17 C
Bangalore
Monday, December 9, 2019

ಮತ್ತೊಂದು ಹೇಸಿಗೆ ಮಡ್ಡಿ ಸೃಷ್ಟಿ

Latest News

ಉಪಚುನಾವಣೆ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಅಸ್ಥಿರತೆಗೆ ಅಂತ್ಯ ಹಾಡುತ್ತಾ?

ಬೆಂಗಳೂರು: ಕಳೆದ ಆರು ತಿಂಗಳಿನಿಂದ ರಾಜ್ಯದಲ್ಲಿದ್ದ ರಾಜಕೀಯ ಅಸ್ಥಿರತೆಯ ಗ್ರಹಣ ಸೋಮವಾರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಉಪಚುನಾವಣೆಯ ಮತದಾನೋತ್ತರ ಸಮೀಕ್ಷೆಗಳಂತೆಯೇ ಜನಾಭಿಪ್ರಾಯ ರೂಪುಗೊಂಡಿದ್ದರೆ, ಬಿಜೆಪಿ...

ಕೋಟಿ ರೂ. ವೆಚ್ಚದಲ್ಲಿ ಗಟಾರ ನಿರ್ಮಾಣ

ಹುಬ್ಬಳ್ಳಿ: ಇಲ್ಲಿಯ ಬಿಡ್ನಾಳ ಮುಖ್ಯ ರಸ್ತೆಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಗಟಾರ ನಿರ್ವಿುಸಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ನೀರು ಇರುವುದೇ ಪೋಲು ಮಾಡಲು!

ಹುಬ್ಬಳ್ಳಿ: ಜಲ ಮಂಡಳಿ ತಾನೇ ಹೊಸ ನಿಯಮವೊಂದನ್ನು ಕಂಡುಕೊಂಡಿದೆ. ಅದೇನು ಎನ್ನುವ ಆಶ್ಚರ್ಯವೇ? ನೀರು ಇರುವುದೇ ಪೋಲು ಮಾಡಲು ಎನ್ನುವುದು!

ಈಜಿಪ್ತ್ ಈರುಳ್ಳಿ ಕೊಳ್ಳುವವರೇ ಇಲ್ಲ

ಹುಬ್ಬಳ್ಳಿ: ಇಲ್ಲಿಗೆ ತರಿಸಲಾಗಿದ್ದ ಈಜಿಪ್ತ್ ಈರುಳ್ಳಿಗೆ ಖರೀದಿದಾರರು ಟೆಂಡರ್ ಹಾಕಿಲ್ಲ. ಹೀಗಾಗಿ, ಈಜಿಪ್ತ್ ಈರುಳ್ಳಿಯನ್ನು ಬೇರೆ ಮಾರುಕಟ್ಟೆಗೆ ಕೊಂಡೊಯ್ಯಲಾಗಿದೆ.

ನಿರಾಶೆ ಭಾವ ತಗ್ಗಿಸಿದ ತೃಪ್ತಿ

ಕಲಘಟಗಿ: ಹಳ್ಳಿಗಳ ನಿರುದ್ಯೋಗಿ ಯುವ ಸಮೂಹದಲ್ಲಿ ವಿದ್ಯಾವಂತ ರಾಗಿಯೂ ಉದ್ಯೋಗವಿಲ್ಲ ಎಂಬ ನಿರಾಶೆ ಭಾವನೆಯನ್ನು ಕಿಂಚಿತ್ತಾದರೂ ತಗ್ಗಿಸಿದ ಆತ್ಮತೃಪ್ತಿ ಇದೆ ಎಂದು ಶಾಸಕ...

ಹುಬ್ಬಳ್ಳಿ: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನ ನಿಲ್ದಾಣ ರಸ್ತೆ ಬದಿ ಕಟ್ಟಡ ತ್ಯಾಜ್ಯ, ಕಸದ ರಾಶಿ ಹಾಕಲಾಗುತ್ತಿದ್ದು, ಸುಂದರ ವಾತಾವರಣದಲ್ಲಿ ಮತ್ತೊಂದು ಹೇಸಿಗೆ ಮಡ್ಡಿ ನಿರ್ವಣವಾಗುತ್ತಿರುವಂತೆ ಭಾಸವಾಗುತ್ತಿದೆ.

