ಮದುವೆ ಊಟ ಸೇವಿಸಿ 20 ಮಂದಿ ಅಸ್ವಸ್ಥ

ಬಾಗೇಪಲ್ಲಿ: ಮದುವೆ ಊಟ ಸೇವಿಸಿದ 20 ಮಂದಿ ಅಸ್ವಸ್ಥಗೊಂಡು ಪಾತಪಾಳ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸೋಮನಾಥಪುರ ಗ್ರಾಪಂನ ಮಂಗಳಮಡುಗುವಾರಪಲ್ಲಿ ಗ್ರಾಮದಲ್ಲಿ ಭಾನುವಾರ ಆರತಕ್ಷತೆ ನಡೆದಿದ್ದು, ಇಲ್ಲಿ ಊಟ ಸೇವಿಸಿದ 20 ಜನರಿಗೆ ಸೋಮವಾರ ಬೆಳಗ್ಗೆ ಹೊಟ್ಟೆ ನೋವು, ವಾಂತಿ, ಬೇಧಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಇವರನ್ನು ಪಾತಪಾಳ್ಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕಲುಷಿತ ನೀರಿನಿಂದ ಸಿದ್ಧಪಡಿಸಿದ ಆಹಾರ ಸೇವನೆಯೇ ಅಸ್ವಸ್ಥತೆಗೆ ಕಾರಣ ಎನ್ನಲಾಗಿದೆ. ಪಾತಪಾಳ್ಯ ಆಸ್ಪತ್ರೆ ವೈದ್ಯಾಧಿಕಾರಿಯಿಂದ ಮಾಹಿತಿ ಪಡೆದ ಟಿಎಚ್​ಒ ಸಿ.ಎನ್.ಸತ್ಯನಾರಾಯಣರೆಡ್ಡಿ ಆಸ್ಪತ್ರೆಗೆ ಹಾಗೂ ಎಂ.ಎಂ.ಪಲ್ಲಿಗೆ ಭೇಟಿ ನೀಡಿ ಅಡುಗೆಗೆ ಬಳಸಲಾಗಿದ್ದ ಆಹಾರ ಪದಾರ್ಥ ಹಾಗೂ ನೀರನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.

Leave a Reply

Your email address will not be published. Required fields are marked *