More

    ಮತದಾನ ಜಾಗೃತಿ ತೀವ್ರಗೊಳಿಸಲು ಜಿ.ಪಂ. ಸಿಇಓ ಸೂಚನೆ

    ಹಾಸನ: ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುವಂತೆ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್ ಪೂರ್ಣಿಮಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಜಿಲ್ಲಾ ಪಂಚಾಯಿತಿ ಸಂಭಾಗಣದಲ್ಲಿ ಬುಧವಾರ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2019ರ ಲೋಕಸಭಾ ಚುನಾವಣೆಯಲ್ಲಿ ರಾಷ್ಟೀಯ ಸರಾಸರಿ ಮತದಾನ ಶೇಕಡವಾರು 67.4 ಕ್ಕಿಂತ ಕಡಿಮೆ ಮತದಾನವಾಗಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ ಹೆಚ್ಚಾಗಿ ನಡೆಯಬೇಕು. ಹಾಸನ ನಗರ ಪ್ರದೇಶದಲ್ಲಿ 84 ಮತಗಟ್ಟೆ ವ್ಯಾಪ್ತಿಯಲ್ಲಿ ತೀವ್ರ ಸ್ವೀಪ್ ಚಟುವಟಿಕೆಗಳನ್ನು ಮಾಡಬೇಕು. ಚುನಾವಣಾ ಜಾಗೃತಿಯ ಪೋಸ್ಟರ್‌ಗಳನ್ನು ಮನೆ ಮನೆಗೆ ಅಳವಡಿಸಿ ಮತದಾರರಿಗೆ ಕಡ್ಡಾಯವಾಗಿ ಮತದಾನ ಮಾಡಲು ಪ್ರೇರೇಪಿಸಬೇಕು ಎಂದರು.
    ಸಾರ್ವತ್ರಿಕವಾಗಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಮತದಾರರ ಜಾಗೃತಿಯನ್ನುಂಟು ಮಾಡಬೇಕು. ರಥಯಾತ್ರೆ, ಬೀದಿನಾಟಕ, ಜಾಥಾ ಮೊದಲಾದ ಕಾರ್ಯಕ್ರಮಗಳ ಮೂಲಕ ಗ್ರಾಮ ಪಂಚಾಯಿತಿ ನಗರಸಭೆ, ಪುರಸಭೆ ಪಟ್ಟಣ ಪಂಚಾಯಿತಿ ಹಂತಗಳಲ್ಲಿ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಿಇಓ ಸೂಚಿಸಿದರು.
    ನಗರಸಭೆ, ಪುರಸಭೆ, ಪಟ್ಟಣ, ಪಂಚಾಯಿತಿ ಗ್ರಾಮ ಪಂಚಾಯಿತಿ ಹಂತಗಳಲ್ಲಿ ಕಸದ ವಾಹನಗಳ ಆಟೋ ಟಿಪ್ಪರ್‌ಗಳಲ್ಲಿ ಚುನಾವಣಾ ಗೀತೆಗಳನ್ನು ಪ್ರಚಾರ ಮಾಡುವುದರ ಮೂಲಕ ಜನರಿಗೆ ಹೆಚ್ಚು ಜಾಗೃತಿ ಮೂಡಿಸಬೇಕು, ಮತದಾನ ಜಾಗೃತಿಯಲ್ಲಿ ಸ್ತ್ರೀ ಶಕ್ತಿ ಸಂಘಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು, ಸ್ವಯಂ ಸೇವಾ ಸಂಸ್ಥೆಗಳನ್ನು ಬಳಸಿಕೊಂಡು ಚಟುವಟಿಕೆ ನಡೆಸಬೇಕು. ವಿಶೇಷ ಚೇತನರಿಂದ ವಾರದಲ್ಲಿ ಒಂದು ಜಾಥಾ ಕಾರ್ಯಕ್ರಮ ನಡೆಸಬೇಕು. ನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಚುನಾವಣಾ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು ಎಂದರು.
    ಚುನಾವಣಾ ರಾಯಬಾರಿಗಳ ನೇಮಕ ಮಾಡುವುದು, ಇ.ಎಲ್.ಸಿ ಕ್ಲಬ್‌ಗಳನ್ನು ಬಲಪಡಿಸಿ ಜಾಗೃತಿ ಮೂಡಿಸುವುದು, ಮಾನವ ಸರಪಳಿ, ಮಹಿಳೆಯರ ಬೈಕ್ ರ್ಯಾಲಿ, ಸೈಕಲ್ ರ‌್ಯಾಲಿ, ಪಂಜಿನ ಮೆರವಣಿಗೆ, ಮನೆ ಮನೆ ಭೇಟಿ ಮಾಡಿ ಕರಪತ್ರಗಳನ್ನು ವಿತರಣೆ ಮಾಡಬೇಕು. ಹಾಗೆಯೇ ಚುನಾವಣಾ ರಥ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ತೆರಳಿ ಅಲ್ಲಿನ ಅಧಿಕಾರಿಗಳು ರಥವನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಡೆಸಿಕೊಡಬೇಕು ಎಂದು ತಿಳಿಸಿದರು.
    ಚುನಾವಣಾ ಜಾಗೃತಿ ಬ್ಯಾನರ್‌ಗಳನ್ನು ಎಲ್ಲಾ ಮೆಡಿಕಲ್ಸ್, ನಸಿರ್ಂಗ್ ಹೋಮ್, ಪುಡ್ ಕೋಟ್, ಸ್ಕಾನಿಂಗ್ ಸೆಂಟರ್ ಗಳಲ್ಲಿ ಅತಿ ಹೆಚ್ಚು ಸಾರ್ವಜನಿಕರು ಇರುವ ಜಾಗಗಳಲ್ಲಿ ಅಳವಡಿಸಿಬೇಕು. ಸರ್ಕಾರಿ ಬಸ್‌ಗಳಲ್ಲಿ ಜಿಲ್ಲೆಯೊಳಗಿನ ಪೋಸ್ಟರ್‌ಗಳ ಅಳವಡಿಕೆ ಮಾಡುವುದು. ಹೀಲಿಯಂ ಬಲೂನ್ ಗಳನ್ನು ಬಳಸುವಂತೆ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.
    ಸಭೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ,ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts