ಮನುಷ್ಯನೂ ಪ್ರಾಣಿಗಳಂತೆ….

Latest News

ಶಿಕ್ಷಣ ಸಚಿವ ಸುರೇಶ್ ಕುಮಾರ್ ವಾಸ್ತವ್ಯ ಹೂಡಿದ ಶಾಲೆಯಲ್ಲಿ ಶಿಕ್ಷಕರಿಂದ ಮಹಾ ಪ್ರಮಾದ

ಚಾಮರಾಜನಗರ: ಸಚಿವರ ಬಳಕೆಗೆಂದು ಮೀಸಲಿಟ್ಟ ಶೌಚಗೃಹವನ್ನು ಶಾಲಾ ಮಕ್ಕಳ ಕೈಯಲ್ಲಿ ಸ್ವಚ್ಛಗೊಳಿಸುವ ಮೂಲಕ ಶಾಲಾ ಶಿಕ್ಷಕರು ಪ್ರಮಾದವೆಸಗಿರುವ ಘಟನೆ ರಾಜ್ಯದ ಗಡಿಭಾಗದ ಶಾಲೆಯೊಂದರಲ್ಲಿ...

ರಾಷ್ಟ್ರ ರಕ್ಷಣೆಗೆ ಪ್ರಾಣವನ್ನೇ ಪಣಕ್ಕಿಡುವ ಧೀರ ಯೋಧರಿಗಾಗಿ “ಐರನ್​ ಮ್ಯಾನ್​” ಉಡುಪು ಅಭಿವೃದ್ಧಿಪಡಿಸಿದ ಯುವಕ!

ವಾರಾಣಸಿ: ಹಾಲಿವುಡ್​ ಐರನ್​ ಮ್ಯಾನ್​ ಚಿತ್ರದಿಂದ ಸ್ಪೂರ್ತಿಗೊಂಡು ವಾರಾಣಸಿಯ ಖಾಸಗಿ ವಿಶ್ವವಿದ್ಯಾಲಯದ ಉದ್ಯೋಗಿಯೊಬ್ಬರು "ಐರನ್​ ಮ್ಯಾನ್​" ಉಡುಪನ್ನು ಅಭಿವೃದ್ಧಿಪಡಿಸಿ ಸುದ್ದಿಯಾಗಿದ್ದಾರೆ. ಎದುರಾಳಿಯೊಂದಿಗೆ ಸೆಣಸಾಡುವ...

ಐಟಿ-ಬಿಟಿ ಅಭಿವೃದ್ಧಿಗೆ ಸರ್ಕಾರದ ಸಹಕಾರ: ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ, ಬೆಂಗಳೂರು ಟೆಕ್ ಸಮಿಟ್​ಗೆ ಅದ್ದೂರಿ ಚಾಲನೆ

ಬೆಂಗಳೂರು: ಆವಿಷ್ಕಾರ, ಸೇವಾ ಕ್ಷೇತ್ರಗಳ ಜತೆಗೆ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರಗಳ ಅಭಿವೃದ್ಧಿಗೆ ಬೇಕಾಗುವ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ....

ಬಿಐಎಸ್ ವರದಿ ಆತಂಕಕಾರಿ: ಜಲಮಂಡಳಿಗೆ ತಜ್ಞರ ಸಲಹೆ, ಗುಣಮಟ್ಟದ ನೀರಿಗೆ ನಾಗರಿಕರ ಆಗ್ರಹ

ಬೆಂಗಳೂರು: ಬೆಂಗಳೂರು ಜಲಮಂಡಳಿ ಸರಬರಾಜು ಮಾಡುತ್ತಿರುವ ಕುಡಿಯುವ ನೀರು ಶುದ್ಧವಲ್ಲ ಎಂಬುದು ಭಾರತೀಯ ಗುಣಮಟ್ಟ ಸಂಸ್ಥೆ (ಬಿಐಎಸ್) ನಡೆಸಿದ ಅಧ್ಯಯನದಲ್ಲಿ ಬಯಲಾಗಿದೆ. ಇದು...

