ಬೆಳಗಾವಿ: ಹಸಿರು, ಜಲ ಮತ್ತು ಮಣ್ಣು ಸಂರಕ್ಷಣೆಯೇ ಜಲ ಸಂಜೀವಿನಿಯ ಮುಖ್ಯ ಉದ್ದೇಶ. ಭೌಗೋಳಿಕ ಮಾಹಿತಿಯನ್ನಾಧರಿಸಿ ಯೋಜನೆಯನ್ನು ವೈಜ್ಞಾನಿಕವಾಗಿ ತಯಾರಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಿದೆ ಎಂದು ಬೈಲಹೊಂಗಲ ತಾಪಂ ಇಒ ಸುಭಾಷ ಸಂಪಗಾವಿ ತಿಳಿಸಿದರು.
ಬೈಲಹೊಂಗಲ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2023-24ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಜಿಯೋ-ಸ್ಪೆಶಲ್ ತಂತ್ರಜ್ಞಾನ ಬಳಸಿಕೊಂಡು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳ ಅನುಷ್ಠಾನದ ಪೂರ್ವಸಿದ್ಧತಾ ಕಾರ್ಯಕ್ರಮ, ಜಲ ಸಂಜೀವಿನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಗ್ರಾಪಂಗಳಲ್ಲಿ ಮುಂದಿನ ವರ್ಷದ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದರು.
ಸಹಾಯಕ ಅಭಿಯಂತ ಆರ್.ಪಿ.ಖಾನಾಪೂರೆ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಶೀಲಾ ಮುರಗೋಡ, ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ, ವಲಯ ಅರಣ್ಯಾಧಿಕಾರಿ ಸುರೇಶ ದೊಡ್ಡಬಸಣ್ಣವರ, ಪ್ರಾದೇಶಿಕ ಅರಣ್ಯ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ವಾಳದ, ವಿಜಯ ಪಾಟೀಲ, ಎಸ್.ವಿ.ಹಿರೇಮಠ ಇತರರಿದ್ದರು.