22.5 C
Bengaluru
Thursday, January 23, 2020

ಮತದಾನೋತ್ತರ ಸಮೀಕ್ಷೆ: ಎನ್​ಡಿಎ ಮೈತ್ರಿಕೂಟಕ್ಕೆ ಮತ್ತೊಮ್ಮೆ ಅಧಿಕಾರ ಸಾಧ್ಯತೆ

Latest News

ಶನಿ ಸಂಚಾರ ಯಾರಿಗೆ ವರ, ಯಾರಿಗೆ ಗ್ರಹಚಾರ

ಶುಕ್ರವಾರ 33 ವರ್ಷದ ನಂತರ ಶನಿ ತನ್ನ ಮನೆಗೆ ಬರುತ್ತಾನೆ. ಒಂದು ಮನೆಯಿಂದ ಮತ್ತೊಂದು ಮನೆಗೆ ದಾಟಲು 2 ವರ್ಷ 8 ತಿಂಗಳು...

ಕೌಟುಂಬಿಕ ಕಲಹಕ್ಕೆ ನಲುಗಿದ ತಾಯಿ ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ

ಚಿಕ್ಕೋಡಿ: ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ಕಾಲುವೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಕ್ಕೇರಿ ತಾಲೂಕಿನ ನೊಗನಿಹಾಳ ಗ್ರಾಮದಲ್ಲಿ...

ಆಸ್ಪತ್ರೆ ಶುಚಿತ್ವಕ್ಕೆ ಮದ್ದರೆದ ಸಚಿವರ ವಾಸ್ತವ್ಯ

ಚಿತ್ರದುರ್ಗ: ಆರೋಗ್ಯ ಸಚಿವ ಶ್ರೀರಾಮುಲು ಅವರು ಗುರುವಾರ ರಾತ್ರಿ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತೆ ಇಣುಕಿದೆ. ಮೈಸೂರಿನಲ್ಲಿದ್ದ ಸಚಿವರು ರಾತ್ರಿ 11-30ರ...

ಹಾಫ್ ಬಾಯಿಲ್ಡ್ ರೆಡಿ; ಬ್ಯಾಚಲರ್​ ಬಾಯ್ಸ್​ ಕಾಮಿಡಿ ಸಿನಿಮಾ

‘ಹಾಫ್ ಬಾಯಿಲ್ಡ್’ ರೆಡಿಯಾಗಿದೆ. ಹಾಗಂತ ಇದು ಹಾಫ್ ಬಾಯಿಲ್ಡ್ ಮೊಟ್ಟೆ ಅಲ್ಲ, ‘ನಾವೆಲ್ರೂ ಹಾಫ್ ಬಾಯಿಲ್ಡ್’ ಎಂಬ ಚಿತ್ರ. ಹೀಗೊಂದು ವಿಭಿನ್ನ ಶೀರ್ಷಿಕೆ ಇಟ್ಟುಕೊಂಡು ಕನ್ನಡದಲ್ಲಿ...

ಜಿಲ್ಲಾ ಪೊಲೀಸ್ ಇಲಾಖೆಗೆ ಕಾಯಕಲ್ಪ

ಆದರ್ಶ್ ಅದ್ಕಲೇಗಾರ್ ಮಡಿಕೇರಿಜಿಲ್ಲೆಯ ಪೊಲೀಸ್ ಇಲಾಖೆಗೆ ಮತ್ತಷ್ಟು ಬಲ ತುಂಬಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾರ್ಯೋನ್ಮುಖವಾಗಿದ್ದು, ಇಲಾಖೆಗೆ ಕಾಯಕಲ್ಪ ನೀಡಲು ಸಿದ್ಧತೆ ನಡೆಸುತ್ತಿದೆ. ವಾಹನ...
06: 55 PM: ತೆಲಂಗಾಣ ಒಟ್ಟು ಸ್ಥಾನಗಳು: 17
ಟಿಆರ್​ಎಸ್​: 12-14
ಕಾಂಗ್ರೆಸ್​: 1-2
ಬಿಜೆಪಿ: 1-2
ಎಐಎಂಐಎಂ: 1
 
06: 52 PM: ಆಂಧ್ರ ಪ್ರದೇಶ ಒಟ್ಟು ಸ್ಥಾನಗಳು: 25
ವೈಎಸ್​ಆರ್​ಸಿಪಿ: 13-14
ಟಿಡಿಪಿ: 10-12
ಬಿಜೆಪಿ: 0-1
ಕಾಂಗ್ರೆಸ್​: 0
 
06: 49 PM: ಸಿ ವೋಟರ್​ ಸಮೀಕ್ಷೆ
ಬಿಜೆಪಿ: 287
ಯುಪಿಎ: 87
ಇತರರು: 127
 
06: 45 PM: ನ್ಯೂಸ್​ ನೇಷನ್​ ಸಮೀಕ್ಷೆ
ಬಿಜೆಪಿ: 282ರಿಂದ 290
ಕಾಂಗ್ರೆಸ್​: 118ರಿಂದ 126
ಇತರರು: 130ರಿಂದ 138
 
06: 43 PM:  ರಿಪಬ್ಲಿಕ್​ ಟಿವಿ ಸಮೀಕ್ಷೆ
ಎನ್​ಡಿಎ: 305
ಯುಪಿಎ: 124
ಇತರರು: 120
 
06: 39 PM: ಮತದಾನ ಮುಗಿದ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆ ವರದಿಗಳ ಭರಾಟೆ ಆರಂಭ: ಕೆಲವೇ ಕ್ಷಣಗಳಲ್ಲಿ ಮಾಹಿತಿ: 6.30ರಿಂದ ಮಾಹಿತಿ ಆರಂಭ
 
 
06.06 PM:  7ನೇ ಹಂತದ ಮತದಾನ: ಶೇ.60.21 ಮತದಾನ
ಬಿಹಾರ ಶೇ.49.92, ಹಿಮಾಚಲ ಪ್ರದೇಶ ಶೇ.66.18, ಮಧ್ಯಪ್ರದೇಶ ಶೇ.69.38, ಪಂಜಾಬ್​ ಶೇ.58.81, ಉತ್ತರ ಪ್ರದೇಶ ಶೇ.54.37, ಪಶ್ಚಿಮ ಬಂಗಾಳ ಶೇ.73.05, ಜಾರ್ಖಂಡ್​ ಶೇ.70.5 ಮತ್ತು ಚಂಡಿಗಢ ಶೇ.63.57
 
06.02 PM:  ಚುನಾವಣಾ ಆಯೋಗ: ಲೋಕಸಭೆ ಚುನಾವಣೆ 2019ರಲ್ಲಿ ಒಟ್ಟು 7.27 ಕೋಟಿ ಮತದಾರರು ಹಕ್ಕು ಚಲಾಯಿಸಿದ್ದಾರೆ. 3.47 ಕೋಟಿ ಮಹಿಳೆಯರು ಮತ್ತು 7.;27 ಕೋಟಿ ಪುರುಷರು ಹಾಗೂ 3,377 ತೃತೀಯ ಲಿಂಗಿಗಳು ಮತೋತ್ಸವದಲ್ಲಿ ಭಾಗಿ.
 
05.59 PM:  ರಾಮಪುರ: ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್​ ತಮ್ಮ ಪತ್ನಿ ಪ್ರತಿಭಾ ಸಿಂಗ್​ ಮತ್ತು ಪುತ್ರ ವಿಕ್ರಮಾದಿತ್ಯ ಸಿಂಗ್​ ಜತೆ ಮಂಡಿ ಲೋಕಸಭಾ ಕ್ಷೇತ್ರರದ ವ್ಯಾಪ್ತಿಯಲ್ಲಿ ಭಅನುವಾರ ತಮ್ಮ ಹಕ್ಕು ಚಲಾಯಿಸಿದರು. 
 
 
05.50 PM: 542 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಸಂಪನ್ನ: ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿರುವ 542 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಮುಕ್ತಾಯವಾಗಿರುವುದಾಗಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಸುನಿಲ್​ ಅರೋರಾ ತಿಳಿಸಿದ್ದಾರೆ.  
 
 
05.23 PM: ಕುಂದಗೋಳ ವಿಧಾನಸಭಾ ಉಪಚುನಾವಣೆ: ಸಂಜೆ 5 ಗಂಟೆಯ ವೇಳೆಗೆ ಶೇ.72.97 ಮತದಾನ.‘
 
05.21 PM:  ಇಂದೋರ್​: ಇಂದೋರ್​ನ ಮತಗಟ್ಟೆಯ ಸಂಖ್ಯೆ 212ರಲ್ಲಿ ಕೇವಲ 3 ಅಡಿ ಎತ್ತರವಿರುವ ಮಹಿಳೆ ವಿನಿತಾ ಮೆಹತಾ ತಮ್ಮ ಹಕ್ಕನ್ನು ಚಲಾಯಿಸಿ ಮತಸಂಭ್ರಮ ಆಚರಿಸಿದರು. 
 
https://twitter.com/ANI/status/1130076720453869568
 
05.18 PM: ಪಶ್ಚಿಮ ಬಂಗಾಳ: ಭಾನುವಾರದ ಮತದಾನ ಪ್ರಕ್ರಿಯೆ ವೇಳೆ ಪಶ್ಚಿಮ ಬಂಗಾಳದ 9 ಲೋಕಸಭಾ ಕ್ಷೇತ್ರಗಳಲ್ಲಿ ಭಾರಿ ಹಿಂಸಾಚಾರವಾಗಿದೆ. ಚುನಾವಣಾ ಆಯುಕ್ತರಿಗೆ ಈವರೆಗೆ ಒಟ್ಟು 417 ದೂರುಗಳನ್ನು ಸಲ್ಲಿಸಿದ್ದು, 227 ದೂರುಗಳು ಇತ್ಯರ್ಥವಾಗಿವೆ. ಇನ್ನುಳಿದ 190 ದೂರುಗಳು ಇತ್ಯರ್ಥವಾಗಿಲ್ಲ ಎಂದು ಆರೋಪಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ಪತ್ರ. 
 
