ಮದ್ಯದಂಗಡಿ ಸ್ಥಳಾಂತರಿಸಿ

ಧಾರವಾಡ: ಇಲ್ಲಿನ ಹೆಬ್ಬಳ್ಳಿ ಅಗಸಿ ಹತ್ತಿರ ಹೊಸದಾಗಿ ಆರಂಭಿಸಿರುವ ಆರ್.ಎಸ್. ಪ್ರಭಾಕರ ಮಾಲೀಕತ್ವದ ನಟರಾಜ್ ಮದ್ಯದ ಅಂಗಡಿಯನ್ನು ಸ್ಥಳಾಂತರಿಸಲು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ಪ್ರದೇಶದಲ್ಲಿ ವೈನ್​ಶಾಪ್ ಆರಂಭಿಸಲು ಸ್ಥಳೀಯ ನಿವಾಸಿಗಳ ಅನುಮತಿ ಪಡೆದಿಲ್ಲ. ಮದ್ಯದ ಅಂಗಡಿ ಸಮೀಪದಲ್ಲಿ ಅಂಗನವಾಡಿ ಕೇಂದ್ರಗಳಿದ್ದು, ಮಕ್ಕಳು, ಮಹಿಳೆಯರಿಗೆ ತೀವ್ರ ತೊಂದರೆಯಾಗುತ್ತದೆ. ವೈನ್​ಶಾಪ್ ಮುಂದುವರಿಸಿದರೆ ಈ ಪ್ರದೇಶದಲ್ಲಿ ಶಾಂತತೆಗೆ ಭಂಗ ಬರುತ್ತದೆ. ಹೀಗಾಗಿ ಮದ್ಯದ ಅಂಗಡಿ ತೆರೆಯದಂತೆ ಸ್ಥಳೀಯರು ಆಕ್ಷೇಪ ಮಾಡಿದ್ದರೂ ಮಾಲೀಕರು ಮತ್ತೆ ಅಂಗಡಿ ಆರಂಭಿಸಿದ್ದು ಖಂಡನೀಯ. ಆದ್ದರಿಂದ ಮದ್ಯದ ಅಂಗಡಿಯನ್ನು ಸ್ಥಳಾಂತರಿಸಲು ಸೂಕ್ತ ಆದೇಶ ನೀಡುವಂತೆ ಒತ್ತಾಯಿಸಿದರು.

ಪ್ರತಿಭಟನಾಕಾರರು ವೈನ್​ಶಾಪ್ ಮಾಲೀಕರ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿದರು. ಅಲ್ಲದೆ, ಖುದ್ದು ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಬೇಕು ಎಂದು ಪ್ರತಿಭನಾಕಾರರು ಪಟ್ಟು ಹಿಡಿದರು. ನಂತರ ಅಪರ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಆಗಮಿಸಿ ಮನವಿ ಸ್ವೀಕರಿಸಿ, ವೈನ್​ಶಾಪ್ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ ಮಧ್ಯಪ್ರವೇಶ ಸಾಧ್ಯವಿಲ್ಲ. ಒಂದುವೇಳೆ ನ್ಯಾಯಾಲಯ ಸೂಚಿಸಿದರೆ ಸ್ಥಳಾಂತರ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸುರೇಶ ಪಟ್ಟಣಶೆಟ್ಟಿ, ಶಂಕರ ಶೆಳಕೆ, ಸರೋಜಾ ಪಾಟೀಲ, ನಿರ್ಮಲಾ ಜವಳಿ, ಗಣೇಶ ಪಾಟೀಲ, ರವಿ ಯಲಿಗಾರ, ನಾಗಪ್ಪ ಹಾವೇರಿ, ಜಿ.ಎಂ. ಮಂಗಳಗಟ್ಟಿ, ನಿಂಗಪ್ಪ ಬೆಟಗೇರಿ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *