ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಗುಡ್ಡ ಕುಸಿತ

ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ

ಮಣ್ಣು ತೆರವುಗೊಳಿಸುವ ಕಾರ್ಯ ಆರಂಭ

ಮಡಿಕೇರಿ: ಮಡಿಕೇರಿ- ಮಂಗಳೂರು ಸಂಪರ್ಕ ರಸ್ತೆ ಮೇಲೆ ಸೋಮವಾರ ಮಣ್ಣಿನ ಗುಡ್ಡ ಕುಸಿದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಮದೆನಾಡು ಬಳಿ ಈ ಬೃಹತ್ ಭೂಕುಸಿತ ಉಂಟಾಗಿದ್ದು ಇದರಿಂದ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸುವ ಕಾರ್ಯಚರಣೆ ಬಿರುಸಿನಿಂದ ಸಾಗಿದೆ.
ಮಡಿಕೇರಿಯಿಂದ 1 ಕಿ.ಮೀ. ದೂರದಲ್ಲಿ ಭೂಕುಸಿತ ಉಂಟಾಗಿದ್ದರಿಂದ ರಸ್ತೆಯ ಎರಡು ಬದಿಯಲ್ಲೂ ವಾಹನಗಳು ಸಾಲುಗಟ್ಟಿ ನಿಂತಿವೆ. ಮಡಿಕೇರಿ ತಹಸೀಲ್ದಾರ್ ಕುಸುಮಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತ್ವರಿತಗತಿಯಲ್ಲಿ ಮಣ್ಣು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಹೆದ್ದಾರಿ ಮುಕ್ತಗೊಳಿಸುವ ಭರವಸೆ ನೀಡಿದರು

ಮುಕ್ಕೋಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಹಲವೆಡೆ ಮತ್ತೊಮ್ಮೆ ಭೂ ಕುಸಿತ ಉಂಟಾಗಿದೆ. ಹಮ್ಮಿಯಾಲ- ಹಟ್ಟಿಹೊಳೆ ಮಾರ್ಗದಲ್ಲಿ ಹಲವೆಡೆ ರಸ್ತೆ ಮೇಲೆ ಗುಡ್ಡ ಕುಸಿದಿದೆ. ಇದರಿಂದ ಈ ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಕೆಲವು ದಿನಗಳ ಹಿಂದೆಯೂ ಇಲ್ಲಿ ಗುಡ್ಡ ಕುಸಿತದಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು.

Leave a Reply

Your email address will not be published. Required fields are marked *