ಮಗಳಿಂದ ಬದಲಾದೆ ಎಂದ ಧೋನಿ

ಮುಂಬೈ: ವ್ಯಕ್ತಿಯಾಗಿ ಮಗಳಿಂದ ಸಾಕಷ್ಟು ಕಲಿತಿರುವೆ. ನನಗೆ ಗೊತ್ತಿಲ್ಲದಂತೆ ಬದಲಾಗುತ್ತಿದ್ದೇನೆ ಎನಿಸುತ್ತಿದೆ ಎಂದು ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ, ಮಗಳು ಝಿವಾ ಕುರಿತು ಹೇಳಿಕೊಂಡಿದ್ದಾರೆ. ಹೆಣ್ಣುಮಕ್ಕಳು ಸಹಜವಾಗಿ ತಂದೆಗೆ ತುಂಬ ಹತ್ತಿರವಾಗುತ್ತಾರೆ. ಮಗಳಿಂದ ನಾನಂತೂ ಬದಲಾಗುತ್ತಿದ್ದೇನೆ. ಅದು ವ್ಯಕ್ತಿಯಾಗಿಯೋ ಅಥವಾ ಕ್ರಿಕೆಟಿಗನಾಗಿಯೋ ಗೊತ್ತಿಲ್ಲ ಎಂದಿದ್ದಾರೆ. ‘ಮನೆಯಲ್ಲಿ ಊಟ ಮಾಡದೆ ಕುಳಿತು, ಪಪ್ಪಾ ಬಂದು ಊಟ ಮಾಡಿಸಲಿ’ ಎನ್ನುತ್ತಾಳೆ. ತಪು್ಪ ಮಾಡಿದಾಗ ಪಪ್ಪಾ ಬರುತ್ತಾರೆ, ಈ ರೀತಿ ಮಾಡಬೇಡ ಎಂದು ಹೇಳುತಿದ್ದಳು. ಕಳೆದ ಐಪಿಎಲ್ ವೇಳೆ ಬಹುತೇಕ ಸಮಯವನ್ನು ಅವಳೊಂದಿಗೆ ಕಳೆದೆ, ಅದರಲ್ಲೂ ಗೆಲುವಿನ ಸಂಭ್ರಮದ ವೇಳೆ ಅವಳಿರುತ್ತಿದ್ದಳು ಎಂದು 37 ವರ್ಷದ ಧೋನಿ ಹೇಳಿದ್ದಾರೆ.

Leave a Reply

Your email address will not be published. Required fields are marked *