ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರೋತ್ಸಾಹಿಸಿ

ಕೊಡೇಕಲ್: ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ, ಅವರ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರು ಕೈ ಜೋಡಿಸಬೇಕು ಎಂದು ಹುಣಸಗಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ನೌಕರರ ಸಂಘದ ಅಧ್ಯಕ್ಷ ಕೊಟ್ರೇಶ ಕೋಳೂರ ಹೇಳಿದರು.

ಬರದೇವನಾಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡ ಕೊಡೇಕಲ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಭಾ ಕಾರಂಜಿಯAತಹ ಕಾರ್ಯಕ್ರಮಗಳು ಮಕ್ಕಳ ಬೆಳವಣಿಗೆಗೆ ಪೂರಕವಾಗಿವೆ ಎಂದರು.

ಗ್ರಾಮೀಣ ಭಾಗದ ಶಾಲೆಗಳಲ್ಲಿ ಅಧ್ಯಯನ ಮಾಡುವ ಮಕ್ಕಳಲ್ಲಿ ಹಲವು ರೀತಿಯ ಪ್ರತಿಭೆಗಳಿದ್ದು ಅವರನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಸಮಾಜಕ್ಕೆ ಉತ್ತಮ ಕಲಾ ಪ್ರತಿಭೆಗಳನ್ನು ಕೊಡುಗೆ ನೀಡಲು ಸಹಕಾರಿಯಾಗುತ್ತದೆ. ಮಕ್ಕಳಲ್ಲಿರುವ ಪ್ರತಿಭೆ ಆರಂಭದಲ್ಲಿಯೇ ಗುರುತಿಸಿ ಬೆನ್ನು ತಟ್ಟುವ ಕರ‍್ಯ ಶಿಕ್ಷಕರಿಂದಾಗಬೇಕು. ಮಕ್ಕಳು ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸಲು ಈ ವೇದಿಕೆ ಸೂಕ್ತವಾಗಿದೆ ಎಂದರು.

ಸAಪನ್ಮೂಲ ವ್ಯಕ್ತಿ ಮಹಾಂತೇಶ ರೂಪನ್ನವರ ಪ್ರಾಸ್ತಾವಿಕವಾಗಿ ಮಾತನಾಡಿ, ಕಲೋತ್ಸವದಲ್ಲಿ ಕಲೆ ಪ್ರದರ್ಶನಕ್ಕೆ ಒಳ್ಳೆಯ ಅವಕಾಶವಿದ್ದು, ನಮ್ಮ ನಾಡಿನ ಸಂಸ್ಕೃತಿ ಬಿಂಬಿಸುವ ಸ್ಪರ್ಧೆಯಾಗಿರುವ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಪಠ್ಯದ ಜತೆಗೆ ಮಕ್ಕಳಿಗೆ ಇದು ಅಗತ್ಯವಾಗಿದೆ ಎಂದರು.
ಕಲ್ಯಾಣರಾವ ದೇಶಪಾಂಡೆ ನೇತೃತ್ವ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷೆ ರಾಧಾ ಹೂಗಾರ ಅಧ್ಯಕ್ಷತೆ ವಹಿಸಿದ್ದರು. ಗೋಪಾಲಗೌಡ ಪೊಲೀಸ್ ಪಾಟೀಲ್, ರಾಜಶೇಖರಗೌಡ ಮಾಲಿ ಪಾಟೀಲ್, ನಿಂಗಣ್ಣ ಮಾಲಿಗೌಡ್ರ, ಬಸಲಿಂಗಯ್ಯ ಹಿರೇಮಠ, ಈರಯ್ಯ ಹಿರೇಮಠ, ಮುದಿಗೌಡಪ್ಪ, ಭೀಮಣ್ಣ ಹೂಗಾರ, ಹಣಮಂತ್ರಾಯ ಮೇಟಿ, ಹನುಮನಗೌಡ ಮಾಲಿ ಪಾಟೀಲ್, ರಾಮಚಂದ್ರ ಪಾಟೀಲ್, ಓಂಪ್ರಕಾಶ, ಬಿಆರ್‌ಸಿ ಮಹ್ಮದ್‌ರಫಿಕ್ ಮಳ್ಳಿಕರ, ಆನಂದಕುಮಾರ ಕಟ್ಟಿಮನಿ, ಹಾಜಿಮಲಂಗ ಬಿಜಲಿ, ಸಿಆರ್‌ಪಿ ಮಹಾಂತೇಶ ಇತರರಿದ್ದರು. ಮುಖ್ಯಗುರು ಮುತ್ತಣ್ಣ ಆಶ್ಯಾಳ ಸ್ವಾಗತಿಸಿದರು. ಎಸ್.ಎಸ್.ಮಾರನಾಳ ನಿರೂಪಣೆ ಮಾಡಿದರು. ಭೀಮನಗೌಡ ಬಿರಾದಾರ ವಂದಿಸಿದರು. ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕರ‍್ಯಕ್ರಮ ಜರುಗಿದವು.

Share This Article

World Arthritis Day: ಸಂಧಿವಾತ ಕಾಯಿಲೆಗೆ ಚಿಕಿತ್ಸೆಯೇ ಮದ್ದು! ತಜ್ಞವೈದ್ಯೆ ಡಾ. ಅರ್ಚನಾ ಎಂ. ಉಪ್ಪಿನ ಅಭಿಮತ

ಪ್ರಸ್ತುತ ದಿನಗಳಲ್ಲಿ ಬಿಪಿ-ಶುಗರ್ ಸಮಸ್ಯೆಯಂತೆ ಅರ್ಥರೈಟಿಸ್ ( Arthritis ) , ರುಮಾಟಾಲಜಿ (ಸಂಧಿವಾತ/ ಕೀಲುವಾಯು)…

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತಿದ್ಯಾ? ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…