ಮಕ್ಕಳ ಅಭಿವೃದ್ಧಿಯೇ ಶಿಕ್ಷಕನ ಗುರಿ

ನರೇಗಲ್ಲ: ವಿದ್ಯಾರ್ಥಿಗಳು ಉತ್ತಮ ನಾಗರಿಕರಾದರೆ ಅದುವೇ ಶಿಕ್ಷಕರಿಗೆ ಹೆಚ್ಚಿನ ಸಂತೋಷ ನೀಡುತ್ತದೆ ಎಂದು ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ ಹೇಳಿದರು.

ಸ್ಥಳೀಯ ಶ್ರೀ ಅನ್ನದಾನೇಶ್ವರ ಮಹಾ ವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 1998ನೇ ಸಾಲಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಸ್ನೇಹಕೂಟದಲ್ಲಿ ಅವರು ಮಾತನಾಡಿದರು.

‘ಪ್ರತಿಯೊಬ್ಬ ಶಿಕ್ಷಕನಿಗೂ ತಮ್ಮ ಶಿಷ್ಯ ಬುದ್ಧಿವಂತನಾಗಬೇಕು ಎನ್ನುವ ಆಸೆ, ಕನಸು ಇರುತ್ತದೆ. ಅದಕ್ಕಾಗಿ ಮಕ್ಕಳು ತಪ್ಪು ಮಾಡಿದಾಗ ತಿದ್ದಿ ಸರಿ ಮಾರ್ಗಕ್ಕೆ ತರಲು ಸತತ ಪರಿಶ್ರಮ ಪಡುತ್ತಾನೆ. ಜಗತ್ತಿನ ಅತ್ಯಂತ ಶ್ರೇಷ್ಠ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿ ಅಗ್ರವಾಗಿದೆ. ಶಿಕ್ಷಕ ವೃತ್ತಿಯಲ್ಲಿನ ನೆಮ್ಮದಿ ಇನ್ನೆಲ್ಲೂ ಲಭಿಸಲು ಸಾಧ್ಯವಿಲ್ಲ. ಮಕ್ಕಳ ಸರ್ವತೋಮುಖ ಅಭಿವೃದ್ಧಿಯೇ ಶಿಕ್ಷಕನ ಗುರಿಯಾಗಿರುತ್ತದೆ. ಮಕ್ಕಳು ತಾವು ಕಲಿತ ಸ್ಥಳ, ಕಲಿಸಿದ ಗುರುಗಳನ್ನು ಸ್ಮರಿಸುವುದು ಬಹಳ ಮುಖ್ಯವಾಗಿದೆ’ ಎಂದರು.

ನಿವೃತ್ತ ಉಪನ್ಯಾಸಕ ಎಸ್.ವಿ. ಪಾಟೀಲ ಮಾತನಾಡಿ, ಶ್ರೀ ಅನ್ನದಾನೇಶ್ವರ ಸಂಸ್ಥಾನದಲ್ಲಿ ಶಿಕ್ಷಣ ಪಡೆಯುವುದು ಒಂದು ಅದೃಷ್ಟವೇ ಸರಿ. ಇಲ್ಲಿ ಶಿಕ್ಷಣದೊಂದಿಗೆ ಸಂಸ್ಕಾರ ನೀಡುವ ಕಾರ್ಯವಾಗುತ್ತಿದೆ ಎಂದರು.

ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಗವಿಸಿದ್ದಯ್ಯ ಹಳ್ಳಿಕೇರಿಮಠ ಅವರಿಂದ ಜಾನಪದ ಕಾರ್ಯಕ್ರಮ ಜರುಗಿತು. ನಿವೃತ್ತ ಪ್ರಾಚಾರ್ಯ

ಎಸ್. ಜಿ. ಹಿರೇಮಠ, ಉಪನ್ಯಾಸಕರಾದ ಎಲ್.ಎಚ್. ಮಾಸರಡ್ಡಿ. ಎ.ಜೆ. ಹಂಡಿ, ವಿದ್ಯಾಸಾಗರ, ಎಸ್.ವಿ. ಸವಣೂರ, ಸಿ.ಎಂ. ಹುಲ್ಲಂಬಿ ಎ.ವಿ. ರಡ್ಡೇರ, ಡಾ. ಕೃಷ್ಣ ಕಾಳೆ, ಎ.ಸಿ. ಮರಡಿಮಠ, ಸಂತೋಷ ಬಸರಿಗಿಡದ, ಕೊಟ್ರೇಶ ಅರವಟಗಿಮಠ, ಗೋಪಿ ಶಾಸ್ತ್ರಿ, ಪ್ರಕಾಶ ಇಲಕಲ್ಲ, ಸಂತೋಷ ಯರಂಗಳಿ, ಶಂಕರ ಜಕ್ಕಲಿ, ಸುಮಾ ಸರೂರ, ದೀಪಾ ದಾವಣಗೆರೆ, ಗೌರಮ್ಮ ಸಜ್ಜನ, ಪ್ರತಿಭಾ ರಾಟಿಮನಿ, ಚಂದ್ರಶೇಖರ ಸೋಮನಗೌಡ್ರ, ರಾಜು ಯಕ್ಕುಂಡಿ, ಗುರುಸಿದ್ಧಗೌಡ ಯಲ್ಲಪ್ಪಗೌಡ್ರ ಸೇರಿ ಹಳೆಯ ವಿದ್ಯಾರ್ಥಿಗಳು, ಕುಟುಂಬ ಸದಸ್ಯರು ಇದ್ದರು. ಚನ್ನಮ್ಮ ಹಿರೇಮಠ, ವಿಶ್ವನಾಥ ಕುಲಕರ್ಣಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಉಳಿದ 17 ಸಾವಿರ ರೂ. ಅನ್ನು ನೆಲೆ-ಜಲ ಸಂರಕ್ಷಣೆ ಸಮಿತಿಗೆ ನೀಡಲಾಯಿತು.