ಸ್ಮಾರ್ಟ್ ಸಿಟಿ, ಅಮೃತ ಯೋಜನೆಯಡಿ ಸಾವಿರಾರು ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ಆರಂಭಿಸಿರುವ ಮಹಾನಗರ ಪಾಲಿಕೆ ಅಧಿಕಾರಿಗಳು, ಸ್ವಚ್ಛ ಭಾರತ ಯೋಜನೆಯನ್ನೇ ಮರೆತಂತಿದೆ. ವಿಮಾನ ನಿಲ್ದಾಣದ ಬಳಿ ಕೆಎಲ್​ಇ ತಾಂತ್ರಿಕ ಮಹಾವಿದ್ಯಾಲಯದ ಎದುರು ಹಾಗೂ ದೇಶಪಾಂಡೆ ಪ್ರತಿಷ್ಠಾನದ ಎದುರಿನ ಮುಖ್ಯರಸ್ತೆಗೆ ಅಂಟಿಕೊಂಡು ಕಸದ ರಾಶಿ ಸೃಷ್ಟಿಯಾಗಿದೆ. ವಾಹನ ಸವಾರರಿಗೆ ಕಸದ ರಾಶಿ ವಾಕರಿಕೆ ತರಿಸುತ್ತಿದೆ. ಇದರಿಂದಾಗಿ ಕಾರವಾರ ರಸ್ತೆಯ ಡಂಪಿಂಗ್ ಯಾರ್ಡ್ (ಹೇಸಿಗೆ ಮಡ್ಡಿ) ರೀತಿಯಲ್ಲೇ ಮತ್ತೊಂದು ಹೇಸಿಗೆ ಮಡ್ಡಿ ನಿರ್ವಣವಾಗುತ್ತಿದೆಯಾ ಎಂಬ ಸಂಶಯ ಮೂಡುತ್ತದೆ.

ಹು-ಧಾ ಅವಳಿ ನಗರದ ಸುಂದರವಾದ ರಸ್ತೆಗಳಲ್ಲಿ ವಿಮಾನ ನಿಲ್ದಾಣ ರಸ್ತೆಯೂ ಒಂದು. ಅಲ್ಲಲ್ಲಿ ಕೆರೆ ಕಟ್ಟೆಗಳು, ಹಸಿರಿನಿಂದ ಕಂಗೊಳಿಸುವ ವಾತಾವರಣದಿಂದ ವಾಹನ ಸವಾರರು ಇಲ್ಲಿ ಸಂಚರಿಸುವಾಗ ಆಹ್ಲಾದಕರ ವಾತಾವರಣ ಅನುಭವಿಸುತ್ತಾರೆ. ಆದರೆ, ಇತ್ತೀಚೆಗೆ ಈ ರಸ್ತೆಬದಿ ರಾಜಾರೋಷವಾಗಿ ಕಟ್ಟಡದ ತ್ಯಾಜ್ಯ, ತೆಂಗಿನ ಚಿಪ್ಪು, ಪ್ಲಾಸ್ಟಿಕ್, ರಟ್ಟಿನ ಬಾಕ್ಸ್, ಮದ್ಯದ ಟೆಟ್ರಾ ಪ್ಯಾಕೆಟ್, ಬಾಟಲಿಗಳನ್ನು ಸುರಿಯುತ್ತಿದ್ದಾರೆ. ಇದರಿಂದ ನಗರದ ಸೌಂದರ್ಯ ಕೆಡುತ್ತಿದೆ.

