22.8 C
Bengaluru
Saturday, January 18, 2020

ಮನಸೋ ಇಚ್ಛೆ ಸಸ್ಯಗಳಿಗೆ ನಾಮಧೇಯ ನಿರ್ಧರಿಸಿದ್ದಲ್ಲ. ಅದರ ಹಿಂದೆ ವಿಜ್ಞಾನವಿದೆ, ಸಂಸ್ಕೃತಿಯಿದೆ, ಮಾಹಿತಿಯಿದೆ

Latest News

PHOTOS| ಉಡುಪಿಯಲ್ಲಿ ವೈಭವದ ಅದಮಾರು ಪರ್ಯಾಯ ಮೆರವಣಿಗೆ

ಉಡುಪಿ: ಪರ್ಯಾಯ ಶ್ರೀ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿಯವರ ಪ್ರಥಮ ಪರ್ಯಾಯದ ಮೆರವಣಿಗೆಗೆ ಕಲಾತಂಡಗಳು ಹೆಚ್ಚಿನ ಮೆರಗು ನೀಡಿತು. ಶನಿವಾರ ಮುಂಜಾನೆ 2.30ಕ್ಕೆ...

ಬೈಕ್​ ಅಪಘಾತದಲ್ಲಿ ಮೃತ ಪಟ್ಟ ಮಗನ ಅಂಗಾಂಗವನ್ನು ಹಾಸನದ ಹಿಮ್ಸ್​ಗೆ ದಾನ ಮಾಡಿದ ಪಾಲಕರು

ಹಾಸನ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ ಮಾಡಿ ಪಾಲಕರು ಮಾನವೀಯತೆ ಮೆರೆದಿದ್ದಾರೆ. ಹಾಸನ ತಾಲೂಕಿನ ಮರ್ಕೂಲಿ ಗ್ರಾಮದ ರಂಗಸ್ವಾಮಿ ಮತ್ತು ಶಿವಮ್ಮ ದಂಪತಿಯ ಪುತ್ರ ಸಚಿನ್...

PHOTOS| ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಜಗತ್ತೇ ಒಂದು ಅದ್ಭುತ. ಪ್ರಾಣಿ-ಪಕ್ಷಿಗಳ ಸಂಕುಲದೊಂದಿಗೆ ಇಲ್ಲಿರುವ ಅಪಾರ ಸಸ್ಯರಾಶಿಯು ಜೀವಿಗಳ ಜೊತೆಗೆ ಅನ್ಯೋನ್ಯ ಭಾವದಿಂದ, ಅವಿನಾಭಾವದಿಂದ ಇರುವುದು ಪ್ರಕೃತಿಯ ರಮಣೀಯತೆಯನ್ನು, ಪರಿಸರದ ಸೊಬಗನ್ನು ಹೆಚ್ಚಿಸಿರುವುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. ಇಂತಹ ಕೋಟಿಕೋಟಿ ಸಸ್ಯಪ್ರಪಂಚದಲ್ಲಿ ಆಪದ್ಬಾಂಧವನಾಗಿ ಮಾನವನನ್ನು ಸಲಹುವ ಸಸ್ಯಗಳು ಯಾವುವು ಎಂದು ಕಂಡುಹಿಡಿಯುವುದೇ ಅತಿ ದೊಡ್ಡ ಸವಾಲು.

ಸಹಸ್ರಾರು ವರ್ಷಗಳ ಹಿಂದೆ ಯಾವುದೇ ಪ್ರಯೋಗಾಲಯಗಳು ಇಲ್ಲದ ಕಾಲದಲ್ಲಿ ಗುರುತಿಸುವಿಕೆ ಹೇಗೆ ನಡೆಯಿತೆಂಬುದು ಊಹೆಗೂ ನಿಲುಕದ ವಿಚಾರ. ಸಸ್ಯಲೋಕದ ನಡುವಿನಿಂದ ಒಂದು ಸಸ್ಯವನ್ನು ಪ್ರತ್ಯೇಕವಾಗಿ ಆಯ್ದು ಅದನ್ನು ಒಂದು ನಿರ್ದಿಷ್ಟ ಕಾಯಿಲೆಯಲ್ಲಿ ಉಪಯುಕ್ತ ಎಂದು ಹೇಗೆ ನಿರ್ಧರಿಸಿದರೆಂಬುದು ಜಗತ್ತಿನ ಪರಮಾದ್ಭುತವೇ ಸರಿ. ನಸುಗುನ್ನಿ ಬಳ್ಳಿಯನ್ನು ಹೆಕ್ಕಿ ತೆಗೆದು ಅದು ಶರೀರದಲ್ಲಿ ನಡುಕ ಉಂಟುಮಾಡುವ ರೋಗವಾದ ಕಂಪವಾತದಲ್ಲಿ ಅತ್ಯುಪಯುಕ್ತವೆಂದು ವೈದ್ಯವಿಜ್ಞಾನಿಋಷಿಗಳು ಬೋಧಿಸಿದರು.

ಅದೇ ಗಿಡದ ಸಾರವನ್ನು ಕೆಲವು ದಶಕಗಳಿಂದ ರ್ಪಾನ್​ಸನ್ ರೋಗದಲ್ಲಿ ಆಯ್ಕೆಯ ಔಷಧವಾಗಿ ಜಗತ್ತಿನಾದ್ಯಂತ ಬಳಸಲಾಗುತ್ತಿದೆ! ಅಂದು ಹೇಳಿದ್ದೇ ಇಂದಿಗೂ ರಾಮಬಾಣವಾಗಿ ಉಳಿಯಬೇಕೆಂದರೆ ಅದೆಂಥ ಮೇರು ಜ್ಞಾನವಿರಬಹುದು! ಕೋಟ್ಯಂತರ ಸಸ್ಯ, ಖನಿಜ, ಲೋಹ, ರಾಸಾಯನಿಕಗಳಲ್ಲಿ ಅದಕ್ಕಿಂತ ಇಲ್ಲಿಯ ತನಕ ಬೇರೆ ಯಾವುದೇ ಉತ್ತಮ ಔಷಧ ದೊರೆತಿಲ್ಲ ಎಂದರೆ ಏನರ್ಥ? ವೈದ್ಯವಿಜ್ಞಾನಿ ಋಷಿಗಳು ಕೇವಲ ಅತಿ ಶ್ರೇಷ್ಠ ಔಷಧವನ್ನೇ ಆಯ್ಕೆ ಮಾಡಿದ್ದರು ಎಂದಷ್ಟೇ ಅಲ್ಲ, ಕಂಪವಾತದಲ್ಲಿ ಅದಕ್ಕಿಂತ ಶ್ರೇಷ್ಠವಾದ ಬೇರಿನ್ನೊಂದು ದ್ರವ್ಯವೇ ಜಗತ್ತಿನಲ್ಲಿನ್ನೂ ಲಭ್ಯವಿಲ್ಲವೆಂದರೆ ಅವರ ದೃಷ್ಟಿ, ದೂರದೃಷ್ಟಿ, ದೃಷ್ಟಿಕೋನಗಳಿಗೆ ಶರಣಾಗದೆ ಅನ್ಯ ದಾರಿಯಿಲ್ಲ.

ಆಯುರ್ವೆದ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟ ಸಾವಿರಾರು ಔಷಧೀಯ ಸಸ್ಯಗಳ ವಿಷಯದಲ್ಲೂ ಇದನ್ನೇ ಕಾಣಬಹುದು. ಸಸ್ಯಗಳ ಪೈಕಿ ಔಷಧೀಯ ಸಸ್ಯ ಯಾವುದೆಂದು ಕಂಡುಹಿಡಿದ ಸಾಹಸ ಒಂದೆಡೆಯಾದರೆ, ಅವುಗಳನ್ನು ಪುನಃ ಗುರುತಿಸುವುದು ಹೇಗೆಂಬುದು ಮತ್ತೊಂದು ಸವಾಲು. ಅದಕ್ಕಾಗಿ ಪ್ರತಿ ಔಷಧಿಯ ಸಸ್ಯಗಳಿಗೂ ಒಂದೊಂದು ಹೆಸರನ್ನು ಆಯುರ್ವೆದದ ಮೂಲಗ್ರಂಥಗಳಲ್ಲಿ ಇಡಲಾಯಿತು.

ಆ ಕಾಲದಲ್ಲಿದ್ದ ಸಸ್ಯ-ವೈದ್ಯರ ನಿಕಟ ಬಾಂಧವ್ಯ ಕಾಲಾಂತರದಲ್ಲಿ ನಶಿಸುತ್ತ ಹೋಯಿತು. ಹಾಗಾಗಿ ನಿಘಂಟು ಕೃತಿಗಳ ಕಾಲದಲ್ಲಿ ಇದಕ್ಕೆ ಪರ್ಯಾಯ ನಾಮವೆಂಬ ಪರಿಹಾರ ಬಂತು. ಆಧುನಿಕ ಸಸ್ಯಶಾಸ್ತ್ರೀಯ ಹೆಸರು ಸಸ್ಯಗಳ ಗುರುತಿಸುವಿಕೆಯಲ್ಲಿ ವೈಜ್ಞಾನಿಕವಾಗಿ ಮಹತ್ತರ ಪಾತ್ರ ವಹಿಸುತ್ತದೆ. ಹಾಗೆಂದು ಬರಿಯ ಆ ಹೆಸರಿನಿಂದಲೇ ಸಸ್ಯದ ಪರಿಚಯ ಒಂದಿನಿತೂ ಆಗುವುದಿಲ್ಲ.

ಆಯುರ್ವೆದ ನೀಡಿದ ಹೆಸರುಗಳ ವಿಶೇಷವೇನೆಂದರೆ ಪ್ರತಿಯೊಂದು ಹೆಸರೂ ಆ ಸಸ್ಯದ ಅಂಗಗಳನ್ನು ಬಣ್ಣಿಸುತ್ತದೆ! ಸಸ್ಯದ ವಿಭಿನ್ನ ಭಾಗಗಳ ವೈಶಿಷ್ಟ್ಯನ್ನು ಎತ್ತಿತೋರಿಸುತ್ತದೆ. ನೂರು ಔಷಧೀಯ ಸಸ್ಯಗಳನ್ನು ಮುಂದಿಟ್ಟು ಒಂದರ ಹತ್ತು ಪರ್ಯಾಯ ನಾಮಗಳನ್ನು ತಿಳಿಸಿದರೆ ಆ ಸಸ್ಯ ಯಾವುದೆಂದು ಗುರುತಿಸಬಹುದು! ಮನಸೋ ಇಚ್ಛೆ ಸಸ್ಯಗಳಿಗೆ ನಾಮಧೇಯ ನಿರ್ಧರಿಸಿದ್ದಲ್ಲ. ಅದರ ಹಿಂದೆ ವಿಜ್ಞಾನವಿದೆ, ಸಂಸ್ಕೃತಿಯಿದೆ, ಮಾಹಿತಿಯಿದೆ, ಎಲ್ಲಕ್ಕಿಂತ ಮಿಗಿಲಾಗಿ ಸುಂದರ ಮನಸ್ಸಿದೆ, ಪರಿಪಕ್ವ ಬುದ್ಧಿಯಿದೆ, ಅನ್ವೇಷಣೆಯ ಆತ್ಮವಿದೆ!

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...