ಮಕ್ಕಳ ಸಾವಿಗೆ ಸರ್ಕಾರಗಳೇ ಕಾರಣ

ಕಲಬುರಗಿ: ಕೇಂದ್ರ ಮತ್ತು ಬಿಹಾರ ರಾಜ್ಯ ಸರ್ಕಾರಗಳ ದಿವ್ಯ ನಿರ್ಲಕ್ಷ್ಯದಿಂದ 150ಕ್ಕೂ ಹೆಚ್ಚು ಮಕ್ಕಳು ತೀವ್ರವಾದ ಮೆದುಳಿನ ಉರಿಯೂತ ಕಾಯಿಲೆಯಿಂದ ಅಸುನೀಗಿವೆ ಎಂದು ಎಸ್​ಸಿಯುಐ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ ದೂರಿದರು.
ಸಂಘಟನೆಯು ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಮಾತನಾಡಿದ ಅವರು, ಬಿಹಾರದಲ್ಲಿ ಇದುವರೆಗೆ ಇಂತಹ 600ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ ಎಂಬುದು ಗಾಬರಿ ಹುಟ್ಟಿಸುವಂತಹ ವಿಷಯ. ಸರಣಿ ಸಾವಿಗೆ ಈ ಮಕ್ಕಳು ಲಿಚಿ ಹಣ್ಣು ತಿಂದಿದ್ದೇ ಕಾರಣ ಎಂದು ಹೇಳಿ ದಿಕ್ಕುತಪ್ಪಿಸಲಾಗುತ್ತಿದೆ. ಸಕರ್ಾರಿ ಆಡಳಿತ ವ್ಯವಸ್ಥೆ ಚುನಾವಣಾ ತಯಾರಿಯಲ್ಲಿ ಮುಳುಗಿ ಈ ಕಾಯಿಲೆ ಎದುರಿಸುವಲ್ಲಿ ಎಡವಿದ್ದೇ ಇದಕ್ಕೆ ಕಾರಣ ಎಂಬ ಮಾತು ಕೇಳಿಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಕ್ಕಳ ಸಾವು ಅತ್ಯಂತ ಹೃದಯವಿದ್ರಾವಕ ಸಂಗತಿ ಆಗಿದ್ದು, ಯಾವ ಪರಿಹಾರವೂ ಪಾಲಕರ ದುಃಖ ಕಡಿಮೆ ಮಾಡಲು ಸಾಧ್ಯವಿಲ್ಲ. ಹಾಗಿದ್ದರೂ ಮುಂದಿನ ಬದುಕು ಕಟ್ಟಿಕೊಳ್ಳಲು ಮಕ್ಕಳನ್ನು ಕಳೆದುಕೊಂಡ ಪಾಲಕರಿಗೆ ಕನಿಷ್ಠ 10 ಲಕ್ಷ ರೂ. ಪರಿಹಾರ ನೀಡಬೇಕು. ರೋಗ ನಿಯಂತ್ರಣಕ್ಕೆ ತುತರ್ು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘಟನೆ ಜಿಲ್ಲಾ ಸದಸ್ಯ ಮಹೇಶ ಎಸ್.ಬಿ., ಎಸ್.ಎಂ. ಶರ್ಮಾ, ವಿ.ಜಿ. ದೇಸಾಯಿ, ಗಣಪತರಾವ ಮಾನೆ, ಸೀಮಾ ದೇಶಪಾಂಡೆ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *