
ಕೊಳ್ಳೇಗಾಲ: ತ್ರಿರಂಗ ಕ್ಷೇತ್ರಗಳ ದರ್ಶನ ಕೈಗೊಂಡಿರುವ ಹಿನ್ನೆಲೆ ಮಾಜಿ ಸಚಿವ ರೇವಣ್ಣ ಇಂದು ತಾಲೂಕಿನ ಶಿವನಸಮುದ್ರ ಬಳಿ ಇರುವ ಮಧ್ಯರಂಗನಾಥಸ್ವಾಮಿ ದೇಗುಲಕ್ಕೆ ಭೇಟಿ ನೀಡುವರು.
ಇದಕ್ಕೂ ಮುನ್ನ ಬೆಳಗ್ಗೆ ಶ್ರೀರಂಗಪಟ್ಟಣದ ಆದಿರಂಗ ಶ್ರೀರಂಗನಾಥಸ್ವಾಮಿಯ ದರ್ಶನ ಪಡೆಯುವರು. ನಂತರ ಮಧ್ಯರಂಗಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುವರು. ವೈಕುಂಟ ಏಕಾದಶಿ ಆಚರಣೆ ಹಿನ್ನಲೆ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ರೇವಣ್ಣ ಮತ್ತು ಮಗ ಸೂರಜ್ ರೇವಣ್ಣ ಪೂಜಾ ಕಾರ್ಯದಲ್ಲಿ ಭಾಗವಹಿಸಿದರು.
ಬಳಿಕ ಮ.ಬೆಟ್ಟ ಮಾರ್ಗವಾಗಿ ತಿರುಚ್ಚಿಯ ಶ್ರೀರಂಗಂನಲ್ಲಿರುವ ಅಂತ್ಯರಂಗ ದೇಗುಲಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.