ಕೆಲವು ವರ್ಷಗಳಿಂದ ಡಯಾಬಿಟಿಸ್ನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಜೀವನ ಶೈಲಿಯಲ್ಲಿ ಎಷ್ಟೊ ಬದಲಾವಣೆ ಆಗುವುದು, ಹೆಚ್ಚಿದ ಮಾನಸಿಕ ಒತ್ತಡಕ್ಕೆ ಗುರಿಯಾಗುವುದು, ಸರಿಯಾಗಿರದ ಆಹಾರ ಪದ್ಧತಿ, ವ್ಯಾಯಾಮದ ಅಭಾವ ಇಂತಹ ಕಾರಣಗಳಿಂದ ಈ ರೋಗವು ಯುವ ವಯಸ್ಸಿನಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
ಸಾಧಾರಣವಾಗಿ ಡಯಾಬಿಟಿಸ್, ರಕ್ತದಲ್ಲಿ ಸಕ್ಕರೆ ಪ್ರಮಾಣವು ಹೆಚ್ಚಾಗಿದ್ದಲ್ಲಿ ಬರುತ್ತದೆ. ಇದು ಚಟುವಟಿಕೆರಹಿತ ಜೀವನ ವ್ಯಾಧಿ. ಮನುಷ್ಯನ ಶರೀರದಲ್ಲಿರುವ ಪ್ಯಾಂಕ್ರಿಯಾಸ್ ಯಾವುದಾದರೂ ಕಾರಣದಿಂದ ಅಗತ್ಯವಿದ್ದಷ್ಟು ಇನ್ಸುಲಿನ್ಉತ್ಪಾದಿಸದಿದ್ದರೆ ಅಥವಾ ಇನ್ಸುಲಿನ್ ಶರೀರದ ಕಣಗಳು ಸಹಜವಾಗಿ ಗ್ರಹಿಸುವ ಪ್ರಕ್ರಿಯೆ ಸ್ಥಗಿತಗೊಂಡಾಗ ಮಧುಮೇಹ ಸಮಸ್ಯೆ ಬಾಧಿಸುತ್ತದೆ.
ಡಯಾಬಿಟಿಸ್ ವಿಧಗಳು
ಟೈಪ್-1: ಡಯಾಬಿಟಿಸ್(ಇನ್ಸುಲಿನ್ ಡಿಪೆಂಡೆಂಟ್ ಡಯಾಬಿಟೀಸ್) ಇದು ಶರೀರದ ರೋಗ ನಿರೋಧಕ ವ್ಯವಸ್ಥೆ. ಪ್ಯಾಂಕ್ರಿಯಾಸ್ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪತ್ತಿಮಾಡುವ ಕಣಗಳನ್ನು ನಾಶಗೊಳಿಸುತ್ತದೆ. ಇದು ಹೆಚ್ಚಾಗಿ 20 ವರ್ಷ ಒಳಗೆ ಇರುವವರಲ್ಲಿ ಕಂಡುಬರುತ್ತದೆ. ಇದು ಆಟೋ ಇಮ್ಯುನಲ್ ವ್ಯಾಧಿ.
ಟೈಪ್-2: ಡಯಾಬಿಟಿಸ್ (ನಾನ್ ಇನ್ಸುಲಿನ್ ಡಿಪೆಂಡೆಂಟ್ ಡಯಾಬಿಟಿಸ್) ಈ ವಿಧದ ಡಯಾಬಿಟಿಸ್ ಹೆಚ್ಚಾಗಿ 30 ವರ್ಷಗಳ ದಾಟಿದವರಲ್ಲಿ ಕಾಣಿಸಿಕೊಳ್ಳುತ್ತದೆ. ವಯಸ್ಸು ಹೆಚ್ಚಾದಾಗ, ಶರೀರದ ಶ್ರಮ ಕಡಿಮೆಯಾದಾಗ, ಮಾನಸಿಕ ಒತ್ತಡ ಹೆಚ್ಚಾದಾಗ, ವಂಶ ಪಾರಂಪರಿಕವಾಗಿ ಈ ಸಮಸ್ಯೆ ಬರುತ್ತದೆ.
ಟೈಪ್-3: ಡಯಾಬಿಟಿಸ್ (ಜೆಸ್ಟಷನಲ್ ಡಯಾಬಿಟಿಸ್): ಇದನ್ನು ಗರ್ಭಿಣಿಯರಲ್ಲಿ ಹೆಚ್ಚಾಗಿ ಕಾಣಬಹುದು
ಲಕ್ಷಣಗಳು
ಬಾಯಾರಿಕೆ ಹೆಚ್ಚಾಗುವುದು, ಅಧಿಕ ಹಸಿವು, ಹೆಚ್ಚಾಗಿ ಮೂತ್ರ ವಿಸರ್ಜನೆ, ಇದ್ದಕ್ಕಿದ್ದ ಹಾಗೆ ತೂಕ ಕಡಿಮೆಯಾಗುವುದು, ತುಂಬಾ ಸುಸ್ತು ಆಗುವುದು, ಕೈ ಕಾಲು ನೋವು ಮತ್ತು ಗಾಯಗಳು ನಿಧಾನವಾಗಿ ಗುಣ ಹೊಂದುವುದು, ಫಂಗಸ್ ಇಂಫೆಕ್ಷನ್, ಚರ್ಮ ಸಮಸ್ಯೆ ಹೆಚ್ಚಾಗಿ ಬರುವುದು, ಲೈಂಗಿಕ ಬಯಕೆ ಕಡಿಮೆಯಾಗುವುದು, ಕೈ ಕಾಲುಗಳು ಜೋಮು ಹಿಡಿಯುವುದು ಇತ್ಯಾದಿ.
ಜೆನಿಟಿಕ್ ಕಾನ್ಸ್ಸ್ಟಿಟ್ಯೂಷನ್ ವಿಧಾನ
ಹೋಮಿಯೋಕೇರ್ ಇಂಟರ್ನ್ಯಾಷನಲ್ ಜೆನಿಟಿಕ್ ಕಾನ್ಸ್ಸ್ಟಿಟ್ಯೂಷನ್ನಲ್ಲಿ ಇದಕ್ಕೆ ಚಿಕಿತ್ಸೆ ಲಭ್ಯವಿದೆ. ಡಯಾಬಿಟಿಸ್ ಇರುವ ವ್ಯಕ್ತಿಗೆ ಚಿಕಿತ್ಸೆ ನೀಡುವುದರಿಂದ ಯಾವುದೇ ಡಯಾಬಿಟಿಸ್ ಕಾಂಪ್ಲಿಕೇಷನ್ ಬರದ ಹಾಗೆ ಪಡೆಯಬಹುದು. ಡಯಾಬಿಟಿಸ್ ಅನ್ನು ಗುರುತಿಸಿದ ನಂತರ ಹೋಮಿಯೋಪಥಿ ಚಿಕಿತ್ಸೆ ನೀಡಲಾಗುವುದು. ಇದರಿಂದ ನೀವು ನಿಮ್ಮ ಬದುಕನ್ನು ಸುಂದರವಾಗಿಸಿಕೊಳ್ಳಬಹುದು.