More

  ಮತ್ತೆರಡು ಕಡೆ ಚುನಾವಣೆ ಬಹಿಷ್ಕಾರದ ಕೂಗು

  ರಿಪ್ಪನ್‍ಪೇಟೆ: ಕಳೆದ 20 ವರ್ಷಗಳಿಂದ ಗ್ರಾಮದ ರಸ್ತೆಸಹಿತ ಮೂಲ ಸೌಕರ್ಯಗಳ ಅಭಿವೃದ್ಧಿ ಮಾಡುವಲ್ಲಿ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ತೋರಲಾಗಿದೆ. ಹೀಗಾಗಿ ಈ ಬಾರಿ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಹುಂಚದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಂಬ್ಳೆಬೈಲು-ಸಣ್ಣಮನೆ ಗ್ರಾಮಸ್ಥರು ಬೆದರಿಕೆ ಹಾಕಿದ್ದಾರೆ.
  ತೀರ್ಥಹಳ್ಳಿ ಕ್ಷೇತ್ರದ ಉಂಬ್ಳೆಬೈಲು ಕ್ರೀಡಾಂಗಣದಲ್ಲಿ ಗ್ರಾಮಸ್ಥರು ಸಭೆ ಸೇರಿ ಚರ್ಚಿಸಿದ ನಂತರ ಈ ನಿರ್ಧಾರ ಪ್ರಕಟಿಸಿದ್ದಾರೆ. ಮಾದಲಮನೆ, ಸಣ್ಣಮನೆ ಮತ್ತು ಕಪ್ಪೆಹೊಂಡದಲ್ಲಿ ಸಣ್ಣ ರೈತರು ಹಾಗೂ ಕೂಲಿಕಾರ್ಮಿಕರು ವಾಸವಿದ್ದಾರೆ. ಜನಪ್ರತಿನಿ„ಗಳು ಇಲ್ಲಿನ ಜನರ ಬೇಡಿಕೆಯನ್ನು ಈಡೇರಿಸಿಲ್ಲ.ಓಡಾಡಲು  ಕಚ್ಛಾರಸ್ತೆಯೇ ಅನಿವಾರ್ಯವಾಗಿದೆ. ಮಳೆಗಾಲ ಬಂತೆಂದರೆ ರಸ್ತೆಯಲ್ಲಿ ಓಡಾಡುವುದೇ ದುಸ್ತರವಾಗಿದ್ದು ಪ್ರತಿ ವರ್ಷ ಮೂರ್ನಾಲ್ಕು ತಿಂಗಳು ಬಹಳ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಗ್ರಾಪಂ ಸದಸ್ಯ ಎಸ್.ಕೆ.ಶಿವಾನಂದ ದೂರಿದರು.
  ನಮ್ಮ ಗ್ರಾಮಕ್ಕೆ ನಾಲ್ಕು ಸಂಪರ್ಕ ರಸ್ತೆಗಳಿದ್ದು ಇದುವರೆಗೆ ಒಂದು ರಸ್ತೆಯನ್ನೂ ಅಭಿವೃದ್ಧಿ ಪಡಿಸಲು ಜನಪ್ರತಿನಿ„ಗಳು ಆಸಕ್ತಿ ವಹಿಸಿಲ್ಲ.  ಅವರ ಭರವಸೆಯನ್ನು ಚುನಾವಣಾ ಘೋಷಣಾ ದಿನದವರೆಗೂ ಕಾದಿದ್ದೇವೆ. ಆದರೆ ಇನ್ನೂ ಕಾಯುವ ತಾಳ್ಮೆ ನಮ್ಮಲ್ಲಿ ಉಳಿದಿಲ್ಲ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ನಾಗೇಶ ಉಂಬ್ಳೆಬೈಲು ಹರಿಹಾಯ್ದರು. ಚುನಾವಣಾ ಬಹಿಷ್ಕಾರದ -Àಲಕ ಹಿಡಿದು ಘೋಷಣೆ ಕೂಗುತ್ತ ಅಂಗನವಾಡಿ ಕೇಂದ್ರದಿಂದ ಹುತ್ತಳ್ಳಿ-ಗರ್ತಿಕೆರೆ ಮುಖ್ಯರಸ್ತೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಗ್ರಾಪಂ ಮಾಜಿ ಸದಸ್ಯೆ ಶೈಲಜಾ ವೆಂಕಟಾಚಲ, ಸೀತಾರಾಮ, ಗಣೇಶ, ಉಮೇಶ ಮಾದಲಮನೆ, ಮುರುಳಿ, ಕೃಷ್ಣಮೂರ್ತಿ, ವಿರೂಪಾಕ್ಷ, ಶಿವಮೂರ್ತಿ, ರಮೇಶ, ಪ್ರಮೋದ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts