
ಕೊಳ್ಳೇಗಾಲ: ತಾಲೂಕಿನ ಮಧ್ಯ ರಂಗನಾಥಸ್ವಾಮಿ ದೇವಾಲಯದಲ್ಲಿ ಸೋಮವಾರ ಮುಂಜಾನೆಯಿಂದಲೇ ವೈಕುಂಠ ಏಕಾದಶಿ ಪೂಜಾ ಕೈಂಕರ್ಯ ಆರಂಭವಾಗಿದೆ.
180 ಕೆಜಿ ಬೆಣ್ಣೆ ಅಲಂಕಾರದೊಂದಿಗೆ ಶ್ರೀ ಮಧ್ಯ ರಂಗನಾಥಸ್ವಾಮಿ ಕಂಗೊಳಿಸುತ್ತಿದ್ದು, ನೂರಾರು ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ.
ಅಂತೆಯೇ ದೇಗುಲದ ರಂಗನಾಯಕಿ ಅಮ್ಮನವರ ಮೂರ್ತಿಯನ್ನು ಹೂವಿನಿಂದ ಅಲಂಕರಿಸಲಾಗಿದೆ. ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್ ಸೇರಿದಂತೆ ಅನೇಕ ಗಣ್ಯರು ದೇಗುಲಕ್ಕೆ ಆಗಮಿಸಿದ್ದಾರೆ. ಕೆಲ ನಿಮಿಷದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ದೇಗುಲಕ್ಕೆ ಭೇಟಿ ನೀಡಲಿದ್ದಾರೆ.