05.09 PM: 5 ಗಂಟೆಯವರೆಗೆ ದೇಶದಾದ್ಯಂತ ಶೇ.53.03 ಮತದಾನ: ಬಿಹಾರ ಶೇ.46.75, ಹಿಮಾಚಲ ಪ್ರದೇಶ ಶೇ.57.43, ಮಧ್ಯಪ್ರದೇಶ ಶೇ.59.75, ಪಂಜಾಬ್​ ಶೇ.50.49, ಉತ್ತರ ಪ್ರದೇಶ ಶೇ.47.21, ಪಶ್ಚಿಮ ಬಂಗಾಳ ಶೇ.64.87, ಜಾರ್ಖಂಡ್​ ಶೇ.66.64 ಮತ್ತು ಚಂಡಿಗಢ ಶೇ.51.18
 
https://twitter.com/ANI/status/1130074423493447680
 
05.06 PM: ಕೋಲ್ಕತ: ಅನಕ್ಷರಸ್ಥರು ಮತ್ತು ಅರೆ ಅಕ್ಷರಸ್ಥರ ದಾರಿ ತಪ್ಪಿಸಲು ಮತದಾನ ಯಂತ್ರಗಳಲ್ಲಿನ ತೃಣಮೂಲ ಕಾಂಗ್ರೆಸ್​ ಬಟನ್​ ಮೇಲೆ ವಿಶೇಷ ರೀತಿಯ ಚಿಹ್ನೆಯನ್ನು ಬರೆದಿರುವ ತೃಣಮೂಲ ಕಾಂಗ್ರೆಸ್​ ಕಾರ್ಯಕರ್ತರು. ಜಾಧವಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನುಪಮ್​ ಹಜಾರಾ ಆರೋಪ. 
 
https://twitter.com/ANI/status/1130072734057324545
 
05.03 PM: ಬಿಜೆಪಿ ಕಾರ್ಯಕರ್ತರು ಮತ್ತು ಸಿಆರ್​ಪಿಎಫ್​ನಿಂದ ದೌರ್ಜನ್ಯ: ಭಾನುವಾರದ ಮತದಾನದ ವೇಳೆ ಬಿಜೆಪಿ ಕಾರ್ಯಕರ್ತರು ಮತ್ತು ಸಿಆರ್​ಪಿಎಫ್​ ಯೋಧರು ಭಾರಿ ದೌರ್ಜನ್ಯ ಎಸಗಿದ್ದಾರೆ. ರಾಜ್ಯದಲ್ಲಿ ಹಿಂದೆಂದೂ ಈ ರೀತಿ ಆಗಿರಲಿಲ್ಲ ಎಂದು ಆರೋಪಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ. 
 
https://twitter.com/ANI/status/1130073170101194752
 
04.55 PM: ಹಿರಿಯ ಮತದಾರರಿಗೆ ನೆರವಾದ ಜಿಲ್ಲಾಧಿಕಾರಿ : ಹಿಮಾಚಲಪ್ರದೇಶದ ಸೊಲಾನ್​ನ ಜಿಲ್ಲಾಧಿಕಾರಿ ಪ್ರಶಾಂತ್​ ದೇಸ್ತಾ ನಾಲಾಗಢ ಮತಗಟ್ಟೆಗೆ 78 ವರ್ಷದ ಅಂಗವಿಕಲ ಮತದಾರರನ್ನು ಹೊತ್ತು ತಂದು ಮತದಾನ ಮಾಡಲು ಸಹಕರಿಸಿದರು. 
 
https://twitter.com/ANI/status/1130069927010787330
 
04.46 PM: ಹಿಮಾಚಲ ಪ್ರದೇಶ: ಇಲ್ಲಿನ ನಹಾನ್​ನಲ್ಲಿ 40 ವರ್ಷದ ಅಂಗವಿಕಲ ಮತದಾರ ನರೇಶ್​ ಚಂದ್​ ಪಲ್ಲಕ್ಕಿಯಲ್ಲಿ ಮತದಾನ ಕೇಂದ್ರಕ್ಕೆ ಬಂದು ತಮ್ಮ ಹಕ್ಕು ಚಲಾಯಿಸಿದರು. 

https://twitter.com/ANI/status/1130068978720792576
 
04.44 PM: ಸಂಜೆ 4.30ರವರೆಗೆ ದೇಶದಾದ್ಯಂತ ಶೇ.52.12 ಮತದಾನ.
 
https://twitter.com/ECISVEEP/status/1130068202849878016
 
04.42 PM: ಹಿರಿಯ ನಾಗರಿಕ ದಂಪತಿ ಮತೋತ್ಸವದಲ್ಲಿ ಪಾಲ್ಗೊಳ್ಳಲೆಂದೇ ಬ್ರಿಟನ್​ನಿಂದ ಭಾರತಕ್ಕೆ ಹಾರಿಬಂದು ಮತೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ಹೀಗೆ. 
 
https://twitter.com/TheCEOPunjab/status/1130020778873839617
 
04.38 PM:  ಗಯಾ: ಜೆಹನಾಬಾದ್​ನ ಚಿರಿಯಾವಾನ್​ ಗ್ರಾಮದ ಮತಗಟ್ಟೆ ಸಂಖ್ಯೆ 236ರಲ್ಲಿ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿ ಪ್ರತಿಭಟಿಸಿದರು. ರಸ್ತೆ ಮಾಡದಿದ್ದರೆ ಮಾತದಾನವನ್ನೂ ಮಾಡುವುದಿಲ್ಲ ಎಂದು ಹೇಳಿ ಮತಗಟ್ಟೆಯ ಹೊರಗೆ ಪ್ರತಿಭಟನೆ. ಸ್ಥಳೀಯ ಶಾಸಕರನ್ನು ಭೇಟಿಯಾಗಿ ರಸ್ತೆ ನಿರ್ಮಿಸಲು ಮನವಿ ಮಾಡಿಕೊಂಡರೆ, ನಮ್ಮ ಗ್ರಾಮ ಭೂಪಟದಲ್ಲೇ ಇಲ್ಲವೆಂದು ಹೇಳಿ ಓಡಿಸಿದ್ದಾಗಿ ಆರೋಪ.
 
https://twitter.com/ANI/status/1130064738388455424
 
04.34 PM: ಕೋಲ್ಕತದಲ್ಲಿ ತಮ್ಮ ಹಕ್ಕು ಚಲಾಯಿಸಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ
 
https://twitter.com/ANI/status/1130064899646713856
 
04.20 PM: ಮಧ್ಯಾಹ್ನ 4 ಗಂಟೆಯವರೆಗೆ ದೇಶದಾದ್ಯಂತ ಶೇ.52.89 ಮತದಾನ

04.18 PM: ಸ್ವತಂತ್ರ ಭಾರತದ ಮೊಟ್ಟ ಮೊದಲ ಮತದಾರ ಎಂಬ ಹೆಗ್ಗಳಿಕೆಯ ಶ್ಯಾಮ ಸರನ್​ ನೇಗಿ ಅವರ ಮತೋತ್ಸವದ ಸಂಭ್ರಮದ ವಿಡಿಯೋ ನಿಮಗಾಗಿ. 

04.13 PM: ಚಿಂಚೋಳಿ ವಿಧಾನಸಭಾ ಉಪ ಚುನಾವಣೆ: ಮಧ್ಯಾಹ್ನ 3 ಗಂಟೆಗೆ ಶೇ. 53.66 ರಷ್ಟು ಮತದಾನ

04.11 PM: ಬಿಹಾರ: ಇಲ್ಲಿನ ಆರಾದ ಮತಗಟ್ಟೆ ಸಂಖ್ಯೆ 49ರಲ್ಲಿ ನಕಲಿ ಮತದಾನ ತಡೆಯಲು ಯತ್ನಿಸಿದ ಮತಗಟ್ಟೆ ಅಧಿಕಾರಿ ಮೇಲೆ ಸಾರ್ವಜನಿಕರಿಂದ ಹಲ್ಲೆ. ಮತಗಟ್ಟೆ ಮೇಲೆ ಕಲ್ಲಿನ ತೂರಾಟ. ಆದರೂ ಅಬಾಧಿತವಾಗಿ ಮುಂದುವರಿದ ಮತದಾನ. ಗಲಾಟೆ ಮಾಡುಬಹುದೆಂಬ ಶಂಕೆಯಲ್ಲಿ ಕೆಲವರನ್ನು ಸ್ಥಳದಿಂದ ಓಡಿಸಿದ ಪೊಲೀಸರು. 

04.07 PM:  ಹಿಮಾಚಲ ಪ್ರದೇಶ: ಕುಲುವಿನಲ್ಲಿ ಭಾನುವಾರ ಸಪ್ತಪದಿ ತುಳಿದ ವರ ಮತಗಟ್ಟೆ ಸಂಖ್ಯೆ 93ಕ್ಕೆ ಆಗಮಿಸಿ ಮತದಾನ ಮಾಡಿ ಮತೋತ್ಸವದ ಸಂಭ್ರಮದಲ್ಲೂ ಪಾಲ್ಗೊಂಡರು. 

04.04 PM: 7ನೇ ಹಂತದ ಮತದಾನ: ಮಧ್ಯಾಹ್ನ 3 ಗಂಟೆಯವರೆಗಿನ ಮತದಾನದ ವಿವರ.

03.57 PM: ಕೋಲ್ಕತ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ ಕೋಲ್ಕತದ ಬಾರಿಷಾ ಜನಕಲ್ಯಾಣ ವಿದ್ಯಾಪೀಠದಲ್ಲಿ ಭಾನುವಾರ ಮತದಾನ ಮಾಡಿ ಮತೋತ್ಸವ ಆಚರಿಸಿದರು. 

03.51 PM: ಸ್ವತಂತ್ರ ಭಾರತದ ಮೊದಲ ಮತದಾರನಿಂದ ಹಕ್ಕು ಚಲಾವಣೆ: ಹಿಮಾಚಲಪ್ರದೇಶದ ಕಿನ್ನೌರ್​ನ ಕಲ್ಪಾದಲ್ಲಿ 103 ವರ್ಷದ ಶ್ಯಾಮ್​ ಸರನ್​ ನೇಗಿ ತಮ್ಮ ಹಕ್ಕು ಚಲಾಯಿಸಿದರು. 1951ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಿದ ಮೊದಲ ಮತದಾರ ಎಂಬ ಹೆಗ್ಗಳಿಕೆ ಇವರದ್ದಾಗಿದೆ. 

03.42 PM:  ಚುನಾವಣಾ ಆಯೋಗಕ್ಕೆ ಟಿಡಿಪಿ ದೂರು: ಪ್ರಧಾನಿ ನರೇಂದ್ರ ಮೋದಿ ಬದರಿನಾಥ ಮತ್ತು ಕೇದಾರನಾಥದ ಅಧಿಕೃತ ಪ್ರವಾಸಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅವರ ಖಾಸಗಿ ಕಾರ್ಯಕ್ರಮಗಳನ್ನು ಟಿವಿಗಳಲ್ಲಿ ನೇರ ಪ್ರಸಾರ ಮಾಡುವ ಮೂಲಕ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ ಎಂದು ಆರೋಪ.

03.39 PM: 7ನೇ ಹಂತದ ಮತದಾನ: ಮಧ್ಯಾಹ್ನ 3 ಗಂಟೆಯವರೆಗಿನ ಮತದಾನದ ವಿವರ: ಬಿಹಾರ ಶೇ.46.66, ಹಿಮಾಚಲ ಪ್ರದೇಶ ಶೇ.49.43, ಉತ್ತರ ಪ್ರದೇಶ ಶೇ.46.07, ಪಶ್ಚಿಮ ಬಂಗಾಳ ಶೇ.63.58, ಜಾರ್ಖಂಡ್​ ಶೇ.64.81, ಚಂಡಿಗಢ ಶೇ.50.24

03.37 PM: ಚಿಂಚೋಳಿ ವಿಧಾನಸಭೆ ಉಪಚುನಾವಣೆ: ಖಾನಾಪುರ ಗ್ರಾಮದಲ್ಲಿ ಹಣದ ಸಮೇತ ಸಿಕ್ಕಿಬಿದ್ದ ತಾಲೂಕು ಪಂಚಾಯ್ತಿ ಸದಸ್ಯ ನಾಮದೇವ ರಾಠೋಡ್. ಗ್ರಾಮಕ್ಕೆ ಬಂದಾಗ ನನ್ನ ಕಾರಿನಲ್ಲಿ ಹಣ ಇರಲಿಲ್ಲ. ಉಮೇಶ್​ ಜಾಧವ್​ ಬೆಂಬಲಿಗರು ಬೇಕೆಂದೇ ಹಲ್ಲೆ ಮಾಡಿ ಕಾರಿನ ಗಾಜು ಒಡೆದು ಹಣ ಇರಿಸಿರಬಹುದು ಎಂದು ಆರೋಪಿಸಿದ ನಾಮದೇವ ರಾಠೋಡ್​. 

03.30 PM: ಕುಂದಗೋಳ ಉಪಚುನಾವಣೆ:  ಮಧ್ಯಾಹ್ನ 3 ಗಂಟೆಗೆ ಶೇ.59.50 ಮತದಾನ

 
03.29 PM: ಭಾಟಿಂಡಾ: ಇಲ್ಲಿನ ಮತಗಟ್ಟೆ ಸಂಖ್ಯೆ 122 ತಾಲವಂಡಿ ಸಾಬೂ ಎಂಬಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ. ಒಂದು ಗುಂಪಿನವರಿಂದ ಗುಂಡಿನ ದಾಳಿ. ಅದೃಷ್ಟವಶಾತ್​ ಯಾರಿಗೂ ಅಪಾಯವಿಲ್ಲ. ಪೊಲಿಸ್​ ಠಾಣೆಯಲ್ಲಿ ದೂರು ದಾಖಲು.  
 
03.25 PM: ತಾಶಿಗಾಂಗ್​: ವಿಶ್ವದ ಅತಿ ಎತ್ತರದ ಮತಗಟ್ಟೆ ಹಿಮಾಚಲಪ್ರದೇಶದ ಲಹುಲ್​ ಸ್ಪಿತಿಯ ತಾಶಿಗಾಂಗ್​ನಲ್ಲಿದೆ. ಇದು ಮಂಡಿ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಈ ಮತಗಟ್ಟೆ ಸಮುದ್ರಮಟ್ಟದಿಂದ 15,256 ಅಡಿ ಎತ್ತರದಲ್ಲಿದೆ. 
 
 
03.18 PM: ಅಮೃತಸರ: ಅಂಧ ಮತದಾರರು ಕೂಡ ಮತೋತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಂಡು ತಮ್ಮ ಹಕ್ಕನ್ನು ಚಲಾಯಿಸಿದರು. ಇದು ಅಮೃತಸರದ ಮತಗಟ್ಟೆ ಸಂಖ್ಯೆ 187ರಲ್ಲಿ ಕಂಡು ಬಂದ ದೃಶ್ಯ.
 
 
02.43 PM: ಬಿಹಾರ: ಬಿಹಾರದ ಪಲಿಗಂಜ್​ನ ಸರ್ಕುನಾ ಗ್ರಾಮದ ಮತಗಟ್ಟೆ ಸಂಖ್ಯೆ 101 ಮತ್ತು 102ರಲ್ಲಿ ಎರಡು ಗಂಪುಗಳ ನಡುವೆ ಗಲಾಟೆ ನಡೆದಿದ್ದು, ಮತದಾನ ಸ್ಥಗಿತವಾಗಿದೆ.
 
02.43 PM:  ಬಿಹಾರ: ಪಟನಾದ ಸಬಾ ಮತ್ತು ಫರಾಹ್​ ಎಂಬ ಸಯಾಮಿ ಅವಳಿಗಳು ಮೊದಲ ಬಾರಿಗೆ ಮತಚಲಾಯಿಸಿದರು.
 
02.39 PM:  ಚಿಂಚೋಳಿ: ಚಿಂಚೋಳಿ ಕ್ಷೇತ್ರದಲ್ಲಿ 5-6 ವಾಹನಗಳಲ್ಲಿ ಆಯುಧ ಇಟ್ಟುಕೊಂಡು ಹಣ ಹಂಚಿಕೆ ಮಾಡಲಾಗುತ್ತಿದೆ. ಹಣ ಹಂಚಿಕೆಯ ಹಿಂದೆ ಪ್ರಿಯಾಂಕ್​ ಖರ್ಗೆ ಕೈವಾಡವಿದೆ ಎಂದು ಕಲಬುರಗಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್​ ಜಾಧವ್​ ಆರೋಪ ಮಾಡಿದ್ದು, ಪೊಲೀಸ್​ ವಾಹನ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
 
02.32 PM: ಪಶ್ಚಿಮ ಬಂಗಾಳದ ಭತಪರಾ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಮತದಾನದ ವೇಳೆ ಟಿಎಂಸಿ ಅಭ್ಯರ್ಥಿ ಮದನ್​ ಮಿತ್ರ ಕೇಂದ್ರೀಯ ಭದ್ರತಾ ಪಡೆಯ ಯೋಧರೊಂದಿಗೆ ವಾಗ್ವಾದ ನಡೆಸಿದ್ದಾರೆ.
 
 
02.27 PM: ಪಶ್ಚಿಮ ಬಂಗಾಳದ ನ್ಯೂಟೌನ್​ ಪ್ರದೇಶದ ಬಲಿಗುರಿ ಪ್ರಾಥಮಿಕ ಶಾಲೆ ಸಮೀಪದ ಅರಣ್ಯದಲ್ಲಿ 20 ಕಚ್ಚಾ ಬಾಂಬ್​ಗಳು ಪತ್ತೆ. ಸ್ಥಳೀಯರು 2 ಪ್ಲಾಸ್ಟಿಕ್​ ಬಾಕ್ಸ್​ಗಳಲ್ಲಿ ಬಾಂಬ್​ ಇರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ಬಾಂಬ್​ ನಿಷ್ಕ್ರಿಯ ದಳ ಸ್ಥಳಕ್ಕೆ ತೆರಳಿದ್ದು ಬಾಂಬ್​ಗಳನ್ನು ನಿಷ್ಕ್ರಿಯಗೊಳಿಸಿದೆ.
 

02.21 PM: ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಬರಾಸತ್​ ಲೋಕಸಭೆ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಕಕೋಲಿ ಘೋಷ್​ ದಸ್ತಿದಾರ್​ ಕೇಂದ್ರೀಯ ಭದ್ರತಾ ಪಡೆಗಳ ಯೋಧರೊಂದಿಗೆ ವಾಗ್ವಾದ ನಡೆಸಿದ್ದಾರೆ.

02.10 PM: ಮಧ್ಯಾಹ್ನ 1 ಗಂಟೆಯವರೆಗೆ ಬಿಹಾರದಲ್ಲಿ ಶೇ. 36.20, ಹಿಮಾಚಲಪ್ರದೇಶದಲ್ಲಿ ಶೇ. 42.38, ಮಧ್ಯಪ್ರದೇಶದಲ್ಲಿ ಶೇ. 45.81, ಪಂಜಾಬ್​ನಲ್ಲಿ ಶೇ. 37.86, ಉತ್ತರ ಪ್ರದೇಶದಲ್ಲಿ ಶೇ. 37, ಪಶ್ಚಿಮ ಬಂಗಾಳದಲ್ಲಿ ಶೇ. 49.79, ಜಾರ್ಖಂಡ್​ನಲ್ಲಿ ಶೇ. 52.89, ಚಂಡೀಗಢದಲ್ಲಿ ಶೇ. 37.5ರಷ್ಟು ಮತದಾನವಾಗಿದೆ.

02.03 PM:  ವಾರಾಣಸಿ: ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್​ ಜೋಷಿ ವಾರಾಣಸಿಯ ಮತಗಟ್ಟೆಯಲ್ಲಿ ಮತಚಲಾಯಿಸಿದರು.

01.59 PM: ಚಿಂಚೋಳಿ: ಮದುವೆಯ ಬಳಿಕ ನೇರವಾಗಿ ಮತಗಟ್ಟೆಗೆ ಆಗಮಿಸಿದ ವರನಿಂದ ಮತಚಲಾವಣೆ. ಚಿಮ್ಮಾಇದಲಾಯಿ ಗ್ರಾಮದಲ್ಲಿ ವರ ವೀರಭದ್ರಪ್ಪ ಅವರು ಮತಚಲಾಯಿಸಿದರು.

01.55 PM: ಕುಂದಗೋಳ: ಕುಂದಗೋಳ ವಿಧಾನಸಭೆ ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ. 43.24 ರಷ್ಟು ಮತದಾನವಾಗಿದೆ.

01.51 PM:  ಚಿಂಚೋಳಿ ವಿಧಾನಸಭಾ ಉಪ ಚುನಾವಣೆ: ಮಧ್ಯಾಹ್ನ 1 ಗಂಟೆಗೆ 40.40 ಶೇಕಡ ಮತದಾನ.

01.13 PM:  ಬಿಹಾರ: ಪಟನಾ ಸಾಹೇಬ್​ ಲೋಕಸಭೆ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಅವರು ಪಟನಾದ ಕದಮ್​ ಕುನ್​ನ ಮತಗಟ್ಟೆ 339ರಲ್ಲಿ ಮತ ಚಲಾಯಿಸಿದರು.

01.01 PM:  ಬಿಹಾರ: ಮತ ಚಲಾಯಿಸಿ ತೆರಳುತ್ತಿದ್ದಾಗ ಫೋಟೋಗ್ರಾಫರ್​ ಒಬ್ಬರು ನನ್ನ ಕಾರಿನ ಗಾಜನ್ನು ಒಡೆದಿದ್ದಾರೆ. ಈ ಕುರಿತು ಎಫ್​ಐಆರ್​ ದಾಖಲಿಸಲಾಗಿದೆ. ನನ್ನ ಭದ್ರತಾ ಸಿಬ್ಬಂದಿ ಏನೂ ಮಾಡಿಲ್ಲ. ನನ್ನನ್ನು ಕೊಲ್ಲಲು ಸಂಚು ರೂಪಿಸಲಾಗುತ್ತಿದೆ ಎಂದು ತೇಜ್​ಪ್ರತಾಪ್​ ಯಾದವ್​ ತಿಳಿಸಿದ್ದಾರೆ.

12.59 PM:  ಬಿಹಾರ: ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್​ ಹಿರಿಯ ಪುತ್ರ ತೇಜ್​ ಪ್ರತಾಪ್​ ಯಾದವ್​ ಭದ್ರತಾ ಸಿಬ್ಬಂದಿಯಿಂದ ಕ್ಯಾಮೆರಾಮನ್​ ಮೇಲೆ ಹಲ್ಲೆ. ತೇಜ್​ ಪ್ರತಾಪ್​ ಯಾದವ್​ ಮತಚಲಾಯಿಸಿ ವಾಪಸ್​ ತೆರಳುವಾಗ ಅವರ ಕಾರಿನ ಗಾಜು ಒಡೆದ ಆರೋಪದ ಮೇಲೆ ಮಾಧ್ಯಮ ಪ್ರತಿನಿಧಿ ಮೇಲೆ ತೇಜ್​ ಪ್ರತಾಪ್​ ಯಾದವ್​ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ತೇಜ್​ ಪ್ರತಾಪ್​ ಯಾದವ್​ ಎಫ್​ಐಆರ್​ ದಾಖಲಿಸಿದ್ದಾರೆ.

12.53 PM:  ಊಟ, ನೀರು ಇಲ್ಲದೇ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಹೆಚ್ಚುವರಿ ಸಿಬ್ಬಂದಿ ಪರದಾಟ. ಚಿಂಚೋಳಿಯ ಚಂದಾಪುರದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿರುವ 100 ಕ್ಕೂ ಹೆಚ್ಚು ಸಿಬ್ಬಂದಿ ಊಟ, ನೀರು ಇಲ್ಲದೆ ಪರದಾಡುತ್ತಿದ್ದಾರೆ.

12.48 PM: 1951ರ ಚುನಾವಣೆಯಲ್ಲಿ ಮೊದಲ ಮತ ಚಲಾಯಿಸಿದ್ದ 102 ವರ್ಷದ ಶ್ಯಾಮ್​ ಸರನ್​ ನೇಗಿ ಅವರು ಹಿಮಾಚಲ ಪ್ರದೇಶದ ಕಲ್ಪಾದಲ್ಲಿ ಮತ ಚಲಾಯಿಸಿದರು.

12.30 PM:  ಪಶ್ಚಿಮ ಬಂಗಾಳದ ಡೈಮಂಡ್​ ಹಾರ್ಬರ್​ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿಲಂಜನ್​ ರಾಯ್​ ಅವರ ಕಾರಿನ ಮೇಲೆ ಡೋಂಗರಿಯಾ ಪ್ರದೇಶದಲ್ಲಿ ಕಲ್ಲು ತೂರಾಟ ನಡೆದಿದೆ.

12.28 PM: ಉತ್ತರ ಕೋಲ್ಕತ ಬಿಜೆಪಿ ಅಭ್ಯರ್ಥಿ ರಾಹುಲ್​ ಸಿನ್ಹಾ ಅವರು ಪಾರ್ಕ್​ ಸರ್ಕಸ್​ ಪ್ರದೇಶದ ಮತಗಟ್ಟೆಯ ಬಳಿ ತೆರಳಿದ್ದಾಗ ಅವರ ಮೇಲೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ರಾಹುಲ್​ ಸಿನ್ಹಾ ಅವರ ಸುರಕ್ಷಿತವಾಗಿ ಪಾರಾಗಿದ್ದರೆ, ಸ್ಥಳದಲ್ಲಿದ್ದ ಕ್ಯಾಮೆರಾಮನ್​ಗೆ ಸಣ್ಣಪುಟ್ಟ ಗಾಯಗಳಾಗಿವೆ.

12.18 PM:  ಕುಂದಗೋಳದ ಯರಗುಪ್ಪಿಯ ಮತಗಟ್ಟೆ 24ರಲ್ಲಿ ಮತಯಂತ್ರದಲ್ಲಿ ದೋಷ ಕಂಡು ಬಂದಿದ್ದು, ಒಂದು ಗಂಟೆಯಿಂದ ಮತದಾನ ಮಾಡಲು ಕಾದು ನಿಂತಿರುವ ನೂರಾರು ಮತದಾರರು.

12.14 PM: ಬೆಳಗ್ಗೆ 11 ಗಂಟೆಯವರೆಗೆ ಬಿಹಾರದಲ್ಲಿ 18.90%, ಹಿಮಾಚಲ ಪ್ರದೇಶದಲ್ಲಿ 24.29%, ಮಧ್ಯಪ್ರದೇಶದಲ್ಲಿ 28.40%, ಪಂಜಾಬ್​ನಲ್ಲಿ 23.36%, ಉತ್ತರ ಪ್ರದೇಶದಲ್ಲಿ 21.89%, ಪಶ್ಚಿಮ ಬಂಗಾಳದಲ್ಲಿ 32.15%, ಜಾರ್ಖಂಡ್​ನಲ್ಲಿ 30.33% ಮತ್ತು ಚಂಡೀಗಢದಲ್ಲಿ 22.30% ರಷ್ಟು ಮತದಾನವಾಗಿದೆ.

12.11 PM:  ಪಂಜಾಬ್​ನ ಸಚಿವ ನವಜೋತ್​ ಸಿಂಗ್​ ಸಿಧು ಮತ್ತು ಪತ್ನಿ ನವಜೋತ್​ ಕೌರ್​ ಸಿಧು ಅಮೃತಸರದ ಮತಗಟ್ಟೆ ಸಂಖ್ಯೆ 134ರಲ್ಲಿ ಮತ ಚಲಾಯಿಸಿದರು.

12.05 PM: ಟಿಎಂಸಿ ಗೂಂಡಾಗಳು ಬಿಜೆಪಿ ಮಂಡಲ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಮಂಡಲ ಅಧ್ಯಕ್ಷ ಮತ್ತು ಚಾಲಕ ಗಾಯಗೊಂಡಿದ್ದಾರೆ ಎಂದು ಜಾದವ್​ಪುರ್​ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನುಪಮ್​ ಹಜ್ರಾ ಆರೋಪಿಸಿದ್ದಾರೆ.

11.43 AM:  ಕುಂದಗೋಳ: ಕುಂದಗೋಳ ವಿಧಾನಸಭೆ ಕ್ಷೇತ್ರದ ಬೆನಕನಹಳ್ಳಿ ಮತಗಟ್ಟೆ ಸಂಖ್ಯೆ 20ಲ್ಲಿ ಮೂರು ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ 30 ನಿಮಿಷ ಮತದಾನ ಸ್ಥಗಿತಗೊಂಡಿತ್ತು.

11.38 AM:  ತೃಣಮೂಲ ಕಾಂಗ್ರೆಸ್​ ಕಾರ್ಯಕರ್ತರು ನಮ್ಮ ಮೇಲೆ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ಬಿಜೆಪಿ ಕಾರ್ಯರ್ತರು ಮತ್ತು ಕ್ಯಾಮೆರಾಮನ್ ಗಾಯಗೊಂಡಿದ್ದಾರೆ ಎಂದು ಉತ್ತರ ಕೋಲ್ಕತ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಹುಲ್​ ಸಿನ್ಹಾ ಆರೋಪಿಸಿದ್ದಾರೆ.

11.28 AM: ಕುಂದಗೋಳ: ಕುಂದಗೋಳ ವಿಧಾನಸಭೆ ಕ್ಷೇತ್ರದಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇ. 19.86ರಷ್ಟು ಮತದಾನವಾಗಿದೆ.

11.25 AM: ಚಿಂಚೋಳಿ ವಿಧಾನಸಭಾ ಉಪ ಚುನಾವಣೆ, ಬೆಳಿಗ್ಗೆ 11 ಗಂಟೆಗೆ 23.12 ಶೇಕಡ ಮತದಾನ.

11.19 AM: ಬಿಹಾರ: ಮತದಾರರ ಪಟ್ಟಿಯಲ್ಲಿ ನನ್ನ ಫೋಟೋ ಕಾಣೆಯಾಗಿದೆ ಎಂದು ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಆರೋಪಿಸಿದ್ದಾರೆ.

11.13 AM: ಪಶ್ಚಿಮ ಬಂಗಾಳದ ಬಸಿರ್​ಹಾತ್​ ಲೋಕಸಭೆ ಕ್ಷೇತ್ರದ ಮತಗಟ್ಟೆ ಸಂಖ್ಯೆ 189 ರಲ್ಲಿ ಟಿಎಂಸಿ ಕಾರ್ಯಕರ್ತರು ಜನರಿಗೆ ಮತಚಲಾಯಿಸಲು ಅವಕಾಶ ನೀಡುತ್ತಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಮತಗಟ್ಟೆಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

11.11 AM: ಕುಂದಗೋಳ: ಕುಂದಗೋಳ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರು ಯರಗುಪ್ಪಿ ಗ್ರಾಮದ ಮತಗಟ್ಟೆ ಸಂಖ್ಯೆ 23ರಲ್ಲಿ ಮಗಳು ದೀಪಾ ಜತೆ ಆಗಮಿಸಿ ಮತ ಚಲಾಯಿಸಿದರು. ದೀಪಾ ಮೊದಲ ಬಾರಿ ಮತ ಚಲಾಯಿಸಿದರು.

11.03 AM: ಲೋಕಸಭೆ ಸ್ಪೀಕರ್​, ಬಿಜೆಪಿ ನಾಯಕಿ ಸುಮಿತ್ರಾ ಮಹಾಜನ್​ ಅವರು ಮಧ್ಯಪ್ರದೇಶದ ಇಂದೋರ್​ನ ಮತಗಟ್ಟೆಯಲ್ಲಿ ಮತಚಲಾಯಿಸಿದರು.

10.53 AM: ಪಶ್ಚಿಮ ಬಂಗಾಳ: ಟಿಎಂಸಿ ಕಾರ್ಯಕರ್ತರು ಮತ ಚಲಾಯಿಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಪಶ್ಚಿಮ ಬಂಗಾಳದ ಬಸಿರ್​ಹಾತ್​​ನ ಮತಗಟ್ಟೆ 189 ರ ಹೊರಗೆ ಮತದಾರರು ಪ್ರತಿಭಟನೆ ನಡೆಸಿದರು. 100 ಜನರನ್ನು ಮತದಾನಕ್ಕೆ ತೆರಳದಂತೆ ತಡೆಹಿಡಿಯಲಾಗಿದೆ. ಅವರನ್ನು ಮತಗಟ್ಟೆಗೆ ಕರೆದೊಯ್ಯುತ್ತೇವೆ ಎಂದು ಬಸಿರ್​ಹಾತ್​ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತ್ಯಂತನ್​ ಬಸು ತಿಳಿಸಿದ್ದಾರೆ.

10.46 AM:  8 ರಾಜ್ಯಗಳ 59 ಲೋಕಸಭೆ ಕ್ಷೇತ್ರಗಳಲ್ಲಿ ಬೆಳಗ್ಗೆ 10 ರವರೆಗೆ ಶೇ. 11.75ರಷ್ಟು ಮತದಾನವಾಗಿದೆ.

10.37 AM: ಹಿಮಾಚಲ ಪ್ರದೇಶದ ಸಿಎಂ ಜೈರಾಮ್​ ಠಾಕೂರ್​ ಅವರು ಮಂಡಜಿ ಜಿಲ್ಲೆಯ ಮತಗಟ್ಟೆ ಸಂಖ್ಯೆ 36ರಲ್ಲಿ ಮತ ಚಲಾಯಿಸಿದರು.

10.28 AM: ಲೋಕಸಭೆ ಚುನಾವಣೆಯ 7ನೇ ಹಂತದ ಪ್ರಚಾರಕ್ಕೆ ಶುಕ್ರವಾರ ಸಂಜೆಯೇ ತೆರೆ ಬಿದ್ದಿದೆ. ಆದರೆ ಎಲ್ಲಾ ಮಾಧ್ಯಮಗಳು ಕಳೆದ 2 ದಿನದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಕೇದಾರನಾಥ ಯಾತ್ರೆಗೆ ಭಾರಿ ಪ್ರಚಾರ ನೀಡುತ್ತಿವೆ. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ತೃಣ ಮೂಲ ಕಾಣಗ್ರೆಸ್​ ಚುನಾವಣಾ ಆಯೋಗಕ್ಕೆ ಪತ್ರ ಬರೆದು ದೂರು ನೀಡಿದೆ.

10.12 AM: ಕುಂದಗೋಳ: ಕೆಲಸಕ್ಕೆ ತೆರಳುವ ಮೊದಲು ಮತಚಲಾಯಿಸಲು ಮತಗಟ್ಟೆಯ ಬಳಿ ಸಾಲಾಗಿ ನಿಂತಿರುವ ಕೂಲಿ ಕಾರ್ಮಿಕರು.

10.09 AM: ಚಿಂಚೋಳಿ: ಚಿಂಚೋಳಿಯ ಕಾಳಗಿಯ ಮತಗಟ್ಟೆ ಸಂಖ್ಯೆ 215 ರಲ್ಲಿ 105 ವರ್ಷದ ವೃದ್ಧೆಯಿಂದ ಮತದಾನ.

10.05 AM: ಕುಂದಗೋಳ: ಕುಂದಗೋಳ ತಾ.ಪಂ.ಕಾರ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಸಖಿ ಮತಗಟ್ಟೆಯಲ್ಲಿ ಮತ ಚಲಾಯಿಸುತ್ತಿರುವ ಮಹಿಳೆಯರು.

10.02 AM:  ನಿನ್ನೆ ರಾತ್ರಿ ನನ್ನ ಕ್ಷೇತ್ರದ ವಿವಿಧ ಬೂತ್​ಗಳ ಬಿಜೆಪಿ ಕಾರ್ಯಕರ್ತರು ಕರೆ ಮಾಡಿ ಟಿಎಂಸಿ ಕಾರ್ಯಕರ್ತರು ಧಮ್ಕಿ ಹಾಕಿರುವ ಕುರಿತು ಮಾಹಿತಿ ನೀಡಿದ್ದಾರೆ. ನೀವು ಬೂತ್​ ಏಜೆಂಟ್​ ಆಗಿ ಹೋದರೆ ನಿಮ್ಮನ್ನು ಹತ್ಯೆ ಮಾಡುವುದಾಗಿ ಟಿಎಂಸಿ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ. ಭಯೋತ್ಪಾದಕ ಸಂಘಟನೆ ಮತ್ತು ಮತ್ತು ಟಿಎಂಸಿ ಮಧ್ಯೆ ಯಾವುದೇ ಬೇಧವಿಲ್ಲ

| ಸಿ.ಕೆ. ಬೋಸ್​, ಬಿಜೆಪಿ ಅಭ್ಯರ್ಥಿ 

9.54 AM: ಕುಂದಗೋಳ: ಕುಂದಗೋಳ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಶಿವಳ್ಳಿ ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ನಂತರ ಯರಗುಪ್ಪಿಗೆ ಆಗಮಿಸಿ ದಿ. ಸಿ.ಎಸ್​. ಶಿವಳ್ಳಿ ಗದ್ದುಗೆಗೆ ಪೂಜೆ ಸಲ್ಲಿಸಿದ ಬಳಿಕ ಮತದಾನ ಮಾಡಲಿದ್ದಾರೆ.

9.42 AM:  ಚಿಂಚೋಳಿ: ಚಿಂಚೋಳಿ ಕ್ಷೇತ್ರದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೆ. 7.88ರಷ್ಟು ಮತದಾನವಾಗಿದೆ.

9.42 AM: ಚಿಂಚೋಳಿ: ಕುಂಚಾವರಂ ಮತಗಟ್ಟೆ ಸಂಖ್ಯೆ 35ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷದಿಂದ 20 ನಿಮಿಷ ಮತದಾನಕ್ಕೆ ಅಡಚಣೆ. ಕೋಡ್ಲಿಯ ಉರ್ದು ಶಾಲೆ ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆಯಿಂದ ಮತದಾನ ಸ್ಥಗಿತ.

9.38 AM: ಕುಂದಗೋಳ: ಕುಂದಗೋಳದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇ. 9.59 ರಷ್ಟು ಮತದಾನ, 18,160 ಜನರಿಂದ ಮತದಾನ.

9.33 AM: ಬೆಳಗ್ಗೆ 9ರವರೆಗೆ ಬಿಹಾರದಲ್ಲಿ 10.65%, ಹಿಮಾಚಲ ಪ್ರದೇಶದಲ್ಲಿ 0.87%, ಮಧ್ಯಪ್ರದೇಶದಲ್ಲಿ 7.16%, ಪಂಜಾಬ್​ನಲ್ಲಿ 4.64%, ಉತ್ತರ ಪ್ರದೇಶದಲ್ಲಿ 5.97%, ಪಶ್ಚಿಮ ಬಂಗಾಳದಲ್ಲಿ 10.54%, ಜಾರ್ಖಂಡ್​ನಲ್ಲಿ 13.19%, ಚಂಡೀಗಢದಲ್ಲಿ 10.40% ಮತದಾನವಾಗಿದೆ.

9.29 AM:  ಚಿಂಚೋಳಿ: ಚಿಂಚೋಳಿ ಕಾಂಗ್ರೆಸ್​ ಅಭ್ಯರ್ಥಿ ಸುಭಾಷ್​ ರಾಠೋಡ್​ ಬಡಾ ತಾಂಡದ ಮತಗಟ್ಟೆ ಸಂಖ್ಯೆ 165ರಲ್ಲಿ ಕುಟುಂಬ ಸಮೇತ ಬಂದು ಮತಚಲಾಯಿಸಿದರು.

9.25 AM: ಚಿಂಚೋಳಿ: ಚಿಂಚೋಳಿ ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು 241 ಮತಗಟ್ಟೆಗಳನ್ನು ಸ್ಥಾಪಿಸಿದ್ದು, 60 ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಕ್ಷೇತ್ರದಲ್ಲಿ ಒಟ್ಟು 98,881 ಪುರುಷ, 94,578 ಮಹಿಳಾ, 16 ಇತರೆ ಹಾಗೂ 79 ಸೇವಾ ಮತದಾರರು ಸೇರಿ ಒಟ್ಟು 1,93,475 ಮತದಾರರಿದ್ದಾರೆ.

9.23 AM: ಚಿಂಚೋಳಿ: ಚಿಂಚೋಳಿ ತಾಲೂಕಿನ ರುಕ್ತಂಪುರ ತಾಂಡಾದ ಮತಗಟ್ಟೆಯಲ್ಲಿ ಮತಯಂತ್ರದ ಕ್ರಮಸಂಖ್ಯೆ 1ರ ಬಟನ್​ ಕಾರ್ಯನಿರ್ವಹಿಸುತ್ತಿಲ್ಲ. ಅಧಿಕಾರಿಗಳು ಮತಯಂತ್ರದ ದುರಸ್ಥಿ ಮಾಡುತ್ತಿದ್ದಾರೆ.

9.18 AM: ಬಿಹಾರದ ರಾಜಧಾನಿ ಪಟನಾದ ಮಹಿಳಾ ಕಾಲೇಜಿನಲ್ಲಿರುವ ಮತಗಟ್ಟೆ ಸಂಖ್ಯೆ 77ರಲ್ಲಿ ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​ ಅವರು ಮತಚಲಾಯಿಸಿದರು.
 
8.36 AM: ಪ್ರಧಾನಿ ನರೇಂದ್ರ ಮೋದಿ ಅವರ ಸೋಲನ್ನು ದೇವರಿಂದಲೂ ತಡೆಯಲು ಸಾಧ್ಯವಿಲ್ಲ. ಅವರು ತಮ್ಮ ಪಾಡಿಗೆ ಧ್ಯಾನ ಮಾಡಲಿ. ಟಿಎಂಸಿ ಪಶ್ಚಿಮ ಬಂಗಾಳದ ಎಲ್ಲಾ 42 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ.
|ಅಭಿಷೇಕ್​ ಬ್ಯಾನರ್ಜಿ, ಮಮತಾ ಬ್ಯಾನರ್ಜಿ ಸಂಬಂಧಿ
 

8.28 AM: ಚಿಂಚೋಳಿ: ಚಿಂಚೋಳಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಸುಭಾಷ್​ ರಾಠೋಡ್​ ರಟಕಲ್​ ರೇವಣ ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ಬಳಿಕ ಅವರು ಶೇರಿ ಬಡಾ ತಾಂಡಾದಲ್ಲಿ ಮತದಾನ ಮಾಡಲಿದ್ದಾರೆ.

8.21 AM: ಚಿಂಚೋಳಿ: ಚಿಂಚೋಳಿಯ ಕುಂಚಾವರಂನ ಮತಗಟ್ಟೆ 177, 204ರಲ್ಲಿ, ರಾಮಶೆಟ್ಟಿ ತಾಂಡಾದ ಮತಗಟ್ಟೆ 16ರಲ್ಲಿ ಹಾಗೂ ಚಿಂಚೋಳಿಯ ಮತಗಟ್ಟೆ ಸಂಖ್ಯೆ 111ರಲ್ಲಿ ಮತಯಂತ್ರದಲ್ಲಿ ದೋಷ ಕಂಡು ಬಂದಿದ್ದು, ಮತದಾನ ಸ್ಥಗಿತವಾಗಿದೆ.

8.17 AM: 7ನೇ ಹಂತದ ಮತದಾನದ ವೇಳೆ ದಾಖಲೆ ಪ್ರಮಾಣದಲ್ಲಿ ಮತ ಚಲಾಯಿಸುವಂತೆ ಮತದಾರರಿಗೆ ಮನವಿ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ.

8.15 AM: ಚಿಂಚೋಳಿ: ಚಿಂಚೋಳಿ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಥಾಪಿಸಿರುವ ಪಿಂಕ್​ ಮತಗಟ್ಟೆಯಲ್ಲಿ ತುಂಬು ಗರ್ಭಿಣಿ ಸುನೀತಾ ಅವರಿಂದ ಮತಚಲಾವಣೆ.

8.13 AM: ಪಶ್ಚಿಮ ಬಂಗಾಳದ ದಕ್ಷಿಣ ಕೋಲ್ಕತ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಕೆ. ಬೋಸ್​ ಸಿಟಿ ಕಾಲೇಜಿನ ಮತಗಟ್ಟೆಯಲ್ಲಿ ಮತಚಲಾಯಿಸಿದರು.