ಹುಬ್ಬಳ್ಳಿ ಮಾನ ಹರಾಜು

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿಗರು, ಅಧಿಕಾರಿಗಳು, ವಿದೇಶಿಗರು, ಸೆಲೆಬ್ರಿಟಿಗಳು ಸೇರಿ ಗಣ್ಯಾತಿ ಗಣ್ಯರು ಆಗಮಿಸುತ್ತಿರುತ್ತಾರೆ. ಈ ವೇಳೆ ರಸ್ತೆಬದಿ ಅಸಹ್ಯ ಹುಟ್ಟಿಸುವ ಹೇಸಿಗೆ ಮಡ್ಡಿಯಂಥ ವಾತಾವರಣ ಇದ್ದರೆ ಹೇಗೆ ? ಹುಬ್ಬಳ್ಳಿ ಮಾನ ಹರಾಜು ಹಾಕಿದಂತಲ್ಲವೇ ? ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲವೇಕೆ ಎಂಬ ಪ್ರಶ್ನೆ ಕೇಳಿಬಂದಿದೆ.

ಜನರಲ್ಲಿ ರೋಗದ ಭೀತಿ

ಗೋಕುಲ ಗ್ರಾಮ ವ್ಯಾಪ್ತಿಯ ಸ್ಮಶಾನದ ಕಾಂಪೌಂಡ್ ಎದುರು ದೊಡ್ಡ ಕಸದ ರಾಶಿಯೇ ನಿರ್ವಣವಾಗುತ್ತಿದೆ. ಅಂದಾಜು ಎರಡು ಎಕರೆ ಜಾಗದಲ್ಲಿ ಎಲ್ಲೆಂದರಲ್ಲಿ ಕಸ ಚೆಲ್ಲಲಾಗಿದೆ. ಕಸ ಗಾಳಿಗೆ ಹಾರಿಕೊಂಡು ಗೋಕುಲ ಗ್ರಾಮದ ಕಡೆ ಬರುತ್ತಿದೆ. ಇದರಿಂದ ಗ್ರಾಮಸ್ಥರಲ್ಲಿ ರೋಗದ ಭೀತಿ ಉಂಟಾಗಿದೆ. ಕಸದಿಂದ ಮುಕ್ತಿ ಕೊಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಮಾನ ಹಾರಾಟಕ್ಕೆ ತೊಂದರೆ ಸಾಧ್ಯತೆ

ಕಸದ ರಾಶಿ ಇದ್ದಲ್ಲಿ ರಣಹದ್ದು, ಕಾಗೆಯಂಥ ಪಕ್ಷಿಗಳು ಹಾರಾಡುತ್ತಿರುತ್ತವೆ. ವಿಮಾನ ನಿಲ್ದಾಣದ ಸಮೀಪವೇ ಕಸದ ರಾಶಿ ಇದೆ. ಇದರಿಂದ ವಿಮಾನ ಹಾರಾಟಕ್ಕೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ. ನಾಲ್ಕೈದು ವರ್ಷಗಳ ಹಿಂದೆ ಸ್ಪೈಸ್​ಜೆಟ್ ವಿಮಾನಕ್ಕೆ ಪಕ್ಷಿಯೊಂದು ಬಡಿದ ಪರಿಣಾಮ ಸಂಚಾರ ರದ್ದಾಗಿತ್ತು. ಇಂತಹ ಘಟನೆಗಳು ಮರುಕಳಿಸಲು ಈ ಕಸದ ರಾಶಿ ಕಾರಣ ಆಗಲೂಬಹುದು ಎಚ್ಚರ..!

ವಿಮಾನ ನಿಲ್ದಾಣದ ರಸ್ತೆಬದಿ ಪಾಲಿಕೆ ಸಿಬ್ಬಂದಿ ಕಸ ಎಸೆದಿಲ್ಲ. ರಾತ್ರೋ ರಾತ್ರಿ ಬಂದು ಯಾರೋ ಕಸ ಚೆಲ್ಲಿ ಹೋಗುತ್ತಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು. ಸದ್ಯದಲ್ಲೇ ಕಸ ತೆರವುಗೊಳಿಸಲಾಗುವುದು.

| ಪಿ.ಡಿ. ಗಾಳೆಮ್ಮನವರ, ಸಹಾಯಕ ಆಯುಕ್ತ, ಮಹಾನಗರ ಪಾಲಿಕೆ

 

Stay connected

278,745FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...