ಮತದಾನ ಜಾಗೃತಿಗೆ ಹನುಮಂತಪ್ಪನಿಂದ ಬಂಡಿ ಸವಾರಿ

ಹಾವೇರಿ: ಲೋಕಸಭಾ ಚುನಾವಣೆ ಅಂಗವಾಗಿ ನಗರದಲ್ಲಿ ರಾಯಭಾರಿ, ಗಾಯಕ ಹನುಮಂತಪ್ಪ ಲಮಾಣಿ ಎತ್ತಿನಬಂಡಿ ಸವಾರಿ ಮಾಡಿ ಗುರುವಾರ ಮತದಾನ ಜಾಗೃತಿ ಮೂಡಿಸಿದರು.

ಅಲಂಕೃತ ಎತ್ತಿನ ಬಂಡಿಯಲ್ಲಿ ಹಸಿರು ಶಾಲು ಹೊದ್ದ ಗಾಯಕ ಹನುಮಂತ ಲಮಾಣಿ, ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಿ ಎಂದು ಸಾರ್ವಜನಿಕರಲ್ಲಿ ಕೋರಿದರು. ಗಾಂಧಿ ವೃತ್ತದಿಂದ ಎಂ.ಜಿ.ರಸ್ತೆ, ಹೈಸ್ಕೂಲ್ ರಸ್ತೆ ಮಾರ್ಗವಾಗಿ, ಹೊಸಮನಿ ಸಿದ್ದಪ್ಪ ಜಿಲ್ಲಾ

ಕ್ರೀಡಾಂಗಣಕ್ಕೆ ಜೋಡಿ ಎತ್ತಿನ ಬಂಡಿಗಳು ಸಾಗಿ ಬಂದವು. ಮೆರವಣಿಗೆಗೆ ಜಿಪಂ ಸಿಇಒ ಕೆ.ಲೀಲಾವತಿ ಚಾಲನೆ ನೀಡಿದರು. ವಾರ್ತಾಧಿಕಾರಿ ಬಿ.ಆರ್. ರಂಗನಾಥ್, ಪರಮೇಶ ಹುಬ್ಬಳ್ಳಿ, ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *