ಬೆಳಗಾವಿ: ವಡಗಾವಿಯ ರೈತ ಗಲ್ಲಿ ಕ್ರಾಸ್‌ನಲ್ಲಿ ಮದ್ಯದಂಗಡಿ ಆರಂಭಿಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಸ್ಥಳೀಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಆವರಣದಲ್ಲಿ ಗುರುವಾರ ಪ್ರತಿಭಟಿಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ಪ್ರದೇಶದಲ್ಲಿದ್ದ ಮದ್ಯದಂಗಡಿಯನ್ನು 8 ತಿಂಗಳ ಹಿಂದೆ ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಈಗ ಮತ್ತೆ ಕೆಲವರು ಮದ್ಯದಂಗಡಿ ತೆರೆಯಲು ಪ್ರಯತ್ನಿಸುತ್ತಿದ್ದಾರೆ. ಇದೇ ಮಾರ್ಗದಲ್ಲಿ ಶಾಲೆ, ಅಂಗನವಾಡಿ ಕೇಂದ್ರ ಹಾಗೂ ದೇವಸ್ಥಾನವಿದೆ. ಕೃಷಿ ಕಾಯಕಕ್ಕಾಗಿ ಮಹಿಳೆಯರು ನಿತ್ಯ ಸಂಚರಿಸುತ್ತಾರೆ. ಹೀಗಾಗಿ ಮದ್ಯದಂಗಡಿ ತೆರೆದರೆ ಸ್ಥಳೀಯರಿಗೆ ತೊಂದರೆಯಾಗಲಿದೆ. ಹೀಗಾಗಿ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ರಾಜು ಮಾರ್ವೆ, ಮಹಾದೇವ ಪಾಟೀಲ, ಮನೋಜ್ ಲೋಹಾರ, ಅರುಣ ಲೋಹಾರ, ಸುನೀತಾ ಲೋಹಾರ, ರಾಕೇಶ ಬಳಗೇಕರ, ಉದಯ ಕಿತ್ತೂರ, ಮೈನುದ್ದೀನ್ ಯರಗಟ್ಟಿ ಇತರರಿದ್ದರು.