ವೈದ್ಯರಿಂದ ಮಾತೃಹೃದಯದ ಸೇವೆ

ಬೆಳ್ತಂಗಡಿ: ವೈದ್ಯರು ಮಾನವೀಯತೆ ಹಾಗೂ ನಗುಮುಖದ ಮಾತೃ ಹೃದಯದೊಂದಿಗೆ ರೋಗಿಗಳ ಸೇವೆ ಮಾಡಬೇಕು. ರೋಗಿಗಳ ಸೇವೆಯೇ ದೇವರ ಸೇವೆಯಾಗಿದೆ ಎಂದು ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ...

ಪೊಡೆಯುಣಿಸ ಮಿಗಹಕ್ಕಿ ಹುಳುಗಳಂದದಿ ನರನು|

ತಡಕುವನು; ತನ್ನಾತ್ಮದುಣಿಸ ಮರೆಯುವನು||

ಒಡಲಿನಬ್ಬರವೇನು?ಆತುಮದ ನಾಣ್ಚೇನು?|

ಪೊಡವಿಗಿದೆ ದುಮ್ಮಾನ-ಮಂಕುತಿಮ್ಮ||191||

ಪ್ರಕೃತಿಯ ಒಡಲಲ್ಲಿರುವ ಪ್ರಾಣಿ-ಪಕ್ಷಿ, ಹುಳ-ಹುಪ್ಪಟೆಗಳೆಲ್ಲವೂ ಹಸಿವನ್ನು ನೀಗಿಸಿಕೊಳ್ಳುವ ಉದ್ದೇಶದಿಂದಲೇ ಕ್ರಿಯಾಶೀಲವಾಗಿರುತ್ತವೆ. ಇಂತಹುದೇ ಆಹಾರ ಬೇಕು, ಹೀಗೆಯೇ ಸಿಗಬೇಕು ಎಂಬ ಯಾವ ಬೇಡಿಕೆಯೂ ಅವುಗಳಿಗಿಲ್ಲ. ರುಚಿ, ಬಣ್ಣಗಳ ಗೊಡವೆ ಇಲ್ಲದೆ, ಹಸಿದ ಹೊತ್ತು ಆಯಾ ಪ್ರಾಣಿಗಳು ತಿನ್ನಬಹುದಾದುದೆಲ್ಲವನ್ನೂ ಯಾವ ತಕರಾರೂ ಇಲ್ಲದೆ ತಿನ್ನುತ್ತವೆ. ಮನುಷ್ಯನಿಗೆ ಮಾತ್ರ ಹೊಟ್ಟೆಯ ಹಸಿವಿಂಗಿಸಿಕೊಳ್ಳಲು ಸ್ವಾದಿಷ್ಟ ರುಚಿಯ, ಅಚ್ಚುಕಟ್ಟಾದ ವ್ಯಂಜನಗಳು ಬೇಕು. ಮನಸ್ಸಿಗೆ ಹಿತವಾಗದ್ದನ್ನು ನಾಲಗೆಯೂ ಸೇವಿಸುವುದಿಲ್ಲ. ಉದರಾಗ್ನಿಯು ತಣಿದ ಬಳಿಕ ಇನ್ನಿತರ ಹಸಿವೆಗಳು ಎಚ್ಚೆತ್ತುಕೊಳ್ಳುತ್ತವೆ. ಪಂಚೇಂದ್ರಿಯಗಳ ಮೂಲಕ ಸುಖಾನುಭವ ಪಡೆಯುವುದು ಚಪಲವಾಗಿ ಬಿಡುತ್ತದೆ. ದೇಹದ ವಾಂಛೆಗಳನ್ನು ತೀರಿಸುವ ಅವಸರದಲ್ಲಿ ಭಾವಬುದ್ಧಿಗಳ ನಿಯಂತ್ರಣವನ್ನೇ ಕಳೆದುಕೊಳ್ಳುವುದರೊಂದಿಗೆ ಆತ್ಮದ ಇರವನ್ನೂ ಜೀವವು ಮರೆತುಬಿಡುತ್ತದೆ. ಆತ್ಮೋನ್ನತಿಗಾಗಿ ಪ್ರಯತ್ನವನ್ನೇ ಮಾಡದೆ ಅಧಃಪತನದತ್ತ ಸಾಗುವ ಮನುಷ್ಯನ ಚರ್ಯುಗಳಿಂದಾಗಿ ಭೂಮಿಯ ಜೀವಜಗತ್ತು ನೋವುಣ್ಣುವ ಹಾಗಾಗುತ್ತದೆ.

