ಮತ್ತೆ ಕರಿಕೋಟು ಧರಿಸಿದ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ

ಬೆಂಗಳೂರು: ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಮತ್ತೆ ವಕೀಲ ವೃತ್ತಿ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸೋಮವಾರ ಬೆಳಗ್ಗೆ ಕಪು್ಪ ಕೋಟ್ ಧರಿಸಿ ಹೈಕೋರ್ಟ್​ಗೆ ಬಂದಿದ್ದ ಅವರು ಕಾರಿಡಾರ್​ನಲ್ಲಿ ಓಡಾಡುತ್ತ, ಪರಿಯಚವಿದ್ದ ವಕೀಲರನ್ನು ಮಾತನಾಡಿಸಿದರು. ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ, ಹಿರಿಯ ವಕೀಲ ಡಿಎಲ್​ಎನ್ ರಾವ್, ವಕೀಲರಾದ ರವೀಂದ್ರನಾಥ್ ಕಾಮತ್ ಹಾಗೂ ಕಲ್ಯಾಣ ಬಸವರಾಜ್ ಜತೆ ಕೆಲಕಾಲ ಮಾತನಾಡಿ, ಕ್ಯಾಂಟೀನ್​ನಲ್ಲಿ ಚಹಾ ಸೇವಿಸಿ ಹೈಕೋರ್ಟ್​ನಿಂದ ನಿರ್ಗಮಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮೊಯ್ಲಿ, ನಾನು ಮೂಲತಃ ವಕೀಲ. ರಾಜಕಾರಣದಲ್ಲಿ ಸಕ್ರಿಯವಾಗಿದ್ದಕ್ಕೆ ತಾತ್ಕಾಲಿಕವಾಗಿ ವಕೀಲಿಕೆಯಿಂದ ದೂರವಿದ್ದೆ. 2004ರಲ್ಲಿ ಪ್ರಕರಣವೊಂದರ ಸಂಬಂಧ ಹೈಕೋರ್ಟ್​ಗೆ ಹಾಜರಾಗಿದ್ದೆ. ಇನ್ನು ಮುಂದೆ ವಕೀಲಿಕೆ ಮುಂದುವರಿಸುತ್ತೇನೆ ಎಂದರು.

Leave a Reply

Your email address will not be published. Required fields are marked *