ಮತಗಟ್ಟೆಗೆ ಕಾರ್ಯಕರ್ತನ ಅಕ್ರಮ ಪ್ರವೇಶ

ಧಾರವಾಡ: ಮತದಾರ ಅಲ್ಲದಿದ್ದರೂ ಮತಗಟ್ಟೆಗೆ ನುಗ್ಗಿದ್ದ ಪಕ್ಷವೊಂದರ ಕಾರ್ಯಕರ್ತ, ಜಿ.ಪಂ. ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಬಿ.ಸಿ. ಸತೀಶ ಅವರೊಂದಿಗೆ ವಾಗ್ವಾದ ನಡೆಸಿದ ಘಟನೆ ನಗರದಲ್ಲಿ ನಡೆಯಿತು.

ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ತೆರೆಯಲಾಗಿದ್ದ ಸಖಿ ಮತಗಟ್ಟೆಗೆ ಕೇಸರಿ ಶಾಲು ಹಾಕಿಕೊಂಡು ಅಂಗಿಯ ಜೇಬಿಗೆ ರಾಜಕೀಯ ಪಕ್ಷದ ಚಿಹ್ನೆ ಧರಿಸಿಕೊಂಡು ಬಂದಿದ್ದ. ಮತಗಟ್ಟೆಗೆ ಭೇಟಿ ನೀಡಿದ್ದ ಡಾ. ಸತೀಶ ಅವರು ಅದನ್ನು ಗಮನಿಸಿ ಹೊರಹೋಗಲು ತಿಳಿಸಿದರು. ತನ್ನ ಮತ ಪೊಲೀಸ್ ಹೆಡ್​ಕ್ವಾರ್ಟರ್ಸ್ ಮತಗಟ್ಟೆಯಲ್ಲಿದೆ ಎಂದು ತಿಳಿಸಿದ ವ್ಯಕ್ತಿ, ಡಾ. ಸತೀಶ ಅವರೊಂದಿಗೆ ವಾಗ್ವಾದಕ್ಕಿಳಿದ. ಇದನ್ನು ಗಮನಿಸಿದ ಪೊಲೀಸರು ಮಧ್ಯಪ್ರವೇಶಿಸಿ ವ್ಯಕ್ತಿಯನ್ನು ಹೊರಗೆ ಕರೆದೊಯ್ದರು.