18 C
Bangalore
Friday, December 6, 2019

ಮತದಾನಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

Latest News

ನೀರಿದೆ, ಪೂರೈಕೆ ವ್ಯವಸ್ಥೆ ಇಲ್ಲ

ಚಿಕ್ಕಮಗಳೂರು: ಈ ವರ್ಷ ಮಳೆ ಚೆನ್ನಾಗಿಯೇ ಆಗಿದೆ. ಎಲ್ಲ ನೀರಿನ ಮೂಲಗಳೂ ಭರ್ತಿಯಾಗಿವೆ. ನೀರು ಕೊಡಲು ಇನ್ನೇನು ಸಮಸ್ಯೆ? ನಾಗರಿಕರ ಇಂತಹ ಮಾತು,...

ಕುಕ್ಕರಹಳ್ಳಿ ಕೆರೆಯಲ್ಲಿ ಎರಡು ದ್ವೀಪ ನಿರ್ಮಿಸಿ

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೊಸದಾಗಿ ಎರಡು ದ್ವೀಪಗಳನ್ನು ನಿರ್ಮಾಣ ಮಾಡುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಮೈಸೂರು...

ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಹುಣಸೂರು ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಮಾಡಿರುವುದರ ಜತೆಗೆ ಹೆಂಡದ ಘಾಟು ಹೆಚ್ಚು ವಿಜೃಂಭಿಸಿದೆ! ಮತದಾರರನ್ನು ಸೆಳೆಯಲು ಇಲ್ಲಿ...

ಯುವತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಸೆರೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನಕೊಪ್ಪಲು ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಅಮೃತ್...

ಹುಣಸೂರು ಉಪಕದನ ಬಹುತೇಕ ಶಾಂತಿಯುತ

ಮೈಸೂರು: ಜಿದ್ದಾಜಿದ್ದಿನ ಕಣವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಶೇ.76ರಷ್ಟು ಮತದಾನವಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.82.54ರಷ್ಟು ಮತ್ತು ಆರು ತಿಂಗಳ...

ಧಾರವಾಡ: ಏ. 23ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಮತದಾನಕ್ಕೆ ಸಿದ್ಧತೆ ಪೂರ್ಣಗೊಂಡಿದೆ. ಅರ್ಹ ಮತದಾರರು ತಪ್ಪದೇ ಮತ ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 8 ವಿಧಾನಸಭಾ ಕ್ಷೇತ್ರಗಳಲ್ಲಿ 1872 ಮತಗಟ್ಟೆ ಸ್ಥಾಪಿಸಲಾಗಿದೆ. ರಾಷ್ಟ್ರೀಯ ಪಕ್ಷಗಳ ಮೂರು, ನೋಂದಾಯಿತ ಪಕ್ಷಗಳಿಂದ ಆರು ಹಾಗೂ 10 ಪಕ್ಷೇತರರು ಸೇರಿದಂತೆ ಒಟ್ಟು 19 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಎರಡು ಮತಯಂತ್ರಗಳನ್ನು ಬಳಸಲಾಗುತ್ತಿದೆ ಎಂದರು.

ಕ್ಷೇತ್ರದಲ್ಲಿ 8,75,479 ಪುರುಷರು, 8,49,750 ಮಹಿಳೆಯರು, 106 ತೃತೀಯ ಲಿಂಗಿಗಳು ಸೇರಿ ಒಟ್ಟಾರೆ 17,25,335 ಮತದಾರರಿದ್ದಾರೆ. ಹೊಸದಾಗಿ (ಮೊದಲ ಬಾರಿಗೆ) 33,144 ಪ್ರಜೆಗಳು ಮತದಾನ ಮಾಡಲಿದ್ದಾರೆ. ಜಿಲ್ಲೆಯಲ್ಲಿನ 13,159 ವಿಕಲಚೇತನರಿಗೆ ಮತಗಟ್ಟೆಗಳಿಗೆ ಇಬ್ಬರಂತೆ 3268 ಸ್ವಯಂ ಸೇವಕರನ್ನು ಹಾಗೂ 789 ವಾಹನಗಳನ್ನು ನಿಯೋಜಿಸಲಾಗಿದೆ. ದೃಷ್ಟಿ ಮಾಂದ್ಯ ಹಾಗೂ ಹಿರಿಯ ಮತದಾರರ ಅನುಕೂಲಕ್ಕೆ ಪ್ರತಿ ಮತಗಟ್ಟೆಗೆ ಒಂದು ಪೀನ ಮಸೂರ ವ್ಯವಸ್ಥೆ ಮಾಡಲಾಗಿದೆ. ವಾಹನಗಳಿಗೆ ನೋಡಲ್ ಅಧಿಕಾರಿಗಳಾದ ರಾಜಶ್ರೀ ಜೈನಾಪುರ (ಮೊ. 9742392362), ಅಮರನಾಥ (ಮೊ 8217836083) ಅವರನ್ನು ಸಂಪರ್ಕಿಸಬಹುದು ಎಂದರು.

