ಹಾಸನ: ಮೆದುಳು ಜ್ವರದಿಂದ ನರಳುತ್ತಿರುವ ಮಗಳಿಗೆ ಚಿಕಿತ್ಸೆಗೆ ಸಹಾಯಹಸ್ತ ನೀಡುವಂತೆ ತಾಯಿ ಪ್ರೇಮ ಅವರು ಮನವಿ ಮಾಡಿದರು.
ನಗರದ ವಲ್ಲಬಾಯಿ ರಸ್ತೆ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ನಮಗೆ 33 ವರ್ಷದ ಸಂಗೀತ ಎನ್ನುವ ಮಗಳಿಗೆ ಕಳೆದ 8 ತಿಂಗಳ ಮಗು ಇರುವಾಗಲೇ ಮೆದುಳು ಜ್ವರದಿಮದ ನರಳುತ್ತಿದ್ದಳು. 20 ವರ್ಷಗಳ ಕಾಲ ಚಿಕಿತ್ಸೆ ನೀಡಲಾಗಿದ್ದು, ಈಗ ಚಿಕಿತ್ಸೆಗೆ ಹಣದ ಅವಶ್ಯಕತೆ ಇದ್ದು, ತನಗೆ ಉಳಿದುಕೊಳ್ಳಲು ಸ್ವಂತ ಮನೆಯೂ ಇಲ್ಲದ ಬಡ ಕುಟುಂಬ. ಕಳೆದ ಆರು ತಿಂಗಳಿನಿಂದಲೂ ಬಾಡಿಗೆ ಕಟ್ಟಿರುವುದಿಲ್ಲ. ಮಗಳ ಹೆಚ್ಚಿನ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಅವಶ್ಯಕತೆ ಹೆಚ್ಚು ಇರುತ್ತದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮಗಳಿಗೆ ರಕ್ತವೂ ಕಡಿಮೆ ಇರುವ ಕಾರಣ ಮಲಗಿದಲ್ಲಿಯೆ ಊಟ ಉಪಚಾರ ಮಾಡುವ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೈಕಾಲು ಕೂಡ ಸ್ವಾಧೀನ ಕಳೆದುಕೊಂಡಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಈಗಾಗಲೇ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರು ಯಾವುದೇ ಪ್ರಯೋಜನ ಆಗಿಲ್ಲ, ನಮಗೆ ಎರಡು ಹೆಣ್ಣು ಮಕ್ಕಳಲ್ಲಿ ಸಂಗೀತ ಎರಡನೇ ಮಗಳು, ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿರುವ ತಾನು ಸಾಲ ಮಾಡಿದ್ದೇವೆ. ಮೆದುಳು ಜ್ವರದಿಂದ ನರಳುತ್ತಿರುವ ಸಂಗೀತಗೆ ಆರ್ಥಿಕ ಸಹಾಯ ಮಾಡುವವರು ತಾಯಿ ಪ್ರೇಮ ಹೆಸರಿನಲ್ಲಿರುವ ಬ್ಯಾಂಕ್ ಖಾತೆ ಸಂಖ್ಯೆ 2501108009532, ಐ.ಎಫ್.ಎಸ್.ಸಿ. ಕೋಡ್: ಸಿಎನ್‌ಆರ್‌ಬಿ0002501 , ಬ್ರಾಂಚ್ ಬಿ.ಎಂ. ರಸ್ತೆ ಹಾಸನ ಕೆನರಾ ಬ್ಯಾಂಕ್ ಇಲ್ಲಿಗೆ ಜಮೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರೇಮ ಅವರ ಮೊಬೈಲ್ ಸಂಖ್ಯೆ: 9632998892 ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.