ಕೊಳ್ಳೇಗಾಲ: ಕಳೆದ ಆರು ತಿಂಗಳ ಹಿಂದೆ ಸಂಬಂಧಿಕರ ಮದುವೆಗೆ ಹೋಗಿ ಬರುವುದಾಗಿ ಹೇಳಿ ಸ್ನೇಹಿತೆಯೊಬ್ಬಳಿಂದ 45 ಗ್ರಾಂ ಚಿನ್ನದ ಸರವನ್ನು ಪಡೆದು ಖಾಸಗಿ ಗೋಲ್ಡ್ ಫೈನಾನ್ಸ್‌ನಲ್ಲಿ ಗಿರಿವಿ ಇಟ್ಟು ಹಣ ಪಡೆದಿರುವ ಪ್ರಕರಣ ನಡೆದಿದ್ದು, ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಟ್ಟಣದ ಮುನೇಶ್ವರ ದೇವಸ್ಥಾನ ಬೀದಿಯ ಅಂಗನವಾಡಿ ನಿವೃತ್ತ ಕಾರ್ಯಕರ್ತೆ ಕೆ.ಪ್ರೇಮಾ ಎಂಬುವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿ, ನನ್ನನ್ನು ವಂಚಿಸಿರುವ ಮೈಸೂರು ಹೆಬ್ಬಾಳು ನಿವಾಸಿ ಸುಮತಿ ಹಾಗೂ ಕೊಳ್ಳೇಗಾಲ ನಾಯಕರ ಬೀದಿ ನಿವಾಸಿ ಪಾರ್ವತಿ ವಿರುದ್ಧ ಕಾನೂನು ಕ್ರಮ ಕೈಗೊಂಡು 3.15 ಲಕ್ಷ ರೂ.ಬೆಲೆ ಬಾಳುವ 45 ಗ್ರಾಂ ಚಿನ್ನವನ್ನು ವಾಪಸ್ ಕೊಡಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಪಟ್ಟಣ ಪೊಲೀಸ್ ಠಾಣೆ ಪಿಎಸ್‌ಐ ವರ್ಷಾ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
TAGGED:Kollegala news