ಮತದಾನದ ದಿನ 1872 ಮತಗಟ್ಟೆಗಳಿಗೆ ಗ್ರುಪ್ ಡಿ ಸಿಬ್ಬಂದಿ ಸೇರಿದಂತೆ 10,109 ಮತದಾನ ಸಿಬ್ಬಂದಿ, 1872 ಜನ ಬಿಎಲ್​ಒ ಹಾಗೂ ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಪೊಲೀಸ್ ಇಲಾಖೆಯಿಂದ 3334 ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಸಖೀ ಬೂತ್​ಗಳನ್ನು ರಚಿಸಿದ್ದು, ಮಹಿಳೆಯರೇ ಮತಗಟ್ಟೆಗಳನ್ನು ನಿರ್ವಹಿಸುತ್ತಾರೆ ಎಂದರು.

17,25,335 ಮತದಾರರಿಗೆ ಈಗಾಗಲೇ ವೋಟರ್ಸ್ ಸ್ಲಿಪ್ ಹಂಚಿಕೆ ಮಾಡಲಾಗಿದೆ. ಮತದಾರರು ಈ ಸ್ಲಿಪ್​ನೊಂದಿಗೆ ಚುನಾವಣಾ ಆಯೋಗ ತಿಳಿಸಿದ ಯಾವುದಾದರೊಂದು ದಾಖಲೆ ಒಯ್ಯಬೇಕು. ಮತಗಟ್ಟೆಯಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್ ಬಳಸುವಂತಿಲ್ಲ ಎಂದರು.

ಮಸ್ಟರಿಂಗ್ ಸ್ಥಳದಿಂದ ಎಲ್ಲ ಮತಗಟ್ಟೆಗಳಿಗೆ ಅಧಿಕಾರಿ, ಸಿಬ್ಬಂದಿ ಕರೆದೊಯ್ಯಲು ಒಟ್ಟು 552 ಬಸ್ ಸೇರಿದಂತೆ ಇತರ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಮತದಾನದ ನಂತರ ಮತಯಂತ್ರಗಳನ್ನು ಕೃಷಿ ವಿವಿಯಲ್ಲಿ ಜಿಲ್ಲಾ ಭದ್ರತಾ ಕೊಠಡಿಗೆ ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ಒಯ್ಯಲಾಗುವುದು ಎಂದರು.

