ಮನುಷ್ಯ ಮತ್ತು ಆಂತರಿಕ ವಿಕಾಸ

ಮೃತ್ಯು ನಮ್ಮ ಜೀವನದ ಚರಮ ಸ್ಥಿತಿಯಾದರೆ, ಇಡೀ ಜೀವನವು ಮೃತ್ಯುವನ್ನು ಹೊಂದಲು ಒಂದು ತಯಾರಿಯಾಗುತ್ತದೆ. ಇದು ಒಂದು ತರಬೇತಿ ಇದ್ದಂತೆ. ಸಾಯುವುದು ಹೇಗೆಂದು ಕಲಿಯುವುದು ಇಡೀ ಜೀವನವಾಗುತ್ತದೆ. ಆದರೆ ಸಾವಿನ ಬಗ್ಗೆ ಇರುವ ತಪ್ಪುಕಲ್ಪನೆ ಮಾನವನ ಮನಸ್ಸನ್ನು ಪ್ರವೇಶಿಸಿದೆ, ಸಾವು ಶತ್ರು ಎಂಬ ಕಲ್ಪನೆ. ಇದು ಎಲ್ಲ ತಪ್ಪುಕಲ್ಪನೆಗಳ ಆಧಾರವಾಗಿದೆ. ಸಾವು ಜೀವನವನ್ನು ನಾಶಮಾಡುವುದು, ಸಾವು ಜೀವನಕ್ಕೆ ವಿರುದ್ಧವಾಗಿದೆ ಎಂಬಂತೆ ಮನುಷ್ಯನು ಸಾವನ್ನು ಜೀವನದ ಶತ್ರು ಎಂದು ಪರಿಗಣಿಸಿದ್ದಾನೆ. ಇದೇ ನಿಜವಾಗಿದ್ದರೆ ನಾವು ಖಂಡಿತವಾಗಿಯೂ ಸಾವಿನೊಂದಿಗೆ ಹೋರಾಡಬೇಕಾಗುತ್ತದೆ, ಮತ್ತು ಜೀವನವು ಸಾವನ್ನು ತಪ್ಪಿಸುವ ಪ್ರಯತ್ನವಾಗುತ್ತದೆ. ಆದರೆ ಇದು ಒಂದು ವ್ಯರ್ಥ ಹೋರಾಟ. ಕಾರಣ ಇಲ್ಲಿಯವರೆಗೂ ಯಾರೂ ಸಾವಿನಿಂದ ತಪ್ಪಿಸಿಕೊಳ್ಳಲಾಗಿಲ್ಲ.

ಅದೇನಾದರೂ ನಮ್ಮ ಹೊರಗಿದ್ದರೆ, ಅದನ್ನು ತಪ್ಪಿಸಬಹುದಿತ್ತು. ಆದರೆ ಅದು ನಮ್ಮ ಒಳಗೆ ಇದೆ. ನಾವು ಹುಟ್ಟಿದ ಕ್ಷಣದಿಂದ ನಾವು ಅದನ್ನು ತೆಗೆದುಕೊಳ್ಳುತ್ತಿದ್ದೇವೆ. ಈ ಕ್ಷಣದಲ್ಲಿ ನಾವು ಉಸಿರಾಡಲು ಪ್ರಾರಂಭಿಸಿದಾಗ ನಾವು ನಿಜವಾಗಿಯೂ ಸಾಯಲು ಪ್ರಾರಂಭಿಸುತ್ತೇವೆ. ಸಾವು ಕೊನೆಯಲ್ಲಿ ಬರುತ್ತದೆ ಎಂದು ಹೇಳುವುದು ಸರಿಯಲ್ಲ, ಅದು ಯಾವಾಗಲೂ ನಮ್ಮೊಂದಿಗಿದೆ. ಅದು ನಮ್ಮ ಒಂದು ಭಾಗ, ಅದು ನಮ್ಮ ಒಳಗಿನ ಕೇಂದ್ರ, ಅದು ನಮ್ಮೊಂದಿಗೆ ಬೆಳೆಯುತ್ತದೆ, ಮತ್ತು ಒಂದು ದಿನ ಅದು ಅಂತ್ಯಗೊಳ್ಳುತ್ತದೆ, ಒಂದು ದಿನ ಈ ಮೃತ್ಯು ಎನ್ನುವ ಹೂವು ಅರಳಿ ನಿಲ್ಲುತ್ತದೆ. ಯಾವತ್ತೋ ಒಂದುದಿನ ನಾವು ಸಾಯುವುದಿಲ್ಲ. ಪ್ರತಿಕ್ಷಣವೂ ಅದು ನಮ್ಮಲ್ಲಿ ಘಟಿಸುತ್ತಲೇ ಇತ್ತು. ಯಾವತ್ತು ಅದು ಉತ್ತುಂಗಕ್ಕೇರುವುದೋ ಅಂದು ನಾವು ಭೌತಿಕವಾಗಿ ಇಲ್ಲವಾಗುತ್ತೇವೆ. ಆದರೆ ಮನುಷ್ಯನು ತಪ್ಪು ಮನೋಭಾವವನ್ನು ಅಳವಡಿಸಿಕೊಂಡಿದ್ದಾನೆ ಮತ್ತು ಈ ತಪ್ಪು ವರ್ತನೆಯಿಂದಲೇ ಸಂಘರ್ಷ, ಹೋರಾಟ, ಹಿಂಸೆಯ ಉದಯ.

Leave a Reply

Your email address will not be published. Required fields are marked *