8.10 AM: ಕುಂದಗೋಳ: ಕುಂದಗೋಳ ಬಿಜೆಪಿ ಅಭ್ಯರ್ಥಿ ಎಸ್​.ಐ. ಚಿಕ್ಕನಗೌಡರ್​ ಅವರು ಮತಚಲಾವಣೆಗೂ ಮುನ್ನ ಅದರಗುಂಚಿ ಗ್ರಾಮದ ದೊಡ್ಡೊಪ್ಪ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

8.08 AM: ಚಿಂಚೋಳಿ: ಚಿಂಚೋಳಿ ವಿಧಾನಸಭೆ ಕ್ಷೇತ್ರದ ಅಭಿವೃದ್ಧಿಗಾಗಿ ಪಣ ತೊಟ್ಟಿದ್ದೇನೆ. ಚಿಂಚೋಳಿ ನನ್ನ ಮನೆ ಇದ್ದಂತೆ. ಚಿಂಚೋಳಿಯ ರಕ್ತ ನನ್ನದು, ನಾನು ರಾಜಕಾರಣಿ, ವೈದ್ಯನಾಗಿ ಸೇವೆ ಸಲ್ಲಿಸುತ್ತೇನೆ.

|ಅವಿನಾಶ್​ ಜಾಧವ್​ 

8.03 AM: ಚಿಂಚೋಳಿ: ಕ್ಷೇತ್ರದ ಬೆಡಸೂರ್​ನ ಮತಗಟ್ಟೆ ಸಂಖ್ಯೆ 79ರಲ್ಲಿ ಮತಚಲಾಯಿಸಿದ ಡಾ. ಉಮೇಶ್​ ಜಾಧವ್​ ಕುಟುಂಬ. ಚಿಂಚೋಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್​ ಜಾಧವ್​ ಪತ್ನಿಯೊಂದಿಗೆ ಬಂದು ಮತಚಲಾಯಿಸಿದರು.

8.01 AM: ಪಪಂಜಾಬ್​ನ ಜಲಂಧರ್​ನ ಗರ್ಹಿ ಗ್ರಾಮದ ಮತಗಟ್ಟೆಯಲ್ಲಿ ಮತಚಲಾಯಿಸಲು ಸಾಲಿನಲ್ಲಿ ನಿಂತಿರುವ ಕ್ರಿಕೆಟಿಗ ಹರಭಜನ್​ ಸಿಂಗ್​.

7.57 AM: ಪಟನಾದ ಮತಗಟ್ಟೆ ಸಂಖ್ಯೆ 49ರಲ್ಲಿ ಮತ ಚಲಾಯಿಸಿದ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್​ ಮೋದಿ.

7.44 AM:  ಪಟನಾದ ಶಾಲೆ ರಾಜಭವನದ ಶಾಲೆಯ ಮತಗಟ್ಟೆ ಸಂಖ್ಯೆ 326ರಲ್ಲಿ ಮತ ಚಲಾಯಿಸಿದ ಬಿಹಾರ ಸಿಎಂ ನಿತೀಶ್​ ಕುಮಾರ್​.

7.42 AM: ಚಿಂಚೋಳಿ: ಐನೋಳಿ ಗ್ರಾಮದ ಮತಗಟ್ಟೆ ಸಂಖ್ಯೆ 111ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಮತದಾನ 5 ನಿಮಿಷ ಸ್ಥಗಿತವಾಗಿತ್ತು.

7.40 AM: ಕುಂದಗೋಳ: ಕುಂದಗೋಳ ಕ್ಷೇತ್ರದಲ್ಲಿ 214 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 33 ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು 38 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಕ್ಷೇತ್ರದಲ್ಲಿ 97,526 ಪುರುಷ ಹಾಗೂ 91,907 ಮಹಿಳಾ, 259 ಸೇವಾ ಮತದಾರರು ಹಾಗೂ ನಾಲ್ವರು ಇತರರು ಸೇರಿ ಒಟ್ಟು 1,89,435 ಮತದಾರರಿದ್ದಾರೆ.

7.35 AM: ಕುಂದಗೋಳ: ಸಂಶಿ ಗ್ರಾಮದ ಮತಗಟ್ಟೆ 131ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ. 10 ನಿಮಿಷ ತಡವಾಗಿ ಮತದಾನ ಆರಂಭ.

7.20 AM: ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿದ್ದು, ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾನ ಆರಂಭವಾಗಿದೆ.  

7.10 AM: ಉತ್ತರ ಪ್ರದೇಶದ ಗೋರಖ್​ಪುರದ ಮತಗಟ್ಟೆ ಸಂಖ್ಯೆ 12ರಲ್ಲಿ ಮತ ಚಲಾಯಿಸಿದ ಸಿಎಂ ಯೋಗಿ ಆದಿತ್ಯನಾಥ್​.

***********************************************************************

ನವದೆಹಲಿ: ಕಳೆದ ಮೂರು ತಿಂಗಳಿನಿಂದ ಲೋಕಸಭೆ ಚುನಾವಣೆಯ ಗುಂಗಿನಲ್ಲೇ ಮುಳುಗಿದ್ದ ಭಾರತ ಕೊನೆಯ ಹಂತದ ಮತಸಮರಕ್ಕೆ ಸಜ್ಜಾಗಿದೆ. ಒಟ್ಟು 8 ರಾಜ್ಯಗಳ 59 ಕ್ಷೇತ್ರಗಳಿಗೆ ಭಾನುವಾರ ನಡೆಯಲಿರುವ ಏಳನೇ ಹಾಗೂ ಅಂತಿಮ ಸುತ್ತಿನ ಮತದಾನದಲ್ಲಿ 10.17 ಕೋಟಿ ಮತದಾರರು 918 ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸಿರುವ ವಾರಾಣಸಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯುವುದಕ್ಕೆ ನಿರ್ಣಾಯಕವೆಂದೇ ಗುರುತಿಸ ಲಾಗಿರುವ ಪ್ರಮುಖ ಕ್ಷೇತ್ರಗಳಿಗೂ 7ನೇ ಹಂತದಲ್ಲಿ ಮತದಾನ ನಡೆಯುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ. ಅಂತಿಮ ಚರಣದ ಮತದಾನದ ಬಳಿಕ ಫಲಿತಾಂಶಕ್ಕೆ ನಾಲ್ಕು ದಿನವಷ್ಟೇ ಬಾಕಿ ಉಳಿದಿರುವುದರಿಂದ ಎಲ್ಲರ ಚಿತ್ತ ಮೇ 23ರತ್ತ ನೆಟ್ಟಿದೆ.

3 ತಿಂಗಳ ಪ್ರಕ್ರಿಯೆ: ಲೋಕಸಭೆ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಮಾರ್ಚ್​ನಲ್ಲಿ ಪ್ರಕಟಿಸಿತ್ತು. ಅದರೊಂದಿಗೆ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿತ್ತು. ಏಪ್ರಿಲ್ 11ರಂದು ಆರಂಭವಾಗಿದ್ದ ಮತದಾನ ಮೇ 19ರಂದು ಕೊನೆಗೊಳ್ಳುತ್ತಿದೆ. ಎಲ್ಲ 542 ಕ್ಷೇತ್ರಗಳ ಮತ ಎಣಿಕೆ ಮೇ 23ರಂದು ನಡೆಯಲಿದೆ.

ಏಳು ಹಂತದ ಮತದಾನ: ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಬಿಹಾರದಲ್ಲಿ ಎಲ್ಲ 7 ಹಂತಗಳಲ್ಲಿ ಚುನಾವಣೆ ನಡೆದಿರುವುದು ವಿಶೇಷ. ಜಮ್ಮು ಮತ್ತು ಕಾಶ್ಮೀರದಲ್ಲಿ 5 ಹಂತದಲ್ಲಿ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್​ಗಳಲ್ಲಿ ಒಂದೇ ಹಂತದಲ್ಲಿ ಮತದಾನ ಮುಗಿದಿದೆ. ಜಾರ್ಖಂಡ್, ಬಿಹಾರ ಹಾಗೂ ಉತ್ತರಪ್ರದೇಶದ ಕೆಲವು ಭಾಗಗಳಲ್ಲಿ ಬೆಳಗ್ಗೆ 7ಕ್ಕೆ ಆರಂಭವಾಗಿ ಸಂಜೆ 4 ಗಂಟೆಗೆ ಮತದಾನ ಅವಧಿ ಮುಕ್ತಾಯಗೊಳ್ಳಲಿದೆ. ಉಳಿದೆಲ್ಲ ಕಡೆಗಳಲ್ಲಿ ಸಂಜೆ 6ರವರೆಗೆ ಮತ ಚಲಾವಣೆಯಾಗಲಿದೆ.

ಹಣ ಹಂಚಿಕೆ ಹಾಗೂ ಚುನಾವಣಾ ಅಕ್ರಮ ಆರೋಪದಲ್ಲಿ ರದ್ದುಗೊಂಡಿರುವ ತಮಿಳುನಾಡಿನ ವೆಲ್ಲೂರು ಕ್ಷೇತ್ರದಲ್ಲಿ ಚುನಾವಣೆ ಇನ್ನಷ್ಟೇ ಘೋಷಣೆ ಆಗಬೇಕಿದೆ.

ಚುನಾವಣೆ ವಿಶೇಷ

# ಪುಲ್ವಾಮಾ ಉಗ್ರ ದಾಳಿ, ಶ್ರೀಲಂಕಾ ಸರಣಿ ಸ್ಪೋಟದ ಬಳಿಕ ಉಗ್ರರ ಸಂಭಾವ್ಯ ದಾಳಿ ಕುರಿತು ಎಚ್ಚರಿಕೆ ಇರುವ ಹೊರತಾಗಿಯೂ ಯಾವುದೇ ಅಡ್ಡಿ ಎದುರಾಗದಂತೆ ಚುನಾವಣೆ ಪ್ರಕ್ರಿಯೆ ಯಶಸ್ವಿ

#ಲೋಕಸಭೆ ಚುನಾವಣೆ ಕಾರಣಕ್ಕಾಗಿಯೇ 2009 ಹಾಗೂ 2014ರಲ್ಲಿ ಐಪಿಎಲ್ ಕ್ರಿಕೆಟ್ ಟೂರ್ನಿಯನ್ನು ದಕ್ಷಿಣ ಆಫ್ರಿಕಾ ಹಾಗೂ ಯುಎಇಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಈ ಬಾರಿ ಐಪಿಎಲ್ ಪೂರ್ಣಗೊಳಿಸಿಯೂ ಚುನಾವಣೆ ನಡೆಸಲಾಗಿದೆ.

