ಮತದಾನ ಬಹಿಷ್ಕಾರ ಹಿಂಪಡೆದ ಗ್ರಾಮಸ್ಥರು

ಕುಮಟಾ: ಮೂಲಸೌಕರ್ಯ ಕಲ್ಪಿಸುವವರೆಗೂ ಮತದಾನ ಬಹಿಷ್ಕರಿಸುವದಾಗಿ ಎಚ್ಚರಿಸಿದ್ದ ಸಂಡಳ್ಳಿ, ಮತ್ತಳ್ಳಿ, ಕಂದಳ್ಳಿ, ಮಾವಳ್ಳಿ ಮತ್ತು ಮಾಸ್ತಿಹಳ್ಳ ಭಾಗದ ಗ್ರಾಮಸ್ಥರೊಂದಿಗೆ ಅಧಿಕಾರಿಗಳು ಮಾತುಕತೆ ನಡೆಸಿ ಮತದಾನಕ್ಕೆ ಒಪ್ಪಿಸುವಲ್ಲಿ ಸಫಲರಾಗಿದ್ದಾರೆ.

ರಾಜಕಾರಣಿಗಳು, ಅಧಿಕಾರಿಗಳು ಊರಿನ ಸಮಸ್ಯೆಗಳ ಬಗ್ಗೆ ಗಮನ ಹರಿಸದೇ ಇರುವುದರಿಂದ ಈ ವರ್ಷದಿಂದ ನಮ್ಮ ಮೂಲ ಸೌಕರ್ಯಗಳನ್ನು ಈಡೇರಿಸುವ ತನಕ ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸಲಾಗುವುದು ಎಂದು ಪ್ರಧಾನಮಂತ್ರಿ, ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ಚುನಾವಣಾ ಆಯೋಗಕ್ಕೂ ಪತ್ರ ಬರೆದಿದ್ದರು. ಈ ಬಗ್ಗೆ ‘ವಿಜಯವಾಣಿ’ಯಲ್ಲಿ ಫೆ.23ರಂದು ಲೋಕಸಭೆ ಚುನಾವಣೆ ಬಹಿಷ್ಕಾರ ಬೆದರಿಕೆ ಶೀರ್ಷಿಕೆಯಡಿ ವಿಸõತ ವರದಿ ಪ್ರಕಟವಾಗಿತ್ತು.

ತಹಸೀಲ್ದಾರ್ ಪ್ರಮೀಳಾ ದೇಶಪಾಂಡೆ, ತಾಪಂ ಇಒ ಸಿ.ಟಿ. ನಾಯ್ಕ ಇತರ ಅಧಿಕಾರಿಗಳು ಸಂಡಳ್ಳಿಗೆ ಶನಿವಾರ ಭೇಟಿ ನೀಡಿ, ಊರಿನ ಸಮಸ್ಯೆ ಮತ್ತು ಮೂಲಸೌಕರ್ಯಗಳ ಬಗ್ಗೆ ರ್ಚಚಿಸಿದರು. ಮಾಸ್ತಿಹಳ್ಳದಿಂದ ಸಂಡಳ್ಳಿಯವರೆಗೆ ರಸ್ತೆ ನಿರ್ವಣ, ಸೇತುವೆ, ದೂರವಾಣಿ ಸಂಪರ್ಕ ಮುಂತಾದ ಸಮಸ್ಯೆಗಳನ್ನು ಗ್ರಾಮಸ್ಥರು ವಿವರಿಸಿದರು.

ಮಾಸ್ತಿಹಳ್ಳದಿಂದ ಸಂಡಳ್ಳಿಯವರೆಗೆ ರಸ್ತೆ ನಿರ್ವಣಕ್ಕೆ 2 ಕೋಟಿ ರೂ. ಮಂಜೂರು ಮಾಡುವುದಾಗಿ ತಹಸೀಲ್ದಾರ್ ತಿಳಿಸಿದರು. ಬಿಎಸ್​ಎನ್​ಎಲ್​ನಿಂದ ಮೊಬೈಲ್ ಟವರ್ ಅಸಾಧ್ಯವಾದಲ್ಲಿ ಖಾಸಗಿ ಕಂಪನಿಗಳ ಮೊಬೈಲ್ ಟವರ್ ನಿರ್ವಣಕ್ಕೆ ಪ್ರಯತ್ನಿಸುತ್ತೇವೆ. ಮತದಾನ ಬಹಿಷ್ಕಾರವನ್ನು ಹಿಂಪಡೆಯಿರಿ ಎಂದು ವಿನಂತಿಸಿದರು.

