ಮತದಾನ ಜಾಗೃತಿಗಾಗಿ ಬೈಕ್ ರ‍್ಯಾಲಿ

ರಾಣೆಬೆನ್ನೂರ: ನಗರದಲ್ಲಿ ಭಾನುವಾರ ಜಿಲ್ಲಾ ಸ್ವೀಪ್ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮತದಾರರ ಜಾಗೃತಿಗಾಗಿ ಆಯೋಜಿಸಿದ್ದ ಮಹಿಳೆಯರ ಹಾಗೂ ಪುರುಷರ ಬೈಕ್ ರ‍್ಯಾಲಿ ಸಾರ್ವಜನಿಕರ ಗಮನ ಸೆಳೆಯಿತು.

ಜಿಪಂ ಸಿಇಒ ಕೆ. ಲೀಲಾವತಿ ರ್ಯಾಲಿಗೆ ಚಾಲನೆ ನೀಡಿದರು. ನಗರದ ತಹಸೀಲ್ದಾರ್ ಕಚೇರಿಯಿಂದ ಆರಂಭಗೊಂಡ ಬೈಕ್ ರ‍್ಯಾಲಿ ಎಂ.ಜಿ. ರಸ್ತೆ, ಪೋಸ್ಟ್ ವೃತ್ತ, ಪಿ.ಬಿ. ರಸ್ತೆ, ದೊಡ್ಡಪೇಟೆ, ಬಸ್ ನಿಲ್ದಾಣ, ಕೋರ್ಟ್ ವೃತ್ತ ಮೊದಲಾದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ದಾರಿಯುದ್ದಕ್ಕೂ ಮತದಾನ ಮಾಡಿ, ಪ್ರಜಾಪ್ರಭುತ್ವ ಗೆಲ್ಲಿಸಿ, ಆಸೆ-ಆಮಿಷಗಳಿಗೆ ಮರುಳಾಗಬೇಡಿ ಮತ್ತಿತರ ಘೊಷಣೆ ಕೂಗುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.

ತಹಸೀಲ್ದಾರ್ ಎ.ಎಸ್. ಕುಲಕರ್ಣಿ, ನಗರಸಭೆ ಆಯುಕ್ತ ಡಾ. ಮಹಾಂತೇಶ, ತಾಪಂ ಇಒ ಡಾ. ಬಸವರಾಜ, ಸಹಾಯಕ ಚುನಾವಣಾಧಿಕಾರಿ ಹದೀದ ಗಡ್ಯಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ, ತಾಪಂ ವ್ಯವಸ್ಥಾಪಕ ಬಿ.ಎಸ್. ಶಿಡೇನೂರ, ಎ.ಎಸ್. ನಾರಜ್ಜಿ, ಬಿ.ಎಸ್. ಪಾಟೀಲ, ಪೊಲೀಸ್ ಇಲಾಖೆ ಸೇರಿ ವಿವಿಧ ಇಲಾಖೆಗಳ ನೂರಾರು ಸಿಬ್ಬಂದಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *