ಶೃಂಗೇರಿ: ಪಟ್ಟಣದ ಮಾನಗಾರಿನಲ್ಲಿ ಸಂಸ್ಕೃತ ಭಾರತಿ ಮತ್ತು ಮೆಣಸೆ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಭಾನುವಾರ ವಿದ್ಯಾರ್ಥಿಗಳಿಗಾಗಿ ಸಾಪ್ತಾಹಿಕ ಸಂಸ್ಕೃತ ಬಾಲಕೇಂದ್ರದ ಉದ್ಘಾಟನೆ ನೆರವೇರಿತು.
ಕಾರ್ಯಕ್ರಮ ಉದ್ಘಾಟಿಸಿ ರಾಜೀವಗಾಂಧಿ ಪರಿಸರದ ಸಹನಿರ್ದೇಶಕ ಪ್ರೊ. ಚಂದ್ರಕಾಂತ ಭಟ್ ಮಾತನಾಡಿ, ದೇಶದ ಭವಿಷ್ಯವಾದ ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡುವುದು ನಮ್ಮ ಕರ್ತವ್ಯ. ಮಕ್ಕಳಿಗೆ ಅನೇಕ ವಿಷಯಗಳನ್ನು ಕಲಿಯುವ ಸಾಮರ್ಥ್ಯವಿರುತ್ತದೆ. ಬಾಲಕೇಂದ್ರದಲ್ಲಿ ಸಂಸ್ಕೃತ ಸಂಭಾಷಣೆ ಕಲಿಸಲಾಗುತ್ತದೆ. ಹಾಡು, ಭಜನೆ, ಸ್ತೋತ್ರ, ನಿತ್ಯಪಂಚಾಂಗ ಮುಂತಾದ ಸಂಸ್ಕಾರ, ಸಂಸ್ಕೃತಿಗಳಿಗೆ ಪೂರಕವಾದ ವಿಷಯಗಳನ್ನು ಬೋಧಿಸಲಾಗುವುದು ಎಂದರು.
ಸಂಸ್ಕೃತ ಬಾಲಕೇಂದ್ರವನ್ನು ನಡೆಸಲು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ಸಾಧ್ಯವಾಗುವ ಎಲ್ಲ ಸಹಾಯ ಮಾಡಲಾಗುವುದು. ಶೃಂಗೇರಿಯ ಇನ್ನೂ ಕೆಲವೆಡೆ ಇಂತಹ ಕೇಂದ್ರಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಸಂಸ್ಕೃತ ಭಾರತಿ ಜಿಲ್ಲಾಧ್ಯಕ್ಷ ಡಾ. ಮಹೇಶ ಕಾಕತ್ಕರ್ ಮಾತನಾಡಿ, ಎಲ್ಲಿ ಸಂಸ್ಕೃತಿ ಇರುತ್ತದೆಯೋ ಅಲ್ಲಿ ಸುಸಂಸ್ಕೃತ ವಾತಾವರಣ ನಾವು ಕಾಣಬಹುದು. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಂಸ್ಕಾರ ಬೆಳೆಸಿಕೊಂಡಾಗ ಸಮಾಜದ ಉನ್ನತೀಕರಣ ಸಾಧ್ಯ. ಹಾಗಾಗಿ ಬಾಲಕೇಂದ್ರ ವಿದ್ಯಾರ್ಥಿಗಳಿಗೆ ಸಂಸ್ಕಾರ, ಸಂಸ್ಕೃತಿ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಬಾಲಕೇಂದ್ರವನ್ನು ನಡೆಸಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಪಾಲಕರಿಗೆ ಸಂಸ್ಕೃತ ಸಂಭಾಷಣಾ ಶಿಬಿರ ನಡೆಸಲಾಗುವುದು. ಪಾಲಕರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು. ಕೇಂದ್ರದ ಶಿಕ್ಷಕಿ ವಿದ್ವತ್ಸೇನಾ ಅವರು ಪ್ರತಿ ಭಾನುವಾರ ಬೆಳಗ್ಗೆ 11 ರಿಂದ 12.30 ರವರೆಗೆ ಮಾನಗಾರಿನ ಮಹೇಶ ಕಾಕತ್ಕರ್ ಅವರ ಮನೆಯ ಮಹಡಿಯಲ್ಲಿ ಬಾಲಕೇಂದ್ರ ನಡೆಸಲಾಗುವುದು. 1ನೇ ತರಗತಿಯಿಂದ 7ನೇ ತರಗತಿವರೆಗಿನ ಮಕ್ಕಳು ಬಾಲಕೇಂದ್ರದಲ್ಲಿ ಪ್ರವೇಶ ಪಡೆಯಬಹುದು. ಪಾಲಕರು ಅಪೇಕ್ಷೆಪಟ್ಟಲ್ಲಿ ಶೃಂಗೇರಿಯ ಬೇರೆ ಬೇರೆ ಸ್ಥಳಗಳಲ್ಲಿಯೂ ಇಂತಹ ಕೇಂದ್ರಗಳನ್ನು ನಡೆಸಲು ಉದ್ದೇಶಿಸಲಾಗಿದೆ. ವಿವರಕ್ಕೆ ಮೊ: 9448953539 ಸಂಪರ್ಕಿಸಬಹುದು ಎಂದು ತಿಳಿಸಿದರು.
ಮಕ್ಕಳಿಗೆ ಸಂಸ್ಕಾರ ನೀಡುವುದು ಎಲ್ಲರ ಕರ್ತವ್ಯ
ಭಾರತದ ನೋಟಿನಲ್ಲಿರುವ ಮಹಾತ್ಮ ಗಾಂಧಿಜಿ ಅವರ ಫೋಟೋ ಕ್ಲಿಕ್ಕಿಸಿದ್ದು ಯಾವಾಗ & ಎಲ್ಲಿ?; ಇಲ್ಲಿದೆ ಸಂಪೂರ್ಣ ಮಾಹಿತಿ | Information
ಭಾರತದ ನೋಟಿನಲ್ಲಿ ಮಹಾತ್ಮ ಗಾಂಧಿ ಅವರ ಫೋಟೋವನ್ನು ನೀವು ನೋಡಿರಬಹುದು. ಆದರೆ ನೋಟಿನ ಮೇಲೆ ನಗುತ್ತಿರುವ…
ಇಬ್ಬನಿಯಿಂದ ಚಳಿಗಾಲದಲ್ಲಿ ತುಳಸಿ ಗಿಡ ಹಾಳಾಗುತ್ತಿದೆಯೇ?; ಆರೈಕೆಗಾಗಿ ಇಲ್ಲಿದೆ ಸಿಂಪಲ್ ಟ್ರಿಕ್ | Health Tips
ತುಳಸಿಯು ಔಷಧೀಯ ಸಸ್ಯವಾಗಿರುವುದರ ಜತೆಗೆ ಧಾರ್ಮಿಕ ನಂಬಿಕೆಗಳನ್ನೂ ಹೊಂದಿದೆ. ಈ ಸಸ್ಯವನ್ನು ಹಿಂದೂ ಧರ್ಮದಲ್ಲಿ ಅತ್ಯಂತ…
ಬಿಪಿ ಹೆಚ್ಚಾಗಲು ಈ ಆಹಾರ ಪದಾರ್ಥಗಳು ಕಾರಣವೇ; ತಜ್ಞರು ಹೇಳಿದ್ದೇನು? | Health Tips
ನೂಡಲ್ಸ್, ಪಾಪಡ್, ಉಪ್ಪಿನಕಾಯಿ, ಸಾಸ್ ಮತ್ತು ನಮ್ಕೀನ್ ಬಹುತೇಕ ಈ ಎಲ್ಲಾ ಆಹಾರ ಪದಾರ್ಥಗಳು ಪ್ರತಿಯೊಬ್ಬರ…