Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಮಕ್ಕಳಿಗೆ ನೀಡುವ ಮಾತ್ರೆ ತಿಪ್ಪೆ ಪಾಲು

Thursday, 14.06.2018, 3:40 AM       No Comments

ಮಕ್ಕಳಲ್ಲಿ ಕಂಡುಬರುವ ರಕ್ತಹೀನತೆ ನಿಯಂತ್ರಿಸಲು ನೀಡಿದ್ದ ಕಬ್ಬಿಣಾಂಶದ ಮಾತ್ರೆಗಳನ್ನು ಶಾಲೆ ಸಿಬ್ಬಂದಿ ತಿಪ್ಪೆಗೆ ಎಸೆದಿದ್ದಾರೆ.ನಗರದ ಪಿಎಲ್​ಡಿ ಬ್ಯಾಂಕ್ ಮುಂಭಾಗ ವಾಹನ ನಿಲ್ದಾಣದ ಬಳಿಯಿರುವ ತ್ಯಾಜ್ಯದ ಗುಡ್ಡೆಯ ಬಳಿ ಬುಧವಾರ ನೂರಾರು ಮಾತ್ರೆ ಬಾಕ್ಸ್ ಪತ್ತೆಯಾಗಿವೆ. 2016ರಕ್ಕೂ ಮುಂಚೆಯೇ ವಿತರಿಸಬೇಕಿದ್ದ ಮಾತ್ರೆಗಳನ್ನು ಮಕ್ಕಳಿಗೆ ನೀಡದ ಕಾರಣ ಅವಧಿ ಮುಗಿದಿದ್ದು, ಶಾಲೆಯಲ್ಲಿ ಉಳಿದಿದ್ದ ಮಾತ್ರೆಗಳನ್ನು ತಿಪ್ಪೆಗೆ ಎಸೆಯಲಾಗಿದೆ.

ಮಾರುಕಟ್ಟೆಯಲ್ಲಿ ಮಾತ್ರೆ ಒಂದಕ್ಕೆ ಎರಡು ರೂ.ಗಳಿದ್ದು ಸರ್ಕಾರ ಲಕ್ಷಾಂತರ ರೂಪಾಯಿ ವ್ಯಯಿಸಿ ಮಕ್ಕಳ ರಕ್ತಹೀನತೆ ನಿಯಂತ್ರಿಸಲು ವಿತರಿಸಿದರೆ ಅಧಿಕಾರಿಗಳು ಮತ್ತು ಶಿಕ್ಷಕರ ನಿರ್ಲಕ್ಷ್ಯದಿಂದ ಸಾವಿರಾರು ರೂ. ಮೌಲ್ಯದ ಮಾತ್ರೆಗಳು ಹಾಳಾಗಿವೆ.

 

ಮಕ್ಕಳಿಗೆ ವಿತರಿಸಬೇಕಾದ ಮಾತ್ರೆಗಳನ್ನು ಎಸೆದಿರುವ ಕುರಿತು ಮಾಹಿತಿ ಬಂದಿದೆ. ಈ ಬಗ್ಗೆ ಪರಿಶೀಲಿಸಲಾಗುವುದು. ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು.

| ಆರ್.ರಂಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ, ದೊಡ್ಡಬಳ್ಳಾಪುರ

ಮಕ್ಕಳಿಗೆ ನೀಡಬೇಕಾದ ಸಾವಿರಾರು ಮೌಲ್ಯದ ಮಾತ್ರೆಗಳನ್ನು ವಿತರಿಸದೆ ಅವೈಜ್ಞಾನಿಕವಾಗಿ ತಿಪ್ಪೆಗೆ ಎಸೆದಿರುವುದು ಖಂಡನೀಯ. ಈ ಕುರಿತು ಅಧಿಕಾರಿಗಳು ಕಠಿಣ ಕ್ರಮಕೈಗೊಳ್ಳಬೇಕು.

| ಕೆ.ಜಗನಾಥ್, ದೊಡ್ಡಬಳ್ಳಾಪುರ

Leave a Reply

Your email address will not be published. Required fields are marked *

Back To Top