ಮಟಕಾ ಅಡ್ಡೆ ಮೇಲೆ ಪೊಲೀಸರ ದಾಳಿ:ಇಬ್ಬರ ಬಂಧನ
ವಿಜಯವಾಣಿ ಸುದ್ದಿಜಾಲ,ಬೆಳಗಾವಿ: ನಗರದ ಹಳೆ ಬಾಜಿ ಮಾರ್ಕೆಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ಮಟಕಾ ಚೀಟಿ ವ್ಯವಹಾರ ನಡೆಸುತ್ತಿದ್ದ ಅಡ್ಡೆಯ ಮೇಲೆ ಶುಕ್ರವಾರ ಮಾರ್ಕೆಟ್ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇಲ್ಲಿನ ಕಾಮತ ಗಲ್ಲಿಯ ನಿವಾಸಿ ಪಂಕಜ ಮೋಹನ ಜಾದವ(31),ಹಾಗು ಬಸವೇಶ್ವರ ನಗರದ ಮಲ್ಲೇಶ ಬಸವಣ್ಣಿಪ್ಪ ಮಾಳಗಿ( 60) ಬಂಧಿತ ಆರೋಪಿಗಳು.
ದಾಳಿ ವೇಳೆ 2370 ರೂ.ನಗದು ಹಣ ಹಾಗೂ ಮಟಕಾ ಸಂಖ್ಯೆ ಬರೆಯಲು ಬಳಸುತ್ತಿದ್ದ ಸಾಮಗ್ರಿಗಳನ್ನು ವಶ ಪಡೆಸಿಕೊಂಡಿದ್ದಾರೆ.
ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.