ಮಕ್ಕಳ ನಾಯಕತ್ವ ಶಿಬಿರ ಸಮಾರೋಪ

blank

ಗೋಣಿಕೊಪ್ಪಲು: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾರತ ಸೇವಾದಳದಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಮಕ್ಕಳ ನಾಯಕತ್ವ ಶಿಬಿರ ಸಮಾರೋಪಗೊಂಡಿತು.

ತಾಲೂಕಿನ 13 ಶಾಲೆಗಳಿಂದ 86 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. 3 ದಿನಗಳ ಕಾಲ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಧ್ವಜಾರೋಹಣ, ಧ್ವಜ ಅವರೋಹಣ, ಡಂಬಲ್ಸ್, ಪಥ ಕವಾಯತು, ಯೋಗಾಸನ, ರೋಬಿಕ್ ವ್ಯಾಯಾಮ, ಸರ್ವಧರ್ಮ ಪ್ರಾರ್ಥನೆ ಕುರಿತು ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಲಾಯಿತು.

ದೈಹಿಕವಾಗಿ ಬಲಾಢ್ಯನಾಗಿಯೂ, ಮಾನಸಿಕವಾಗಿ ಜಾಗೃತನಾಗಿಯೂ ಮತ್ತು ನೀತಿವಂತನಾಗಿಯೂ ಇರಬೇಕಾದುದು ಸ್ವಯಂ ಸೇವಕನಾದ ನನ್ನ ಕರ್ತವ್ಯ. ಭಾರತ ಸೇವಾದಳ ನೀತಿ ಮತ್ತು ಆಜ್ಞೆಗನುಸಾರವಾಗಿ ಭಾರತ ಸೇವಾ ದಳದ ಮೂಲಕ ನನ್ನ ರಾಷ್ಟ್ರದ ಮತ್ತು ಜನರ ಸೇವೆಯನ್ನು ನನ್ನ ಶಕ್ತಿ ಮೀರಿ ಮಾಡುತ್ತೇನೆ ಎಂದು ಭಾರತ ಸೇವಾ ದಳದ ಸ್ವಯಂ ಸೇವಕನಾದ ನಾನು ಆತ್ಮ ಸಾಕ್ಷಿಗಾಗಿ ಪ್ರತಿಜ್ಞೆ ಮಾಡುತ್ತೇನೆ ಎಂದು ಶಿಬಿರದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳು, ಸ್ವಯಂ ಸೇವಕರು ಪ್ರತಿಜ್ಞೆ ಸ್ವೀಕರಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿರಾಜಪೇಟೆ ತಾಲೂಕು ಸೇವಾ ದಳದ ಅಧ್ಯಕ್ಷ ಅಜ್ಜಿಕುಟ್ಟಿರ ದೇವಯ್ಯ ವಹಿಸಿದ್ದರು. ಸೇವಾದಳದ ಕೇಂದ್ರ ಸಮಿತಿ ಸದಸ್ಯರಾದ ಪಾಲಾಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮೊಂತೀ ಗಣೇಶ್, ಗೋಣಿಕೊಪ್ಪ ಗ್ರಾಪಂ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಜಿಲ್ಲಾ ಸಮಿತಿ ಸದಸ್ಯರಾದ ಕರುಂಬಯ್ಯ, ಜಿಲ್ಲಾ ಸಂಘಟಕರಾದ ಗವಿಸಿದ್ದನಗೌಡ, ಎಸ್.ಪಾಟೀಲ್, ವಿರಾಜಪೇಟೆ ತಾಲೂಕು ಸಂಘಟಕರಾದ ಎಂ.ಎಸ್.ತಮ್ಮಯ್ಯ, ಜಿಲ್ಲಾ ಸಮಿತಿ ಸದಸ್ಯರಾದ ಪ್ರವೀಣ್, ಶಾಲಾ ಮುಖ್ಯಶಿಕ್ಷಕ ಎಚ್.ಕೆ.ಕುಮಾರ್ ಇತರರಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ರಂಗಸ್ವಾಮಿ, ಮೀರಾ ಅಶೋಕ್, ಆಲಿಮ, ಜಾಜಿ, ಡಿ.ವಿ.ಗಣೇಶ್, ಸುಜಾತ, ವಂಜಮ್ಮ, ಮಹೇಶ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಕೆ.ಆರ್. ಸುಬ್ಬಯ್ಯ, ಕಾಡ್ಯಮಾಡ ದೇವಯ್ಯ, ಸೇವಾದಳದ ವಿರಾಜಪೇಟೆ ತಾಲೂಕು ಸಮಿತಿ ಸದಸ್ಯೆ ಚೋಂದಮ್ಮ ಭಾಗವಹಿಸಿದ್ದರು.

ಶಾಲೆಯ ಮುಖ್ಯಶಿಕ್ಷಕ ಎಚ್.ಕೆ.ಕುಮಾರ್ ಹಾಗೂ ಭಾರತ ಸೇವಾ ದಳದ ಕೇಂದ್ರ ಸಮಿತಿ ಸದಸ್ಯರಾದ ಪಾಲಾಕ್ಷ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಶಾಲಾ ಶಿಕ್ಷಕರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

 

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…