ಮಕ್ಕಳು ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಿ

ಶಿಡ್ಲಘಟ್ಟ:  ಬೌದ್ಧಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಾಯವಾಗುವ ಬೇಸಿಗೆ ಶಿಬಿರಗಳಲ್ಲಿ ಮಕ್ಕಳು ಪಾಲ್ಗೊಳ್ಳಲು ಪ್ರೋತ್ಸಾಹಿಸಬೇಕು ಎಂದು ನಗರ ಠಾಣೆ ಪಿಎಸ್​ಐ ಅವಿನಾಶ್​ವೀರ್ ಹೇಳಿದರು. ನಗರದ ನೆಹರು ಕ್ರೀಡಾಂಗಣದಲ್ಲಿ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಹಾಗೂ ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಉಚಿತ ಬೇಸಿಗೆ ಕ್ರೀಡಾ ತರಬೇತಿ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಳ್ಳುವ ಮಕ್ಕಳಲ್ಲಿ ಕ್ರಿಡಾಪಟುಗಳಿಗೆ ಅಗತ್ಯವಿರುವ ಶಿಸ್ತು ಹಾಗೂ ಆಸಕ್ತಿ ಹೆಚ್ಚಿಸುವ ಜತೆಗೆ ದೈಹಿಕ ಸಾಮರ್ಥ್ಯ ವೃದ್ಧಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯಪೂರ್ಣ ಮನಸ್ಸು ಮತ್ತು ಶರೀರ ಹೊಂದುವ ಅವಕಾಶವಿದೆ. ಹಾಗಾಗಿ ಎಲ್ಲರೂ ಶಿಬಿರದಲ್ಲಿ ಪಾಲ್ಗೊಂಡು ಉತ್ತಮ ಕ್ರೀಡಾಪಟುಗಳಾಗಿ ರೂಪುಗೊಳ್ಳಬೇಕು ಎಂದರು.

ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಮುನಿರಾಜು ಮಾತನಾಡಿ, ಸುಮಾರು 25 ದಿನಗಳ ಕಾಲ ಶಿಬಿರ ನಡೆಯಲಿದ್ದು, ಬೆಳಗ್ಗೆ 6ರಿಂದ 8 ರವರೆಗೆ ಮಕ್ಕಳಿಗೆ ಓಟ, ಚಕ್ರ ಎಸೆತ, ಗುಂಡು ಎಸೆತ, ಹಾಕಿ, ಕರಾಟೆ ಮತ್ತಿತರ ಕ್ರೀಡಾ ತರಬೇತಿ ನೀಡಲಾಗುವುದು ಎಂದರು.

ಶಿಬಿರದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಲಘು ಉಪಹಾರ ಸೇರಿ ಪೌಷ್ಟಿಕ ಆಹಾರ ನೀಡುವ ವ್ಯವಸ್ಥೆಯನ್ನು ಸಂಘದಿಂದ ಮಾಡಲಾಗುವುದು. ಎಲ್ಲೆಡೆ ಹಣಕ್ಕಾಗಿ ಬೇಸಿಗೆ ಶಿಬಿರ ನಡೆಸಿದರೆ ಇಲ್ಲಿ ಉಚಿತವಾಗಿ ಕ್ರೀಡಾ ತರಬೇತಿ ನೀಡುತ್ತಿದ್ದು, ಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಲಕ್ಷ್ಮೀಪತಿ, ಕರಾಟೆ ಶಿಕ್ಷಕ ಅರುಣ್​ಕುಮಾರ್, ನೃತ್ಯ ಕಲಾವಿದ ಮುನಿರಾಜು, ಪುರುಷೋತ್ತಮ ಮತ್ತಿತರರಿದ್ದರು.

Leave a Reply

Your email address will not be published. Required fields are marked *