ಮತ ಎಣಿಕೆಯಂದು ಮದ್ಯ ಮಾರಾಟ ನಿಷೇಧ

ಶಿವಮೊಗ್ಗ: ಶಿವಮೊಗ್ಗ ಲೋಕಸಭೆ ಮತ ಎಣಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾ ಚುನಾವಣಾಧಿಕಾರಿ ಕೆ.ಎ.ದಯಾನಂದ ಆದೇಶ ಹೊರಡಿಸಿದ್ದಾರೆ. ಮೇ 23ಕ್ಕೆ ಲೋಕಸಭೆ ಚುನಾವಣೆ ಮತ ಎಣಿಕೆ ನಡೆಯಲಿದ್ದು ಮುಂಜಾಗ್ರತಾ ಕ್ರಮವಾಗಿ 22ರ ಮಧ್ಯರಾತ್ರಿ 12ರಿಂದ 23ರ ಮಧ್ಯರಾತ್ರಿ 12ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಅದೇ ರೀತಿ ಮೇ 29ರಂದು ಹೊಸನಗರ ಪಪಂ, ಶಿರಾಳಕೊಪ್ಪ ಪಪಂ, ಸಾಗರ ನಗರಸಭೆ, ಸೊರಬ ಪಪಂ ಹಾಗೂ ಶಿಕಾರಿಪುರ ಪುರಸಭೆಗೆ ಮತದಾನ ಹಾಗೂ ಜೂನ್ 3ರಂದು ಮತ ಎಣಿಕೆ ನಡೆಯಲಿದೆ. ಹಾಗಾಗಿ ಮೇ 27ರ ಸಂಜೆ 6ರಿಂದ 29ರ ಮಧ್ಯರಾತ್ರಿ 12ರವರೆಗೆ ಹಾಗೂ ಜೂನ್ 2ರ ಮಧ್ಯರಾತ್ರಿ 12ರಿಂದ 3ರ ಮಧ್ಯರಾತ್ರಿ 12ರವರೆಗೆ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.