ಅನಾದಿ ಕಾಲದ ಆಚೆ ಹಲವು ಜೀವದೆಶೆಗಳನ್ನು ಪಡೆಯುತ್ತ ವರ್ತಮಾನದ ಕ್ಷಣಗಳನ್ನು ದಾಟಿ ಅನೂಹ್ಯವಾದ ಭವಿಷ್ಯತ್ ಕಾಲದಾಚೆಯವರೆಗೆ ಆತ್ಮದ ಜೈತ್ರಯಾತ್ರೆಯು ಮುಂದುವರಿಯುತ್ತದೆ. ಮೋಕ್ಷ ಪಡೆಯುವುದು, ಪೂರ್ಣತೆಯಲ್ಲಿ ಲೀನವಾಗುವುದು ಆತ್ಮದ ಪಯಣದ ನಿಜ ಉದ್ದೇಶ. ವಿವೇಚನಾ ಶಕ್ತಿ ಇರುವ ಮನುಷ್ಯನು ಶರೀರದ ಪೋಷಣೆಯತ್ತ, ಸುಖಾನುಭವದತ್ತ ಮಾತ್ರ ಗಮನಹರಿಸಿದರೆ ಒಳಗಿರುವ ಯಾತ್ರಿಕನು ಕಳಾಹೀನನಾಗುತ್ತಾನೆ. ಪೂರ್ವಾರ್ಜಿತ ಕರ್ಮದೋಷಗಳನ್ನು ಕಳೆದುಕೊಂಡು, ಆತ್ಮೋನ್ನತಿ ಪಡೆಯಲು ತವಕಿಸುವ ಆತ್ಮಕ್ಕೆ ಬಲ ತುಂಬುವಂತಹ ಸತ್ಕಾರ್ಯಗಳಲ್ಲಿ ವ್ಯಕ್ತಿಯು ನಿರತನಾಗಬೇಕು. ಸತ್ಸಂಗ, ಸದಾಚಾರದ ನಡವಳಿಕೆಗಳ ಮೂಲಕ ಆತ್ಮಚೈತನ್ಯವು ಉದ್ದೀಪನಗೊಳ್ಳುತ್ತದೆ. ಆನಂದವು ಆಂತರ್ಯದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತದೆ. ಹೀಗೆ ಆತ್ಮಶ್ರದ್ಧೆ ಹೊಂದಿ ಬಾಳುವ ವ್ಯಕ್ತಿ ಸುಖ-ದುಃಖ, ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುತ್ತಾನೆ. ಎಲ್ಲವನ್ನೂ ಆಧ್ಯಾತ್ಮದ ದೃಷ್ಟಿಯಿಂದ ನೋಡುತ್ತಾನೆ. ಇದರರ್ಥ ಲೌಕಿಕ ವ್ಯವಹಾರದಲ್ಲಿ ಅನಾಸಕ್ತನಾಗಿ, ಜಪ-ತಪಗಳಲ್ಲಿ ತನ್ಮಯನಾಗಿ, ದೇಹದಂಡನೆಯನ್ನು ಮಾಡುತ್ತ ಕಾರ್ಯ ವಿಮುಖನಾಗಬೇಕೆಂದಲ್ಲ. ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತ, ನಿರ್ವೇಹಿಯಾಗಿ ಬಾಳಬೇಕು. ದೇಹವನ್ನು ಕಡೆಗಣಿಸಬಾರದು. ಆತ್ಮದ ಸುಗಮ ಪಯಣಕ್ಕೆ ಶರೀರವು ಆರೋಗ್ಯಪೂರ್ಣವಾಗಿಯೂ, ಶಕ್ತಿಯುತವಾಗಿಯೂ ಇರಲೇಬೇಕು. ಹುಚ್ಚೆದ್ದು ಕುಣಿಯುವ ಇಂದ್ರಿಯಗಳ ಅಭೀಪ್ಸೆಗಳಿಗೆ ತಾಳ ಹಾಕದೆ ಬುದ್ಧಿಯ ನಿಯಂತ್ರಣದಲ್ಲೇ ಮನಸ್ಸು ಉಳಿಯುವಂತಾದಾಗ ಆತ್ಮವು ಪರಮಾತ್ಮನೆಡೆಗೆ ಸಾಗುವ ಹಾದಿ ಸ್ಪಷ್ಟವಾಗುತ್ತದೆ. ಮನುಷ್ಯ ಜೀವಿತವಿರುವುದೇ ಮೋಜು-ಮಸ್ತಿಗಾಗಿ ಎಂದು ವ್ಯಕ್ತಿಯು ಕಳೆದುಹೋದರೆ ಆತ್ಮವು ಸಂಕೋಚದಿಂದ ಮಂಕಾಗುತ್ತದೆ. ಹುಟ್ಟುವಾಗಲೂ, ಸಾಯುವಾಗಲೂ ಒಂಟಿಯಾಗಿಯೇ ನಡೆಯಬೇಕಾದ ವ್ಯಕ್ತಿಯು, ಜೀವನದಲ್ಲಿ ನಂಟುಗಳನ್ನು ಅಂಟಿಸಿಕೊಂಡು ತೊಳಲಾಡುತ್ತಾನೆ. ಪ್ರತಿಯೊಬ್ಬ ವ್ಯಕ್ತಿಯೂ ಆತ್ಮವನ್ನು ಗುರುತಿಸಬಲ್ಲವನಾದರೆ, ತನ್ನ ಆತ್ಮೋದ್ಧಾರಕ್ಕೆ ತಾನೇ ಶ್ರಮಿಸಬಲ್ಲವನಾದರೆ ಭೂಮಿಯ ಬದುಕು ದಾರುಣವೆನ್ನಿಸದು.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

- Advertisement -

Stay connected

278,592FansLike
570FollowersFollow
609,000SubscribersSubscribe

ವಿಡಿಯೋ ನ್ಯೂಸ್

VIDEO: ಗೋಕಾಕ್​ ಕ್ಷೇತ್ರದಲ್ಲಿ...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...

ಕೇಂದ್ರ ಪರಿಸರ ಸಚಿವ...

ಬೆಂಗಳೂರು: ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್ ತೋರಿಸಿದ್ದಾರೆ. ಅವರು...

ಜಗತ್ತಿನ ಮೊದಲ ಫೋಲ್ಡೆಬಲ್​...

ಬೀಜಿಂಗ್​: ಕಂಪ್ಯೂಟರ್ ಜಗತ್ತಿನಲ್ಲಿ ನಿತ್ಯವೂ ಹೊಸ ಹೊಸ ಉತ್ಪನ್ನಗಳು ಗ್ರಾಹಕರಿಗೆ ಪರಿಚಯಿಸಲ್ಪಡುತ್ತಲೇ ಇವೆ. ವರ್ಷದ ಹಿಂದೆ ಖರೀದಿಸಿದ ಉತ್ಪನ್ನ ಇಂದಿಗೆ ಔಟ್​ಡೇಟೆಡ್​ ಎನ್ನುವ ಮಟ್ಟಿಗೆ ಇದೆ ಈ ಬದಲಾವಣೆಯ ವೇಗ....

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...