#ರಮಜಾನ್ ಪ್ರಯುಕ್ತ ಮತದಾನ ಮುಂದೂಡಿಕೆ ಆಗಿರುವ ಹಲವು ನಿದರ್ಶನ ಗಳಿವೆ. ಆದರೆ ಈ ಚುನಾವಣೆ ಯಲ್ಲಿ ಅದಕ್ಕೂ ಅವಕಾಶ ಸಿಕ್ಕಿಲ್ಲ

# ಸಾಲು ಸಾಲು ಪರೀಕ್ಷೆಗಳ ಸವಾಲನ್ನೂ ಮೀರಿ ಚುನಾವಣೆ ನಡೆಸಿರುವುದು ಮತ್ತೊಂದು ಹೆಗ್ಗಳಿಕೆ

ಪ್ರಥಮ ಮತದಾರನಿಂದ ಇಂದು ಹಕ್ಕು ಚಲಾವಣೆ

1951ರಲ್ಲಿ ನಡೆದಿದ್ದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ದೇಶದ ಮೊದಲ ಮತದಾರನಾಗಿ ಮತ ಚಲಾಯಿಸಿದ್ದ ವ್ಯಕ್ತಿ ಏಳನೇ ಹಂತದಲ್ಲಿ ಮತ ಚಲಾಯಿಸಲಿದ್ದಾರೆ. ಹಿಮಾಚಲ ಪ್ರದೇಶದ ಕಲ್ಪ ಗ್ರಾಮದ 102 ವರ್ಷಗಳ ಶ್ಯಾಮ್ ಶರಣ್ ನೇಗಿ ಅವರನ್ನು ಮತದಾನಕ್ಕಾಗಿ ಭಾನುವಾರ ಗೌರವದಿಂದ ಮತಗಟ್ಟೆಗೆ ಕರೆತರಲಿದ್ದೇವೆ ಎಂದು ಕಿನ್ನೌರ್ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇಂದು ಸಂಜೆ ಎಕ್ಸಿಟ್ ಪೋಲ್

ಮತದಾನ ಪೂರ್ಣಗೊಳ್ಳುತ್ತಲೇ ಸಂಜೆ 5.30ರ ಬಳಿಕ ಮತದಾನೋತ್ತರ ಸಮೀಕ್ಷಾ ವರದಿಗಳು ಪ್ರಕಟವಾಗಲಿದೆ. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲೂ ಕೆಲವು ಖಾಸಗಿ ಸಂಸ್ಥೆಗಳು ಪ್ರಕಟಿಸಿದ್ದ ಸಮೀಕ್ಷಾ ವರದಿ ಫಲಿತಾಂಶಕ್ಕೆ ಸಮೀಪವಿತ್ತು. ಹೀಗಾಗಿ ಎಕ್ಸಿಟ್ ಪೋಲ್ ಕುತೂಹಲ ಕೆರಳಿಸಿದೆ.

7ನೇ ಹಂತ ಬಿಜೆಪಿಗೇಕೆ ನಿರ್ಣಾಯಕ

ಇಂದು ಮತದಾನ ನಡೆಯುತ್ತಿರುವ 59 ಕ್ಷೇತ್ರಗಳ ಪೈಕಿ 33 ಕ್ಷೇತ್ರಗಳಲ್ಲಿ ಬಿಜೆಪಿ 2014ರ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 3ರಲ್ಲಿ ಗೆದ್ದಿದ್ದರೆ ಟಿಎಂಸಿ 9 ಹಾಗೂ ಇತರರು 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಈ ಸಾಧನೆ ಬಿಜೆಪಿಗೆ ಸ್ಪಷ್ಟ ಬಹುಮತ ತಂದುಕೊಡುವಲ್ಲಿ ನೆರವಾಗಿತ್ತು. ಹೀಗಾಗಿಯೇ 7ನೇ ಹಂತದ ಮತದಾನ ಬಿಜೆಪಿ ಪಾಲಿಗೆ ನಿರ್ಣಾಯಕ ಎಂದೇ ವಿಶ್ಲೇಷಿಸಲಾಗುತ್ತಿದೆ.

ಗುಹೆಯಲ್ಲಿ ನಮೋ ಧ್ಯಾನ

ಲೋಕಸಭೆ ಚುನಾವಣೆ ಅಂತಿಮ ಘಟ್ಟ ತಲುಪಿರುವಂತೆಯೇ ಎರಡು ದಿನಗಳ ಭೇಟಿಗಾಗಿ ಉತ್ತರಾಖಂಡಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕೇದಾರನಾಥನ ದರ್ಶನ ಪಡೆದರು. ಸುಮಾರು ಅರ್ಧ ಗಂಟೆ ಕಾಲ ಪೂಜೆ ಮತ್ತು ಅರ್ಚನೆ ನೆರವೇರಿಸಿದ ಬಳಿಕ 2 ಕಿ.ಮೀ ದೂರದಲ್ಲಿರುವ ಗುಹೆಗೆ ಕಾಲ್ನಡಿಗೆಯಲ್ಲೇ ತೆರಳಿ ಧ್ಯಾನಕ್ಕೆ ಕುಳಿತರು. ಭಾನುವಾರ ಬೆಳಗಿನವರೆಗೂ ಮೋದಿ ಅವರ ಧ್ಯಾನ ಮುಂದುವರಿಯುವುದಾಗಿ ತಿಳಿದು ಬಂದಿದೆ. ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿ ಬದರೀನಾಥಕ್ಕೆ ತೆರಳಿರುವ ಮೋದಿ ಭಾನುವಾರ ದರ್ಶನ ಕೈಗೊಳ್ಳಲಿದ್ದಾರೆ. ಕೇದಾರನಾಥನ ದರ್ಶನದ ವೇಳೆ ಮೋದಿ ಅವರು ಸಾಂಪ್ರದಾಯಿಕ ಪಹಾರಿ ಉಡುಗೆ ತೊಟ್ಟಿದ್ದು ಗಮನ ಸೆಳೆಯಿತು.

ವಿಡಿಯೋ ನ್ಯೂಸ್

VIDEO| ಇಂದಿರಾ ಜೈಸಿಂಗ್​ ಅಂತಹವರನ್ನು ನಿರ್ಭಯಾ ಅಪರಾಧಿಗಳ ಜತೆ ಜೈಲಿನ...

ನವದೆಹಲಿ: ಹಿರಿಯ ವಕೀಲೆ ಇಂದಿರಾ ಜೈಸಿಂಗ್​ ಅವರನ್ನು ನಿರ್ಭಯಾ ಪ್ರಕರಣದ ಅಪರಾಧಿಗಳ ಜತೆ ಜೈಲಿನಲ್ಲಿಡಬೇಕು ಎಂದು ನಟಿ ಕಂಗನಾ ರಣಾವತ್​ ಆಕ್ರೋಷ ವ್ಯಕ್ತಪಡಿಸಿದ್ದಾರೆ. ನಿರ್ಭಯಾ ಪ್ರಕರಣವನ್ನು ಸಂತ್ರಸ್ಥೆ ತಾಯಿ ಆಶಾದೇವಿ ಅವರು ಕ್ಷಮಿಸಬೇಕು ಎಂಬ...

VIDEO| ಪ.ಬಂಗಾಳದಲ್ಲಿ ಮೂರೇ ವರ್ಷ ಹಿಂದೆ 165 ಕೋಟಿ ರೂ....

ಬಂಕುರಾ: ಪಶ್ಚಿಮ ಬಂಗಾಳದ ಬಂಕುರಾದ ಸಾರೆಂಗಾದಲ್ಲಿ ಕೇವಲ ಮೂರೇ ವರ್ಷ ಹಿಂದ 165 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಓವರ್ ಹೆಡ್ ಟ್ಯಾಂಕ್ ಒಂದು ಬುಧವಾರ ಅಪರಾಹ್ನ ಕುಸಿದು ಬಿದ್ದಿದೆ....

VIDEO| ಗಗನಯಾನಕ್ಕೆ ವ್ಯೋಮಮಿತ್ರಾ; ಇಸ್ರೋದಿಂದ ರೋಬಾಟ್ ಅನಾವರಣ, ವರ್ಷಾಂತ್ಯಕ್ಕೆ ಪ್ರಯಾಣ

ಬೆಂಗಳೂರು: ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಕಾರ್ಯಕ್ರಮ ಗಳಲ್ಲೊಂದಾದ ಮಾನವಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ಪ್ರಯಾಣ ಬೆಳೆಸಲಿರುವ ರೋಬಾಟ್ ‘ವ್ಯೋಮಮಿತ್ರಾ’ವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಬುಧವಾರ ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ. ಖಾಸಗಿ ಹೋಟೆಲ್​ನಲ್ಲಿ ‘ಮಾನವಸಹಿತ ಗಗನಯಾನ ಮತ್ತು ಅನ್ವೇಷಣೆ ಕಾರ್ಯಕ್ರಮ’...

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...