ಮಕ್ಕಳ ಕಳೆದುಕೊಂಡ ತಾಯಿಗೆ ನೌಕರಿ

ಕೆಜಿಎಫ್: ಗಣೇಶನ ಮೂರ್ತಿ ವಿಸರ್ಜನೆಗೆ ತೆರಳಿ ಮಂಗಳವಾರ ದುರಂತ ಸಾವಿಗೀಡಾದ ಮರದಟ್ಟ ಗ್ರಾಮದ 6 ಮಕ್ಕಳ ಶವಸಂಸ್ಕಾರ ಬುಧವಾರ ನೆರವೇರಿತು.

ಮೃತಪಟ್ಟ ಪ್ರತಿ ಮಗುವಿಗೂ ಸಿಎಂ ಯಡಿಯೂರಪ್ಪ ತಲಾ 2 ಲಕ್ಷ ರೂ. ಪರಿಹಾರ ವಿತರಿಸುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದ ಹಿನ್ನೆಲೆ ಸಂಸದ ಮುನಿಸ್ವಾಮಿ, ಶಾಸಕಿ ಎಂ.ರೂಪಕಲಾ 2 ಲಕ್ಷ ರೂಪಾಯಿಯ ಚೆಕ್ ವಿತರಿಸಿದರು.

ಇಂತಹ ಟನೆ ಎಲ್ಲೂ ನಡೆಯಬಾರದು. ಸರ್ಕಾರ ಕುಟುಂಬಸ್ಥರ ಸಂಕಷ್ಟಕ್ಕೆ ಸ್ಪಂದಿಸಲಿದೆ. ಮಕ್ಕಳನ್ನು ಕಳೆದುಕೊಂಡ ತಾಯಿಗೆ ಅಂಗನವಾಡಿ ಕೇಂದ್ರದಲ್ಲಿ ನೌಕರಿ ನೀಡಲು ಜಿಲ್ಲಾ ಹಾಗೂ ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ ಎಂದು ಮುನಿಸ್ವಾಮಿ ತಿಳಿಸಿದರು. ಗ್ರಾಪಂ, ತಾಪಂಗಳು ಕೆರೆ-ಕುಂಟೆಗಳ ಬಳಿ ತಂತಿಬೇಲಿ ಹಾಕಿ ಸೂಕ್ತ ರಕ್ಷಣೆ ಕಲ್ಪಿಸಬೇಕು ಎಂದರು.

ನಿಮಗಾಗಿರುವ ನೋವನ್ನು ಕಡಿಮೆ ವಾಡಲು ಯಾರಿಂದಲೂ ಸಾಧ್ಯವಿಲ್ಲ. ಮಕ್ಕಳನ್ನು ಕಳೆದುಕೊಂಡು ಅನಾಥೆಯಾಗಿರುವ ತಾಯಿಗೆ ಅಂಗನವಾಡಿಯಲ್ಲಿ ನೌಕರಿ ಕೊಡಿಸಲಾಗುವುದು ಹಾಗೂ ನೊಂದ ಕುಟುಂಬಕ್ಕೆ ಮುಂದಿನ ದಿನಗಳಲ್ಲಿ ಆಗಬೇಕಿರುವ ಇತರ ಕೆಲಸ ಕಾರ‌್ಯಗಳನ್ನು ಮಾಡಿಕೊಡಲಾಗುವುದು ಎಂದು ಶಾಸಕಿ ರೂಪಕಲಾ ಹೇಳಿದರು. ವೈಯಕ್ತಿಕವಾಗಿ ಪ್ರತಿ ಕುಟುಂಬಕ್ಕೆ 1 ಲಕ್ಷ ರೂ. ನೀಡಿದರು. ವೈದ್ಯರ ನಿರ್ಲಕ್ಷ್ಯಕ್ಕೆ ಆಕ್ರೋಶ: ಮಕ್ಕಳನ್ನು ಕ್ಯಾಸಂಬಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ ವೈದ್ಯ ಸುನೀಲ್‌ಕುವಾರ್ ಹಾಗೂ ಆಸ್ಪತ್ರೆ ನರ್ಸಗಳು ಇರಲಿಲ್ಲ ಎಂದು ಸಾರ್ವಜನಿಕರು ಸಚಿವರಿಗೆ ದೂರು ನೀಡಿದ್ದರಿಂದ ತನಿಖೆ ನಡೆಸಲಾಗುವುದು ಎಂದು ನಾಗೇಶ್ ಭರವಸೆ ನೀಡಿದರು.

ಬಿಜೆಪಿ ಮುಖಂಡ ಮೋಹನ್‌ಕೃಷ್ಣ ಮಕ್ಕಳ ಕುಟುಂಬಕ್ಕೆ ಸಾಂತ್ವನ ಹೇಳಿ ತಲಾ 25 ಸಾವಿರ ರೂ. ವಿತರಿಸಿದರು.
ಸಚಿವ ನಾಗೇಶ್, ಸಂಸದ ಮುನಿಸ್ವಾಮಿ, ಶಾಸಕಿ ಎಂ.ರೂಪಕಲಾ, ವಾಜಿ ಶಾಸಕ ಎಂ.ನಾರಾಯಣಸ್ವಾಮಿ, ಬಿಜೆಪಿ ಮುಖಂಡ ಮೋಹನ್‌ಕೃಷ್ಣ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಕೆಜಿಎಫ್ ಎಸ್ಪಿ ಮೊಹಮದ್ ಸುಜೀತಾ, ಉಪವಿಭಾಗಧಿಕಾರಿ ಸೋಮಶೇಖರ್, ತಹಸೀಲ್ದಾರ್ ರಮೇಶ್, ಸವಾಜ ಕಲ್ಯಾಣ ಇಲಾಖೆ ಅಧಿಕಾರಿ ಶೌಕತ್, ಬಿಇಒ ಕೆಂಪಯ್ಯ, ತಾಪಂ ಇಒ ಮಂಜುನಾಥ್, ಮುಖ್ಯಶಿಕ್ಷಕಿ ರೀಟಾ ಪ್ರೇಮಕುವಾರಿ, ಎಐಸಿಸಿ ಸದಸ್ಯ ಎನ್.ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾರಾಯಣರೆಡ್ದಿ, ಡಿವೈಎಸ್‌ಪಿ ಶ್ರೀನಿವಾಸಮೂರ್ತಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ಸರ್ಕಾರದ ವತಿಯಿಂದ ನೊಂದ ಕುಟುಂಬಗಳಿಗೆ ನೆರವು ನೀಡಲಾಗಿದ್ದು, ಮಕ್ಕಳು ಕೆರೆಗಳ ಬಳಿ ತೆರಳದಂತೆ ಶಾಲೆಗಳಲ್ಲಿ ಅರಿವು ಮೂಡಿಸಬೇಕು.
ಎಚ್.ನಾಗೇಶ್, ಸಚಿವ

ಕುಡುಕನ ರಂಪಾಟ: ಸಚಿವ ನಾಗೇಶ್ ಮರದಟ್ಟ ಗ್ರಾಮಕ್ಕೆ ತೆರಳಿ ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಿ ಪಾರಂಡಹಳ್ಳಿ ವಾರ್ಗದಲ್ಲಿ ತೆರಳಿದ ಕೆಲ ಹೊತ್ತಿನಲ್ಲೇ ಕುಡುಕನೊಬ್ಬ ಪಾರಂಡಹಳ್ಳಿ ಕೆಜಿಎಫ್ ರಸ್ತೆ ಮಧ್ಯೆ ಎಣ್ಣೆ ಬಾಟಲಿ ಹಾಗೂ ಗ್ಲಾಸ್ ಹಿಡಿದುಕೊಂಡು ರಸ್ತೆಯಲ್ಲಿ ಬರುವವರನ್ನು ಟೀಕಿಸುತ್ತಿರುವುದು ಸಾವಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *