ಮನಸೂರೆಗೊಂಡ ರಾಜ್ಯ ಮಟ್ಟದ ಟಗರಿನ ಕಾಳಗ

ಮುಂಡರಗಿ: ಪಟ್ಟಣದ ಕೋಟೆ ಆಂಜನೇಯ ಸ್ವಾಮಿ ಜಾತ್ರೆ, ಯುಗಾದಿ ಹಬ್ಬದ ನಿಮಿತ್ತ ಕೋಟೆ ಆಂಜನೇಯ ಗೆಳೆಯರ ಬಳಗದ ವತಿಯಿಂದ ಬುಧವಾರ ರಾಜ್ಯ ಮಟ್ಟದ ಟಗರಿನ ಕಾಳಗ ಜರುಗಿತು.

ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಮಂಜುನಾಥ ಇಟಗಿ, ‘ದೇಶಿ ಕ್ರೀಡೆಗಳಿಂದ ಉತ್ತಮ ಆರೋಗ್ಯ ಕಂಡುಕೊಳ್ಳಬಹುದು. ಯುವಕರು ಟಗರಿನ ಕಾಳಗ, ಕಬಡ್ಡಿ, ಕುಸ್ತಿ, ಕ್ರೀಡೆಗೆ ಒತ್ತು ನೀಡಬೇಕು. ಯುವಕರು ಶಿಕ್ಷಣದ ಜತೆಗೆ ಕ್ರೀಡಾಸಕ್ತಿ ಹೊಂದಬೇಕು. ಸದೃಢ ಮತ್ತು ಆರೋಗ್ಯಕರ ಬದುಕು ಕಂಡುಕೊಳ್ಳಬೇಕು ಎಂದರು.

ರಾಜ್ಯದ ವಿವಿಧ ಜಿಲ್ಲೆಗಳ 100 ಟಗರುಗಳು ಭಾಗವಹಿಸಿದ್ದವು. ಸಂತೋಷ ಬೆಳದಡಿ, ಮುಸ್ತುಬ್ ತಿರ್ಪಗಾರರಾಗಿದ್ದರು.ಎಸ್.ವಿ. ಪಾಟೀಲ, ಮುದುಕಪ್ಪ ಕುಂಬಾರ, ಎಸ್.ಬಿ. ರಾಮೇನಹಳ್ಳಿ, ಶಂಕ್ರಪ್ಪ ಉಳ್ಳಾಗಡ್ಡಿ, ನಾಗೇಶ ಹುಬ್ಬಳ್ಳಿ, ರಾಮು ಭಜಂತ್ರಿ, ಮಂಜುನಾಥ ಮುಧೋಳ, ಲಕ್ಷ್ಮಣ ಮಲಾರ್ಜಿ, ಷಣ್ಮುಖ ಕುರಿ, ಬಸವರಾಜ ಕುರಿ, ಮಂಜುನಾಥ ಗದ್ದಿ, ಮಂಜುನಾಥ ಲೇಂಡ್ವೆ, ಶಿವಕುಮಾರ ಕುರಿ, ವಿಶ್ವನಾಥ ಹುಬ್ಬಳ್ಳಿ, ಸಿದ್ದು ರಾಮೇನಹಳ್ಳಿ, ಪವನ್ ಲೇಂಡ್ವೆ, ಮಂಜುನಾಥ ಅಂಕಲಿ, ಮೈಲಾರಿ ಹಳಕಣ್ಣವರ, ಇತರರು ಇದ್ದರು. ತಾಲೂಕಿನ ವಿವಿಧ ಗ್ರಾಮಗಳಿಂದ ಜನರು ಆಗಮಿಸಿ ಟಗರಿನ ಕಾಳಗ ವೀಕ್ಷಿಸಿದರು.

ಪಂದ್ಯಾವಳಿ ಫಲಿತಾಂಶ: ನಾಲ್ಕು ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಹಾಲು ಹಲ್ಲಿನ ಟಗರಿನ ಸ್ಪರ್ಧೆಯಲ್ಲಿ ಹೂವಿನಹಡಗಲಿ ಜಾಕಿ ಪ್ರಥಮ 3001 ರೂ., ಗದಗ ಅರಮನ್ ಠಕ್ಕರ್ ಕಾಲಿಯಾ ದ್ವಿತೀಯ 2001 ರೂ., ಹಾತಲಗೇರಿಯ ಸೋಮಲಿಂಗೇಶ್ವರ ತೃತೀಯ 1501 ರೂ. ಬಹುಮಾನ ಪಡೆದವು. ಎರಡು ಹಲ್ಲಿನ ಟಗರಿನ ಪಂದ್ಯದಲ್ಲಿ ಮುಂಡರಗಿಯ ವಾಯುಪುತ್ರ ಪ್ರಥಮ 4100 ರೂ., ಗದಗಿನ ಪುಟ್ಟರಾಜ ದ್ವಿತೀಯ 3001 ರೂ., ಗದಗಿನ ಜೈ ಹನುಮಾನ ಮಂಜುನಾಥ ಗೆಳೆಯರ ಬಳಗ ತೃತೀಯ 2001 ರೂ., ನಾಲ್ಕು ಹಲ್ಲಿನ ಟಗರಿನ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಹುಬ್ಬಳ್ಳಿ ಅಮವಾಸ್ಯೆ ಪ್ರಥಮ 5001 ರೂ., ಗದಗಿನ ಗಂಗಾಪುರ ಪೇಟೆ ದುರ್ಗಾದೇವಿ ಅರ್ಜುನ ದ್ವಿತೀಯ 4001 ರೂ., ಮಜ್ಜೂರ ಗ್ರಾಮದ ಮಜ್ಜೂರು ತೂಫಾನ್ ತೃತೀಯ 3001 ರೂ., ಎಂಟು ಹಲ್ಲಿನ ಕಾಳಗದಲ್ಲಿ ದಾವಣಗೆರಿಯ ಅಭಿಮನ್ಯು ಪ್ರಥಮ 10,001 ರೂ., ಗದಗಿನ ಸಾಗರಗೌಡ ದ್ವಿತೀಯ 6001 ರೂ., ಮಂಡ್ಯದ ನಿಖಿಲ್ ಎಲ್ಲಿದಿಯಪ್ಪ ಟಗರು ತೃತೀಯ 4001 ರೂ. ಬಹುಮಾನ ಪಡೆದವು.