ಮದ್ದಾನೇಶ್ವರ ವಿದ್ಯಾಸಂಸ್ಥೆಗೆ ಅತ್ಯುತ್ತಮ ಫಲಿತಾಂಶ

blank

ಗುಂಡ್ಲುಪೇಟೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಟ್ಟಣದ ಮದ್ದಾನೇಶ್ವರ ವಿದ್ಯಾಸಂಸ್ಥೆಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಅತ್ಯುತ್ತಮ ಫಲಿತಾಂಶ ಬಂದಿದೆ.
ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 41 ವಿದ್ಯಾರ್ಥಿಗಳಲ್ಲಿ 39 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 96 ಫಲಿತಾಂಶ ಬಂದಿದೆ. 3 ವಿದ್ಯಾರ್ಥಿಗಳು ಅತ್ಯುನ್ನತ, 3 ಪ್ರಥಮ ದರ್ಜೆ, 28 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಹಾಗೂ 8 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 90 ವಿದ್ಯಾರ್ಥಿಗಳಲ್ಲಿ ಅತ್ಯುನ್ನತ ದರ್ಜೆಯಲ್ಲಿ, 22 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ 58 ಹಾಗೂ ದ್ವಿತೀಯ ದರ್ಜೆಯಲ್ಲಿ 8 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಮಲ್ಲಮ್ಮ ಚಮಲ್ 547 ಅಂಕ ಹಾಗೂ ಸಂಜನಾ.ಕೆ 545 ಅಂಕ, ಕಿರಣ್.ಆರ್ 533 ಅಂಕ ಪಡೆದಿದ್ದಾರೆ.
ಆಂಗ್ಲ ಮಾಧ್ಯಮದಲ್ಲಿ ಸ್ಪಂದನಾ 595, ತೇಜು 594, ಐಶ್ವರ್ಯ 592, ಐಶ್ವರ್ಯ 567, ಅಮೂಲ್ಯಾ ಎಂ 564, ಚಂದನಾ.ಕೆ 568, ಜೀವಿತಾ .ಕೆ.ಎಸ್ 577, ಲೀನಾ 567, ಸಂಕಲ್ಪ 585, ಸಿಂಚನಾ 566, ಯೋಗೇಶ್ 571, ಬಿಂದು.ಎಸ್ 574, ಗಣೇಶ್ 567 ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸಂಸ್ಥೆಯ ಅಧ್ಯಕ್ಷ ಶಿವಲಿಂಗೇಂದ್ರ ಸ್ವಾಮೀಜಿ ಹಾಗೂ ಕಾರ್ಯದರ್ಶಿ ಎಂ.ಸಿ.ಸ್ವಾಮಿ ಅಭಿನಂದಿಸಿದ್ದಾರೆ.

ಎಚ್.ಎಸ್.ಸ್ಪಂದನಾಗೆ 595 ಅಂಕ: ಮದ್ದಾನೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಎಚ್.ಎಸ್.ಸ್ಪಂದನಾ 595 ಅಂಕ ಗಳಿಸುವ ಮೂಲಕ ಶಾಲೆಯ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.
‘ವಿಜಯವಾಣಿ’ ವಿದ್ಯಾರ್ಥಿ ಮಿತ್ರ ಓದುತ್ತಿದ್ದುದರಿಂದ ಹೆಚ್ಚು ಅಂಕ ಗಳಿಸಲು ಸಾಧ್ಯವಾಗಿದೆ ಎಂದಿರುವ ಸ್ಪಂದನಾ, ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಳ್ಳುವ ಆಸೆ ವ್ಯಕ್ತಪಡಿಸಿದ್ದಾಳೆ. ಈಕೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದ ನಿವಾಸಿ, ವಿಜಯವಾಣಿ ಏಜೆಂಟ್ ಸಿದ್ದಪ್ಪ ಅವರ ಪುತ್ರಿ.

Share This Article

ಬೇಸಿಗೆ ತಂಪಾಗಿರಲು ಹಾಲು ಹಾಕದ ಮಿಲ್ಕ್ ಶೇಕ್

ಬೇಸಿಗೆಯಲ್ಲೂ ನಮ್ಮನ್ನು ತಂಪಾಗಿಟ್ಟು, ಸಾಮಾನ್ಯವಾಗಿ ಆಗುವ ಸುಸ್ತನ್ನು ಕಡಿಮೆ ಮಾಡುವ ವಿಶೇಷ ಮಿಲ್ಕ್ ಶೇಕ್ ಬಗ್ಗೆ…

ಈ ಮಸಾಲೆಗಳು ವಿಟಮಿನ್ ಬಿ 12 ವೇಗವಾಗಿ ಹೆಚ್ಚಾಗಲು ಸಹಕರಿಸುತ್ತವೆ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಜೀವಸತ್ವಗಳು ದೇಹದ ಕಾರ್ಯನಿರ್ವಹಣೆಗೆ ಮಾತ್ರ ಅಗತ್ಯವಲ್ಲ, ಅವು ಶಕ್ತಿಯನ್ನು ಸಹ ಒದಗಿಸುತ್ತವೆ. ಅವುಗಳ ಕೊರತೆಯು ನರಗಳು,…

ಪಿರಿಯಡ್ಸ್​ ನೋವನ್ನು ಕಡಿಮೆ ಮಾಡುವುದು ಹೇಗೆ?; ಮಹಿಳೆಯರು ತಿಳಿದುಕೊಳ್ಳಲೆಬೇಕಾದ ಮಾಹಿತಿ | Health Tips

ಋತುಬಂಧವನ್ನು ಈ ರೀತಿ ಅರ್ಥಮಾಡಿಕೊಳ್ಳಬಹುದು. ಋತುಬಂಧ ಎಂಬ ಪದವು ಎರಡು ಗ್ರೀಕ್ ಪದಗಳಿಂದ ಬಂದಿದೆ. ಮೆನೊ…