಶಪ್ಪ ಸಣ್ಣಮನಿ ಎಂಬುವರ ಒಂದು ಸೂರಿನ ಕಥೆಯಿದು.

ಲೋಕೇಶಪ್ಪ ಅವರು ಕೂಲಿ ಮಾಡಿಕೊಂಡು ಪತ್ನಿ, ಪುತ್ರನನ್ನು ಸಾಕುತ್ತಿದ್ದಾರೆ. ಸೂಕ್ತ ಸೂರಿಲ್ಲದೆ ಇಷ್ಟು ದಿನಗಳ ಕಾಲ ಗುಡಿಸಲಿನಲ್ಲಿ ಜೀವ ಕಳೆದಿದ್ದಾರೆ. ಇದೀಗ ಅವರ ಕುಟುಂಬಕ್ಕೆ ಸೇರಿದ 17*20 (340 ಚದರ ಅಡಿ) ಅಳತೆಯ ಜಾಗ ಅವರ ಪಾಲಿಗೆ ಬಂದಿದೆ. ಅದರಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ನಿರ್ವಿುಸಿಕೊಂಡಿದ್ದಾರೆ. ಮನೆ ಕೆಲಸ ಸಂಪೂರ್ಣ ಮುಗಿದಿದ್ದು, ಬಾಗಿಲು, ಕಿಟಕಿ ಹಚ್ಚುವುದು ಬಾಕಿಯಿದೆ.

ಎದುರಿನ ಮನೆಯವರಿಂದ ವಿರೋಧ: ಲೋಕೇಶಪ್ಪನ ಮನೆ ಎದುರಿಗೆ ಒಂದು ಕೋಮಿಗೆ ಸೇರಿದ ಹಲವರ ಮನೆಗಳಿವೆ. ಕೆಲವರು ರಸ್ತೆಯನ್ನೇ ಅತಿಕ್ರಮಣ ಮಾಡಿಕೊಂಡು ಕಟ್ಟೆಗಳನ್ನು ನಿರ್ವಿುಸಿಕೊಂಡಿದ್ದಾರೆ. ಅವರೀಗ ಲೋಕೇಶಪ್ಪ ಅವರಿಗೆ, ‘ನಿಮ್ಮ ಮನೆಗೆ ರಸ್ತೆಯಿರುವ ಬದಿ ಬಾಗಿಲು, ಕಿಟಕಿ ಹಚ್ಚಿಕೊಳ್ಳಬೇಡ. ಇದು ನಿಮ್ಮ ಜಾಗವಲ್ಲ’ ಎಂದು ಹೇಳಿ ದಬ್ಬಾಳಿಕೆ ಮಾಡುತ್ತಿದ್ದಾರಂತೆ. ಇದರಿಂದಾಗಿ ಲೋಕೇಶಪ್ಪ ತಮ್ಮ ಮನೆ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ, ಗುಡಿಸಿನಲ್ಲಿಯೇ ಜೀವನ ಮಾಡುತ್ತಿದ್ದಾರೆ.

ವಿರೋಧವೇಕೆ?: ಲೋಕೇಶಪ್ಪ ತಮ್ಮ 3 ಫೂಟ್ ಜಾಗವನ್ನು ಸಾರ್ವಜನಿಕರು ಓಡಾಡಲು ಗ್ರಾಪಂ ವತಿಯಿಂದ ನಿರ್ವಿುಸಿದ ಕಾಂಕ್ರೀಟ್ ರಸ್ತೆಗೆ ಬಿಟ್ಟುಕೊಟ್ಟಿದ್ದಾರೆ. ಇದೀಗ ಮನೆಯನ್ನು ತನ್ನ ಸ್ವಂತ ಜಾಗದಲ್ಲಿಯೇ ನಿರ್ವಿುಸಿಕೊಂಡಿದ್ದಾರೆ. ದಾಖಲಾತಿ ಸಹ ಸರಿಯಾಗಿಯೇ ಇವೆ. ಸರ್ವೆ ಇಲಾಖೆ ಅಧಿಕಾರಿಗಳು ಅವರ ಜಾಗವನ್ನು ಅಳೆದುಕೊಟ್ಟಿದ್ದಾರೆ. ಆದರೂ ಒಂದು ಕೋಮಿನ ಜನತೆ, ‘ನಿಮ್ಮ ಮನೆಗೆ ಬಾಗಿಲು, ಕಿಟಕಿ ಹಚ್ಚಬೇಡ, ನಿಮ್ಮ ಜಾಗ ಬೇರೆಡೆಯಿದೆ’ ಎನ್ನುತ್ತ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂಬುದು ಲೋಕೇಶಪ್ಪ ಅಳಲು.

ಗಮನಹರಿಸದ ಅಧಿಕಾರಿಗಳು: ತಮಗಾಗಿರುವ ಅನ್ಯಾಯದ ಕುರಿತು ಗ್ರಾಪಂ ಪಿಡಿಒ ಬಳಿ ಹೇಳಿದರೆ, ಇಂದು-ನಾಳೆ ಎನ್ನುತ್ತ ತಿಂಗಳಿನಿಂದ ಕಾಲ ಕಳೆಯುತ್ತಿದ್ದಾರೆ. ತಹಸೀಲ್ದಾರ್ ಅವರ ಗಮನಕ್ಕೆ ತಂದರೆ, ಪಿಡಿಒ ಜತೆ ಮಾತನಾಡುತ್ತೇನೆ ಎಂದು ಹೇಳಿ ತಿಂಗಳು ಕಳೆದಿದೆ. ಆದರೆ, ಈವರೆಗೂ ನಮ್ಮ ಸಮಸ್ಯೆಗೆ ಯಾರೊಬ್ಬರೂ ಸ್ಪಂದಿಸಿಲ್ಲ ಎನ್ನುವ ಆರೋಪ ಲೋಕೇಶಪ್ಪ ಅವರದ್ದು.

ಕೂಲಿ ಮಾಡಿ ಜೀವನ ಮಾಡುತ್ತಿರುವ ನಾವು ಮನೆ ನಿರ್ವಿುಸಿಕೊಳ್ಳಲು ಜೀವನ ಪೂರ್ತಿ ದುಡಿದ ಹಣ ಹಾಕಿದ್ದಾಗಿದೆ. ಇದೀಗ ಅಕ್ಕಪಕ್ಕದವರ ವಿರೋಧದಿಂದ ಮನೆಯಲ್ಲಿ ಉಳಿದುಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ತಹಸೀಲ್ದಾರರು, ತಾಪಂ, ಗ್ರಾಪಂ ಅಧಿಕಾರಿಗಳು ನಮಗೆ ನ್ಯಾಯ ಒದಗಿಸಿಕೊಡಬೇಕು ಎಂಬುದು ಲೋಕೇಶಪ್ಪ ಕುಟುಂಬದವರ ಒತ್ತಾಯವಾಗಿದೆ.

ಲೋಕೇಶಪ್ಪನ ಕುಟುಂಬದವರು ಚುನಾವಣೆ ಸಮಯದಲ್ಲಿ ಬಂದಿದ್ದರು. ಹೀಗಾಗಿ ನಾವು ಸ್ಥಳಕ್ಕೆ ಭೇಟಿ ನೀಡಲು ಆಗಿರಲಿಲ್ಲ. ಕೂಡಲೇ ಅವರು ಮನೆ ನಿರ್ವಿುಸಿದ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಗೆ ಪರಿಹಾರ ಸೂಚಿಸಲಾಗುವುದು.
| ಸಿ.ಎಸ್. ಕುಲಕರ್ಣಿ, ತಹಸೀಲ್ದಾರ್ ರಾಣೆಬೆನ್ನೂರ

Stay connected

278,753FansLike
588FollowersFollow
627,000SubscribersSubscribe

ವಿಡಿಯೋ ನ್ಯೂಸ್

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...

VIDEO| ಹರ್ಷಿಕಾ ಪೂಣಚ ಅವರ ಕುತ್ತಿಗೆಗೆ ಸುತ್ತುವರಿದ ಹಾವು…!: ಟ್ವಿಟರ್​ನಲ್ಲಿ...

ಬೆಂಗಳೂರು: ಸದಾ ಸಕ್ರಿಯರಾಗಿರುವ ಚಿತ್ರನಟಿ ಹರ್ಷಿಕಾ ಪೂಣಚ ಅವರ ಟ್ವಿಟರ್ ಅಕೌಂಟ್​ನಲ್ಲಿ ಶನಿವಾರ ಒಂದು ವಿಡಿಯೋ ಅಪ್ಲೋಡ್ ಆಗಿದ್ದು, ಅದರಲ್ಲಿ ಅವರ ವಿಯೆಟ್ನಾಂ ಅನುಭವದ ಒಂದು ಅಂಶ ಬಹಿರಂಗವಾಗಿದೆ. ಹರ್ಷಿಕಾ ಪೂಣಚ...

VIDEO| ನಟ ರಿಷಿ ಅಭಿನಯದ “ಸಾರ್ವಜನಿಕರಿಗೆ ಸುವರ್ಣಾವಕಾಶ” ಚಿತ್ರದ ರೊಮ್ಯಾಂಟಿಕ್​...

ಬೆಂಗಳೂರು: "ಆಪರೇಷನ್​ ಅಲಮೇಲಮ್ಮ" ಚಿತ್ರ ಖ್ಯಾತಿಯ ನಟ ರಿಷಿ ಅಭಿನಯದ ಹೊಚ್ಚ ಹೊಸ "ಸಾರ್ವಜನಿಕರಿಗೆ ಸುವರ್ಣಾವಕಾಶ" ಸಿನಿಮಾದ ಲಿರಿಕಲ್​ ವಿಡಿಯೋ ಸಾಂಗ್​ ಶುಕ್ರವಾರ ಬಿಡುಗಡೆಯಾಗಿದ್ದು ಯೂಟ್ಯೂಬ್​ನಲ್ಲಿ ಸಂಚಲನ ಸೃಷ್ಟಿಸಿದೆ. ಡಿಸೆಂಬರ್​ 20ಕ್ಕೆ...