ಇದಕ್ಕೆ ಜಗ್ಗದ ಗ್ರಾಮಸ್ಥರು, ‘ಲಿಖಿತವಾಗಿ ಭರವಸೆ ನೀಡಬೇಕು’ ಎಂದು ಒತ್ತಾಯಿಸಿದರು. ತಹಸೀಲ್ದಾರರು ಗ್ರಾಮಸ್ಥರಿಗೆ ಲಿಖಿತ ಭರವಸೆ ಕೊಟ್ಟ ನಂತರ ಗ್ರಾಮಸ್ಥರು ಮತದಾನ ಮಾಡಲು ಒಪ್ಪಿದರು. ಒಂದೊಮ್ಮೆ ಚುನಾವಣೆ ಬಳಿಕ ನಮ್ಮ ಬೇಡಿಕೆ ನಿರ್ಲಕ್ಷಿಸಿದರೆ ಹೋರಾಟ ಅನಿವಾರ್ಯ ಎಂದು ಗ್ರಾಮಸ್ಥರು ತಿಳಿಸಿದರು.

ಅಳಕೋಡ ಪಂಚಾಯಿತಿ ಗ್ರಾಮ ಲೆಕ್ಕಿಗ ಬೀರಾ ಗೌಡ, ಗ್ರಾಮಸ್ಥರಾದ ನಾಗರಾಜ, ಮಾಸ್ತಿಹಳ್ಳದ ನಾಗೇಶ ನಾಯ್ಕ, ಮತ್ತಳ್ಳಿಯ ರಾಜೇಶ ಶ್ರೀಧರ ಹೆಗಡೆ, ಶ್ರೀಧರ ದತ್ತಾತ್ರೇಯ ಹೆಗಡೆ, ಭಾಸ್ಕರ ಪರಮೇಶ್ವರ ಗೌಡ, ರೋಹನ್ ಜೆ. ಫರ್ನಾಂಡೀಸ್, ಪರಾಸ್ತ ಫರ್ನಾಂಡೀಸ್, ಫ್ರಾನ್ಸಿಸ್ ಫರ್ನಾಂಡೀಸ್, ಜೂವನ್ ಫರ್ನಾಂಡೀಸ್, ಸಂಡಳ್ಳಿಯ ಹರೀಶ ಗಜಾನನ ಶಾಸ್ತ್ರಿ, ಲಕ್ಷ್ಮ್ಮ ಪಟಗಾರ, ಭಾರತಿ ಪಟಗಾರ, ರಾಮ ಪಟಗಾರ, ಶಂಭು ಕೆ. ಭಟ್, ಗಜಾನನ ಸೀತಾರಾಮ ಹೆಗಡೆ, ಗಣೇಶ ವೆಂಕಟರಮಣ ಭಟ್, ಕಂದಳ್ಳಿಯ ರಾಮ ಮಾದೇವ ಗೌಡ, ಲಕ್ಷ್ಮಣ ಮಾದೇವ ಗೌಡ, ಗಣಪತಿ ಮಹಾಬಲೇಶ್ವರ ಹೆಗಡೆ, ಗಣಪತಿ ಲಕ್ಷ್ಮಣ ಗೌಡ, ಅಜಿತ್ ಗಣಪತಿ ಮುಕ್ರಿ, ದಯಾನಂದ ಗಣೇಶ ಶೆಟ್ಟಿ, ಉಮೇಶ ಮಾದೇವ ಪಟಗಾರ, ಬೀರಪ್ಪ ಪುಂಡಲೀಕ ಅಂಬಿಗ, ಉಮೇಶ ನಾರಾಯಣ ಪಟಗಾರ, ನಾಗರಾಜ ದಿವಾಕರ ಪಟಗಾರ ಇತರರು ಇದ್ದರು.

ಸಂಡಳ್ಳಿ-ಮತ್ತಳ್ಳಿ ಭಾಗದ ಜನರ ಮೂಲಸೌಕರ್ಯಗಳನ್ನು ಪೂರೈಸುವತ್ತ ಪೂರ್ಣ ಪ್ರಮಾಣದ ಪ್ರಯತ್ನ ಮಾಡುತ್ತೇವೆ. ಗ್ರಾಮದ ಜನತೆ ಮತದಾನ ಮಾಡುವ ಮೂಲಕ ಸಂವಿಧಾನಬದ್ಧ ಹಕ್ಕು ಚಲಾಯಿಸಬೇಕು. | ಪ್ರಮೀಳಾ ದೇಶಪಾಂಡೆ ತಹಸೀಲ್ದಾರ್