ಮತದಾನಕ್ಕೆ ಅಗತ್ಯ ಸೌಲಭ್ಯ ಒದಗಿಸಿ

ಹಿರೇಕೆರೂರ: ಏ. 23ರಂದು ಜರುಗುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣೆ ಸಾಮಾನ್ಯ ವೀಕ್ಷಕ ಡಾ. ಅಖ್ತರ್ ರಿಯಾಜ್ ಅವರು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಶುಕ್ರವಾರ ಹಿರೇಕೆರೂರು, ರಟ್ಟಿಹಳ್ಳಿ ತಾಲೂಕಿನ ವಿವಿಧ ಮತಗಟ್ಟೆಗಳನ್ನು ಪರಿಶೀಲಿಸಿದರು.

ನಂತರ ಮಾತನಾಡಿದ ಅವರು, ಮತಗಟ್ಟೆಗೆ ಬರುವ ಮತದಾರರಿಗೆ ಗೊಂದಲ ಉಂಟಾಗದ ರೀತಿಯಲ್ಲಿ ವಾತಾವರಣ ನಿರ್ವಿುಸಬೇಕು. ಪ್ರತಿ ಮತಗಟ್ಟೆಯಲ್ಲಿ ಮೂಲ ಸೌಲಭ್ಯ ಒದಗಿಸಬೇಕು ಎಂದರು.

ತಾಪಂ ಮಾದರಿ ಮತಗಟ್ಟೆ, ಪಪಂ, ದೂದೀಹಳ್ಳಿ ಸಖಿ ಮತಗಟ್ಟೆಗಳನ್ನು ಪರಿಶೀಲಿಸಿದ ಅವರು, ಮಾದರಿ ಮತಗಟ್ಟೆಯಲ್ಲಿ ಮಹಿಳೆಯರು, ಮಕ್ಕಳಿಗೆ ವಿಶ್ರಾಂತಿ ಗೃಹ, ಮಕ್ಕಳಿಗೆ ಆಟಿಕೆ ಸಾಮಗ್ರಿ, ಮನರಂಜನೆಗೆ ಟಿವಿ ಇತ್ಯಾದಿ ಸೌಲಭ್ಯ ಒದಗಿಸಬೇಕು. ಸಖಿ ಮತಗಟ್ಟೆಯಲ್ಲಿ ಮಹಿಳೆಯರಿಗೆ ಮುಕ್ತ ಮತದಾನಕ್ಕೆ ಪ್ರೇರಣೆ ನೀಡಬೇಕು. ಅಂಗವಿಕಲರಿಗೆ ವೀಲ್ ಚೇರ್ ಒದಗಿಸಬೇಕು. ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ ಚುನಾವಣೆ ಆಯೋಗದ ಮಾರ್ಗಸೂಚಿಯಂತೆ ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಸಹಾಯಕ ಚುನಾವಣಾಧಿಕಾರಿ ವಿನೋದಕುಮಾರ ಹೆಗ್ಗಳಗಿ, ತಹಸೀಲ್ದಾರ್ ಆರ್.ಎಚ್. ಭಾಗವಾನ್, ತಾಪಂ ಇಒ ಸಂತೋಷಕುಮಾರ ತಳಕಲ್ಲ, ಸೆಕ್ಟರ್ ಅಧಿಕಾರಿಗಳಾದ ಎಸ್.ಪಿ. ಗೌಡರ, ಎನ್. ಸುರೇಶಕುಮಾರ, ಬಿ.ಜೆ. ವಿಜಯಕುಮಾರ, ರಂಗನಾಥ ಸಿ.ಎನ್., ಪಿ.ಬಿ. ನಿಂಗನಗೌಡರ, ಕೆ.ಸಿ. ಯತ್ತಿನಮನಿ, ಇತರರಿದ್ದರು.

Leave a Reply

Your email address will not be published. Required fields are marked *