ಮುಧೋಳ: ನಮ್ಮ ಸಮಾಜ ಸಣ್ಣದಿದೆ ಎಂಬ ಮನೋಭಾವದಿಂದ ಹೊರಬಂದು ಮೊದಲು ನಾವೆಲ್ಲರೂ ನಮ್ಮ ಮಕ್ಕಳಿಗೆ ಉತ್ತಮ ಸಂಪ್ರದಾಯ, ಸಂಸ್ಕೃತಿ, ಸಂಸ್ಕಾರಯುತ ಶಿಕ್ಷಣ ನೀಡಬೇಕು. ಲಿಂಗ, ರುದ್ರಾಕ್ಷಿ ಧರಿಸುವ ಶರಣರ ಮಾರ್ಗದಲ್ಲಿ ನಡೆಯಬೇಕು ಎಂದು ಬೆಳಗಲಿಯ ಶ್ರೀ ಶಿವಯೋಗಿ ಸಿದ್ದರಾಮ ದೇವರು ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಸಮುದಾಯ ಭವನದಲ್ಲಿ ಮುಧೋಳ ತಾಲೂಕು ಶ್ರೀ ಮಡಿವಾಳ ಮಾಚಿದೇವರ ಗ್ರಾಮೀಣಾಭಿವೃದ್ಧಿ ಸಂಘದ ಸಹಯೋಗದಲ್ಲಿ ಕುಲಗುರು ಮಡಿವಾಳ ಮಾಚಿದೇವರ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕು ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕಲ್ಲಪ್ಪ ಪರೀಟ್ ಮಾತನಾಡಿ, ಮಡಿವಾಳ ಸಮಾಜವನ್ನು ಸಂಘಟನೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಸಚಿವ ಆರ್.ಬಿ. ತಿಮ್ಮಾಪೂರ ಸಹ ಜಾಗ ನೀಡಿ ಸಮುದಾಯ ಭವನ ನಿರ್ಮಿಸುವ ಭರವಸೆ ನೀಡಿದ್ದಾರೆ. ಮುಂಬರುವ ದಿನದಲ್ಲಿ ಮಾಚಿದೇವರ ಜನ್ಮ ದಿನಾಚರಣೆಯನ್ನು ಅದೇ ಸಮುದಾಯ ಭವನದಲ್ಲಿ ಆಚರಿಸುವಂತಾಗಲಿ ಎಂದರು.
ಉಪನ್ಯಾಸಕ ವೈ.ಡಿ. ನವಲಗುಂದ ಮಾತನಾಡಿದರು. ಕಾಂಗ್ರೆಸ್ ಮುಖಂಡ ಶಂಕರ ತಿಮ್ಮಾಪೂರ, ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಉಪಾಧ್ಯಕ್ಷ ಮೈಬೂಬ ಬಾಗವಾನ, ಮುಖಂಡರಾದ ಸಾಯಬಣ್ಣ ಮಡಿವಾಳ, ಗಜಾನನ ಪರೀಟ, ಹಣಮಂತ ಮಡಿವಾಳ, ಶಿವಾನಂದ ಮಡಿವಾಳರ, ರಂಗಪ್ಪ ಪರೀಟ, ಶಿವಪ್ಪ ಪರೀಟ, ಶ್ರೀಶೈಲಪ್ಪ ಪರೀಟ, ಹೊಳಬಸಪ್ಪ ಅಗಸರ, ಪಿಕೆಪಿಎಸ್ ಸಿಇಒ ಯಲ್ಲಪ್ಪ ಅಗಸರ, ಈರಪ್ಪ ಮಡಿವಾಳರ, ಪತ್ರಕರ್ತ ಎಂ.ಎಚ್. ನದ್ಾ, ವೆಂಕಟೇಶ ಗುಡೆಪ್ಪನವರ, ಮೈಲಾರಿ ಮಡಿವಾಳರ, ಬಸವರಾಜ ಪರೀಟ, ಹೆಸ್ಕಾಂ ಎಇ ಮೇಘರಾಜ ಮಡಿವಾಳ, ಶಿಕ್ಷಕ ಮಂಜುನಾಥ ಪರೀಟ, ಶಿವಪ್ಪ ಪರೀಟ, ಗಂಗಮ್ಮ ಅಗಸರ, ಪಾರ್ವತಿ ಪರೀಟ, ಮಹಾದೇವಪ್ಪ ಪರೀಟ, ಮಲ್ಲಿಕಾರ್ಜುನ ಪರೀಟ ಇತರರು ಇದ್ದರು.
ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ರಂಗದ ಸಾಧಕರನ್ನು ಸನ್ಮಾನಿಸಲಾಯಿತು.