ಸಖಿ ಬೂತ್: ನವಲಗುಂದದ ಮಾಡಲ್ ಎಜುಕೇಶನ್ ಬೋರ್ಡ್ ಬಾಯ್್ಸ ಹೈಸ್ಕೂಲ್, ಅಣ್ಣಿಗೇರಿಯ ಶ್ರೀ ಅಮೃತೇಶ್ವರ ಪಿಯು ಕಾಲೇಜ್, ಕುಂದಗೋಳ ಪಟ್ಟಣ ಪಂಚಾಯಿತಿ ಕಚೇರಿ, ಸರ್ಕಾರಿ ಉರ್ದು ಪ್ರೌಢಶಾಲೆ, ಧಾರವಾಡದ ಮೃತ್ಯುಂಜಯ ಹೈಸ್ಕೂಲ್, ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಮತಗಟ್ಟೆ, ಹು-ಧಾ ಪೂರ್ವದಲ್ಲಿ ತೊರವಿಗಲ್ಲಿಯ ಕಾಪೋರೇಶನ್ ಕಚೇರಿ, ಬಾಸೆಲ್ ಮಿಶನ್ ಗಂಡುಮಕ್ಕಳ ಪ್ರೌಢ ಶಾಲೆ, ಹು-ಧಾ ಸೆಂಟ್ರಲ್​ನ ವಿದ್ಯಾನಗರದ ಸಿದ್ದೇಶ್ವರ ಪಾರ್ಕ್ ಬಳಿಯ ವೇಲಂಗಣಿ ಎಜುಕೇಶನ್ ಸೊಸೈಟಿ ಸೇಂಟ್ ಆಂಥೋನಿ ಐಟಿಐ ಕಟ್ಟಡ, ಹೊಸೂರಿನ ಸರ್ಕಾರಿ ಆರ್ಟಿಸನ್ ತರಬೇತಿ ಸಂಸ್ಥೆ, ಹು-ಧಾ ಪಶ್ಚಿಮದ ಡಾ.ದ.ರಾ. ಬೇಂದ್ರೆ ಭವನ, ಮಹಿಳಾ ಟ್ರೇನಿಂಗ್ ಕಾಲೇಜಿನ ಸರ್ಕಾರಿ ಪ್ರಾಥಮಿಕ ಶಾಲೆ, ಕಲಘಟಗಿಯ ಪಟ್ಟಣ ಪಂಚಾಯ್ತಿ, ಅಳ್ನಾವರ ಪಟ್ಟಣ ಪಂಚಾಯ್ತಿ ಹಾಗೂ ಶಿಗ್ಗಾಂವಿಯ ಪುರಸಭೆ ಸಭಾಭವನ, ಬಂಕಾಪುರ ಸರ್ಕಾರಿ ಪ್ರೌಢಶಾಲೆ ಮತಟಗಟ್ಟೆಗಳು ಸಖಿ ಬೂತ್​ಗಳಾಗಿ ಕಾರ್ಯ ನಿರ್ವಹಿಸಲಿವೆ ಎಂದರು. ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಕೊಠಡಿಗೆ ಸೂಕ್ತ ಭದ್ರತೆ: ಮತದಾನ ನಂತರದಲ್ಲಿ ಕೃಷಿ ವಿವಿಯಲ್ಲಿ ಜಿಲ್ಲಾ ಭದ್ರತಾ ಕೊಠಡಿಯಲ್ಲಿ ಸಂಗ್ರಹಿಸಿ ಇಡುವ ಮತಯಂತ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡಲಾಗುವುದು. ಒಟ್ಟು ಮೂರು ಹಂತಗಳಲ್ಲಿ ಕೊಠಡಿಗೆ ಭದ್ರತೆ ನೀಡಲಾಗಿದೆ. ರಾಜ್ಯ ಪೊಲೀಸರು ಹಾಗೂ ಸಿಆರ್​ಪಿಎಫ್ ಪೊಲೀಸರು ಭದ್ರತೆ ನೀಡಲಿದ್ದಾರೆ. ಕೊಠಡಿ ಭದ್ರತೆ ವೀಕ್ಷಣೆಗೆ ಪಕ್ಷದ ಏಜೆಂಟರಿಗೆ ಸಹ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಚೋಳನ್ ತಿಳಿಸಿದರು.

ಏ. 24ರವರೆಗೆ ಡ್ರೖೆ ಡೇ: ಚುನಾವಣೆಯ ಹಿನ್ನೆಲೆಯಲ್ಲಿ ಏ. 21ರ ಸಂಜೆ 6 ರಿಂದ ಏ. 23ರ ಮಧ್ಯರಾತ್ರಿ 12ರ ವರೆಗೆ ಹಾಗೂ ಮತ ಏಣಿಕೆಯ ಮೇ 22ರ ಮಧ್ಯರಾತ್ರಿ 12 ರಿಂದ ಮೇ 23ರ ಮಧ್ಯಾಹ್ನ 12ರ ವರೆಗೆ ಶುಷ್ಕ ದಿನ ಎಂದು ಘೊಷಿಸಿದ್ದು, ಮದ್ಯದ ಅಗಂಡಿ, ಬಾರ್​ಗಳು ಬಂದ್ ಮಾಡಲು ಆದೇಶಿಸಲಾಗಿದೆ. ಏ. 21ರ ಸಂಜೆ 6 ರಿಂದ ಏ. 24ರ ಸಂಜೆ 6ರ ವರೆಗೆ ನಿಷೇಧಾಜ್ಞೆ ಸಹ ಹೊರಡಿಸಲಾಗಿದೆ. ಈ 48 ಗಂಟೆಗಳ ಅವಧಿಯಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತೀವ್ರ ನಿಗಾ ವಹಿಸಲಾಗುವುದು ಹಾಗೂ ನೀತಿ ಸಂಹಿತೆ ತಂಡಗಳು ಕ್ಷೇತ್ರದಲ್ಲಿ ಸಂಚಾರ ನಡೆಸಲಿವೆ ಎಂದು ಚೋಳನ್ ತಿಳಿಸಿದರು.

