ಮಕ್ಕಳ ಪ್ರತಿಭೆಗೆ ವೇದಿಕೆ ಒದಗಿಸಿ

ಜೇವರ್ಗಿ: ಬಾಲ ಪ್ರತಿಭೆಗಳಿಗೆ ಮುಕ್ತ ಅವಕಾಶ ನೀಡುವ ಉದ್ದೇಶದಿಂದ ಮಕ್ಕಳ ಸಮಾವೇಶ ನಡೆಸುತ್ತಿರುವುದು ಶ್ಲಾಘನೀಯ ಎಂದು ಸೊನ್ನ ವಿರಕ್ತಮಠದ ಪೀಠಾದಿಪತಿ ಡಾ.ಶಿವಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬಸವ ಜಯಂತಿ ನಿಮಿತ್ತ ಬಸವ ಕೇಂದ್ರ ತಾಲೂಕು ಘಟಕದಿಂದ ಶನಿವಾರ ಆಯೋಜಿಸಿದ್ದ ಮಕ್ಕಳ ಸಮಾವೇಶದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಹಾಕಲು ಬಸವ ಕೇಂದ್ರ ಮಕ್ಕಳ ಸಮಾವೇಶದ ಮೂಲಕ ವೇದಿಕೆ ಕಲ್ಪಿಸಿ, ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿದರು. ಸ್ವಾಮಿ ನರೇಂದ್ರ ಶಿಕ್ಷಣ ಸಂಸ್ಥೆಯ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿ ಸುದೀಪ ವೆಂಕಟೇಶ ಹರವಾಳ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.96 ಅಂಕ ಪಡೆದಿದ್ದಕ್ಕೆ ಬಸವಂತರಾಯ ಕಲ್ಲಾ ಸ್ಮರಣಾರ್ಥ 5 ಸಾವಿರ ನಗದು ನೀಡಿ ಸನ್ಮಾನಿಸಲಾಯಿತು. 22 ದಾಸೋಹಿಗಳಿಗೆ ಗೌರವಿಸಲಾಯಿತು.
ಜಿಪಂ ಸದಸ್ಯೆ ದೇವೆಕ್ಕೆಮ್ಮ ಹಿರೇಮಠ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಸೋಮಣ್ಣ ನಡಕಟ್ಟಿ, ಬಸವ ಕೇಂದ್ರ ಗೌರವಾಧ್ಯಕ್ಷ ಶಿವಣ್ಣಗೌಡ ಪಾಟೀಲ್ ಹಂಗರಗಿ, ಬಸವ ಕೇಂದ್ರ ತಾಲೂಕು ಅಧ್ಯಕ್ಷ ಶರಣಬಸವ ಕಲ್ಲಾ, ಚನ್ನಮಲ್ಲಯ್ಯ ಹಿರೇಮಠ, ನಾಗಣ್ಣಗೌಡ ಪಾಟೀಲ್ ಜೈನಾಪುರ, ಸಿದ್ದು ಯಂಕಂಚಿ, ಮಲ್ಲಣ್ಣ ನಾಗರಾಳ, ಷಣ್ಮುಖಪ್ಪ ಹಿರೇಗೌಡ, ಚಂದ್ರಶೇಖರ ತುಂಬಗಿ, ಸಂಗಣ್ಣಗೌಡ ಗೊಳ್ಯಾಳ, ಶಿವಕುಮಾರ ಕಲ್ಲಾ, ನೀಲಕಂಠ ಅವಂಟಿ, ನಿಂಗಣ್ಣ ಹಳಿಮನಿ, ಸುರೇಶ ಹಳ್ಳಿ ಇತರರಿದ್ದರು.
ಬಸವ ಕೇಂದ್ರದ ತಾಲೂಕು ಅಧ್ಯಕ್ಷ ಶರಣಬಸವ ಕಲ್ಲಾ ಪ್ರಾಸ್ತಾವಿಕ ಮಾತನಾಡಿದರು. ಲಕ್ಷ್ಮೀ ಉಡಚಣ ಪ್ರಾರ್ಥಿಸಿದರು. ಶಿವಣ್ಣಗೌಡ ಪಾಟೀಲ್ ಹಂಗರಗಿ ಸ್ವಾಗತಿಸಿದರು. ಸದಾನಂದ ಪಾಟೀಲ್ ನಿರೂಪಣೆ ಮಾಡಿದರು.