ಚಿತ್ರದುರ್ಗ: ಮಕ್ಕಳ ಪದ್ಯಗಳಲ್ಲಿ ಸಂಗೀತ, ವಿನೋದ, ಸಂದೇಶ ಮತ್ತು ಸಂಸ್ಕಾರದ ಗುಣಗಳಿರಬೇಕು ಎಂದು ಇತಿಹಾಸ ಸಂಶೋಧಕ ಡಾ.ಬಿ. ರಾಜಶೇ ಖರಪ್ಪ ಹೇಳಿದರು.
ಜಿಲ್ಲಾ ಕಸಾಪ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ನಗರದ ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಕಿ ಕೆ. ನಿರ್ಮಲ ಮರಡಿಹಳ್ಳಿ ಅವರ ‘ಬೆಳ್ಳಕ್ಕಿ ಸಾಲು’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ನಿರಂತರ ಪುಸ್ತಕಗಳು ಬಿಡುಗಡೆಯಾಗುತ್ತಿರುವುದು ಉತ್ತಮ ಬೆಳವಣಿಗೆ. ನಿರ್ಮಲ ಅವರು ಮಕ್ಕಳಿಗೆ ತಲುಪುವಂತೆ ಉತ್ತಮ ಕವನಗಳನ್ನು ರಚಿಸಿದ್ದಾರೆ. ಮಕ್ಕಳ ಪದ್ಯಗಳಿಗೆ ಸುದೀರ್ಘ ಇತಿಹಾಸವಿದೆ ಎಂದರು.
ಬಾಪೂಜಿ ಸಂಸ್ಥೆ ಕಾರ್ಯದರ್ಶಿ ಕೆ.ಎಂ. ವೀರೇಶ್ ಮಾತನಾಡಿ, ತಮ್ಮ ಸಂಸ್ಥೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸದಾ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಕನ್ನಡದಲ್ಲಿ ಸ್ಪಷ್ಟವಾಗಿ ಓದುವ, ಬರೆಯುವ ಮತ್ತು ಮಾತನಾಡುವ ಕೌಶಲ ರೂಢಿಸಿಕೊಳ್ಳಬೇಕು ಎಂದರು.
ಇಒ ಎಸ್. ನಾಗಭೂಷಣ್, ಸಾಹಿತಿಗಳಾದ ಜಿ.ಎಸ್. ಉಜ್ಜಿನಪ್ಪ, ನಿರ್ಮಲ ಮರಡಿಹಳ್ಳಿ ಮಾತನಾಡಿದರು. ಮಕ್ಕಳ ಸಾಹಿತಿ ಪರಮೇಶ್ವರಪ್ಪ ಕುದುರಿ, ಬಿ.ಇಡಿ. ಕಾಲೇಜು ಪ್ರಾಚಾರ್ಯ ಜಯಲಕ್ಷ್ಮೀ ವಿ. ಶ್ರೀನಿವಾಸ ಮಳಲಿ, ಚೌಳೂರು ಲೋಕೇಶ, ಕೆ.ಜಿ. ಅಜಯ್‌ಕುಮಾರ್, ಕೆಪಿಎಂ ಗಣೇಶಯ್ಯ, ಚಂದ್ರಿಕಾ, ರೀನಾವೀರಭದ್ರಪ್ಪ ಇತರರು ಇದ್ದರು.
ಮಕ್ಕಳ ಪದ್ಯಗಳಲ್ಲಿ ಸಂಸ್ಕಾರವಿರಬೇಕು

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar
Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…
ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits
Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…