1.23 ಕೋಟಿ ರೂ. ಮೌಲ್ಯದ ವಸ್ತು ವಶಕ್ಕ: ಮಾ. 3 ರಿಂದ ಏ. 20ರ ವರೆಗೆ 46.28 ಲಕ್ಷ ರೂ. ನಗದು, 4,202 ಲೀಟರ್ ಮದ್ಯ, 1.170 ಕೆಜಿ ಗಾಂಜಾ, 28 ದ್ವಿಚಕ್ರ ವಾಹನಗಳು, 3 ಮೊಬೈಲ್​ಗಳು, 2 ಕ್ಯಾಂಟರ್, 46 ಸೀರೆ, 78 ಧೋತಿ, 28 ಶಾಲು, 100 ನಾಮಫಲಕ, 2220 ಗ್ಯಾಸ್ ಸ್ಟೌ, 18 ನಾಲ್ಕು ಚಕ್ರ ವಾಹನ, 2 ಆಟೋ, 101 ಧ್ವಜ, 550 ಬಿಜೆಪಿ ಕರಪತ್ರ, 12 ಎಲ್​ಇಡಿ ಡಿಸ್ಪೆ್ಲ, 4 ಸೌಂಡ್ ಬಾಕ್ಸ್, 11 ಜನರೇಟರ್, 6 ಎಂಪ್ಲಿಫೈಯರ್, 2 ಕಂಟ್ರೋಲರ್ ಬಾಕ್ಸ್, 1 ಸೈಕಲ್, 813 ಫ್ಯಾನ್ ವಶಪಡಿಸಿಕೊಳ್ಳಲಾಗಿದೆ. ಒಟ್ಟು 1.23 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 46.28 ಲಕ್ಷ ರೂ. ನಗದು ಪೈಕಿ 4.32 ಲಕ್ಷ ಮೊತ್ತವನ್ನು ಅಗತ್ಯ ದಾಖಲೆ ಪಡೆದು ಮಾಲೀಕರಿಗೆ ನೀಡಲಾಗಿದೆ.

ಮೂವರಿಗೆ ನೋಟಿಸ್: ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿ ತನ್ನ ಬಗ್ಗೆ ಅಫಿಡವಿಟ್​ನಲ್ಲಿ ಕ್ರಿಮಿನಲ್ ಪ್ರಕರಣ ಇರುವುದಾಗಿ ಘೊಷಿಸಿದ್ದಲ್ಲಿ ಮತದಾನದ ಎರಡು ದಿನದ ಪೂರ್ವದಲ್ಲಿ ಮೂರು ಬಾರಿ ಪತ್ರಿಕೆ ಹಾಗೂ ಟವಿಗಳಲ್ಲಿ ಪ್ರಕರಣ ಕುರಿತು ಪ್ರಕಟಿಸಬೇಕು. ವಾದಿರಾಜ್ ಮನ್ನಾರಿ, ರಾಜು ಅನಂತಸಾ ನಾಯಕವಾಡಿ ಹಾಗೂ ದುಂಡಸಿ ಅಬ್ದುಲ್ ರಹಿಮಾನ ಅವರು ಪ್ರಕಟಿಸದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ ಎಂದು ದೀಪಾ ಚೋಳನ್ ತಿಳಿಸಿದರು.

Stay connected

278,730FansLike
580FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...